Women Health: ನಿಮ್ಮ ಮಗು ಆರೋಗ್ಯವಾಗಿ ಮತ್ತು ಚುರುಕಾಗಿ ಬೆಳೆಯಲು ಗರ್ಭಿಣಿಯರಿಗಾಗಿ ಕೆಲವೊಂದಿಷ್ಟು ಟಿಪ್ಸ್​ಗಳು

ಗರ್ಭಾವಸ್ಥೆಯಲ್ಲಿ ಮಗುವನ್ನು ತಾಯಿ ಎಷ್ಟು ಹೆಚ್ಚು ಕಾಳಜಿ ಮಾಡುತ್ತಾಳೊ ಹಾಗೆಯೇ ಮಗು ಬೆಳವಣಿಗೆ ಹೊಂದುತ್ತದೆ. ಹೀಗಿರುವಾಗ ಗರ್ಭಿಣಿಯರು ತಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಗಮನವಹಿಸಬೇಕು.

Women Health: ನಿಮ್ಮ ಮಗು ಆರೋಗ್ಯವಾಗಿ ಮತ್ತು ಚುರುಕಾಗಿ ಬೆಳೆಯಲು ಗರ್ಭಿಣಿಯರಿಗಾಗಿ ಕೆಲವೊಂದಿಷ್ಟು ಟಿಪ್ಸ್​ಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Aug 27, 2021 | 7:25 AM

ಗರ್ಭಾವಸ್ಥೆಯಲ್ಲಿ ಮಹಿಳೆ ಮಗುವಿನ ಎಲ್ಲಾ ಚಲನವಲನಗಳನ್ನು ಅನುಭವಿಸುತ್ತಾಳೆ. ಇಂತಹ ಸಮಯದಲ್ಲಿ ಆಕೆಯು ತನ್ನ ಮಗುವಿನೊಂದಿಗೆ ಒಂದು ಸುಂದರ ಸಂಬಂಧವನ್ನು ಪಡೆಯುತ್ತಾಳೆ. ಪ್ರತಿಯೊಬ್ಬ ಮಹಿಳೆಗೂ ಕೂಡಾ ತನ್ನ ಮಗು ಆರೋಗ್ಯಕರ ಮತ್ತು ಬುದ್ಧಿವಂತನಾಗಿ ಜನಿಸಲಿ ಎಂಬ ಆಸೆ ಇರುತ್ತದೆ. ಹೀಗಿರುವಾಗ ಗರ್ಭಿಣಿಯರು ಕೆಲವೊಂದಿಷ್ಟು ವಿಷಯಗಳನ್ನು ತಿಳಿಯಲೇಬೇಕು.

ಗರ್ಭಾವಸ್ಥೆಯಲ್ಲಿ ಮಗುವನ್ನು ತಾಯಿ ಎಷ್ಟು ಹೆಚ್ಚು ಕಾಳಜಿ ಮಾಡುತ್ತಾಳೊ ಹಾಗೆಯೇ ಮಗು ಬೆಳವಣಿಗೆ ಹೊಂದುತ್ತದೆ. ಹೀಗಿರುವಾಗ ಗರ್ಭಿಣಿಯರು ತಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಗಮನವಹಿಸಬೇಕು. ಜತೆಗೆ ಮಗು ಆರೋಗ್ಯಕರವಾಗಿ ಮತ್ತು ಚುರುಕಾಗಿ ಬೆಳೆಯಲು ಈ ಕೆಲವು ವಿಷಯಗಳನ್ನು ತಿಳಿಯಿರಿ.

ಗರ್ಭಾವಸ್ಥೆಯಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ಸರಿಯಾದ ಆಹಾರ. ಗರ್ಭಾವಸ್ಥೆಯಲ್ಲಿ ತಾಯಿ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಬೇಕು. ಮಗುವಿನ ಸರಿಯಾದ ಬೆಳವಣಿಗೆಗೆ ಒಮೆಗಾ 3 ಕೊಬ್ಬಿನಾಮ್ಲಗಳನ್ನು ಒಳಗೊಂಡಿರುವ ಆಹಾರವನ್ನು ಸೇವಿಸಿ. ಮಾಂಸಹಾರಿಗಳಾಗಿದ್ದರೆ ಮೀನು ಸೇವಿಸಬಹುದು. ಇಲ್ಲವೇ ಬಾದಾಮಿ, ಅಗಸೆಬೀಜದಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಸಿಗುತ್ತವೆ.

ಯೋಗ ಮಾಡುವುದು ತಾಯಿ ಮತ್ತು ಮಗುವಿನ ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು. ಆದರೆ ಯಾವುದೇ ಯೋಗಾಸನವನ್ನು ಮಾಡುವ ಮೊದಲು ವೈದ್ಯರಲ್ಲಿ ಸಲಹೆ ಪಡೆದುಕೊಳ್ಳುವುದು ಉತ್ತಮ. ಬಳಿಕ ವೈದ್ಯರು ಸೂಚಿಸಿರುವ ವ್ಯಾಯಾಮ ಪ್ರಕ್ರಿಯೆಯನ್ನು ಮುಂದುವರೆಸಿ.

ಮಗುವಿನ ಕಲಿಕೆಯು ತಾಯಿಯ ಗರ್ಭದಿಂದಲೇ ಆರಂಭವಾಗುತ್ತದೆ. ಗರ್ಭಾವಸ್ಥೆಯಲ್ಲಿ ತಾಯಿ ಮೆದುಳಿನ ಚಟುವಟಿಕೆಯನ್ನು ಮಾಡಬೇಕು. ಇದರಿಂದ ಮಗುವಿನ ಮನಸ್ಸು ಕೂಡಾ ತೀಕ್ಷ್ಣವಾಗುತ್ತದೆ. ಹಾಗೆಯೇ ತಾಯಿ ಒಳ್ಳೆಯ ಪುಸ್ತಕಗಳನ್ನು ಮತ್ತು ಕತೆಗಳನ್ನು ಓದುವುದು ಒಳ್ಳೆಯದು. ಬರೆಯುವ ಉತ್ಸಾಹವಿದ್ದರೆ ಗರ್ಭಾವಸ್ಥೆಯಲ್ಲಿ ಕಥೆ, ಕಾದಂಬರಿ, ಕವನಗಳನ್ನು ಬರೆಯಿರಿ. ಇದು ನಿಮ್ಮ ಹಾಗೂ ಮಗುವಿನ ಮನಸ್ಥಿತಿಯನ್ನು ಸುಧಾರಿಸುತ್ತದೆ.

ಸಾಧ್ಯವಾದಷ್ಟು ಒತ್ತಡದಿಂದ ದೂರವಿರಿ. ಒತ್ತಡವು ನಿಮ್ಮ ಮಗುವಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ನಿಮಗೆ ಖುಷಿ ಕೊಡುವ ಕೆಲಸಗಳನ್ನು ಮಾಡಿ. ಸಾಕಷ್ಟು ನಿದ್ರೆ ಮತ್ತು ವಿಶ್ರಾಂತಿ ಪಡೆಯಿರಿ.

ಇದನ್ನೂ ಓದಿ:

Women Health: ಗರ್ಭಪಾತಕ್ಕೆ ಕಾರಣಗಳೇನು? ಈ ಅಂಶಗಳನ್ನು ಮಹಿಳೆಯರು ತಿಳಿದಿರುವುದು ಒಳಿತು

Women Health: ಯುವತಿಯರಿಗಾಗಿಯೇ ಕೆಲವೊಂದಿಷ್ಟು ಟಿಪ್ಸ್​; ಹೊಟ್ಟೆಯ ಬೊಜ್ಜು ಕರಗಿಸಲು ಇಲ್ಲಿದೆ ಸುಲಭ ವಿಧಾನಗಳು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ