AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pizza Recipe: ಪಿಜ್ಜಾದಲ್ಲಿನ ಕ್ಯಾಲೋರಿಗಳ ಬಗ್ಗೆ ಚಿಂತೆಯೇ? ಈ ಆರೋಗ್ಯಕರ ಪಿಜ್ಜಾ ರೆಸಿಪಿ ಪ್ರಯತ್ನಿಸಿ

ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚಿನ ಪ್ರೋಟೀನ್ ಅಂಶವನ್ನು ಹೊಂದಿರುವ ಆರೋಗ್ಯಕರ ಸಸ್ಯಾಹಾರಿ ಪಿಜ್ಜಾದ ರೆಸಿಪಿಯನ್ನು ಪ್ರಖ್ಯಾತ ಶೆಫ್ ಮೇಘನಾ ಕಾಮ್ದಾರ್ ಅವರು ಹಂಚಿಕೊಂಡಿದ್ದಾರೆ.

Pizza Recipe: ಪಿಜ್ಜಾದಲ್ಲಿನ ಕ್ಯಾಲೋರಿಗಳ ಬಗ್ಗೆ ಚಿಂತೆಯೇ? ಈ ಆರೋಗ್ಯಕರ ಪಿಜ್ಜಾ ರೆಸಿಪಿ ಪ್ರಯತ್ನಿಸಿ
Homemade PizzaImage Credit source: Taste of Home
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Nov 06, 2022 | 10:52 AM

ಪಿಜ್ಜಾ ಇಂದಿನ ಜೀವನಶೈಲಿಯಲ್ಲಿ ಒಂದು ಫೇವರೇಟ್ ಫುಡ್ ಆಗಿಬಿಟ್ಟಿದೆ. ಆರ್ಡರ್ ಮಾಡಿದ ಕೆಲವೇ ಕ್ಷಣದಲ್ಲಿ ಮನೆ ಬಾಗಿಲಿಗೆ ತಲುಪುವುದ್ದರಿಂದ ಬ್ಯೂಸಿ ಲೈಫ್ ನಲ್ಲಿ ಇದರತ್ತ ಒಲವು ತೋರಿಸುವುದು  ಸಹಜ. ಆದರೆ ಇಂತಹ ಆಹಾರಗಳು ದೇಹಕ್ಕೆ ಎಷ್ಟು ಸೂಕ್ತ ಎಂಬುದು ಗಮನಿಸಬೇಕಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೊರಿ ಇರುವುದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಜೊತೆಗೆ ದೇಹದ ತೂಕ ಹೆಚ್ಚಾಗಲು ಪ್ರಮುಖ ಕಾರಣವಾಗುತ್ತದೆ.

ಆದ್ದರಿಂದ, ನೀವು ಪಿಜ್ಜಾವನ್ನು ಶಾಶ್ವತವಾಗಿ ಬಿಡಬೇಕೇ? ನಿಜವಾಗಿಯೂ ಅಲ್ಲ . ನಿಮ್ಮ ಗೊಂದಲಗಳಿಗೆ ಇಲ್ಲಿದೆ ಪರಿಹಾರ. ಆದ್ದರಿಂದ ಮನೆಯಲ್ಲೇ ಆರೋಗ್ಯಕರ ರುಚಿಕರ ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚಿನ ಪ್ರೋಟೀನ್ ಅಂಶವನ್ನು ಹೊಂದಿರುವ ಈ ಪಿಜ್ಜಾ ರೆಸಿಪಿಯನ್ನೊಮ್ಮೆ ಪ್ರಯತ್ನಿಸಿ ನೋಡಿ.

ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚಿನ ಪ್ರೋಟೀನ್ ಅಂಶವನ್ನು ಹೊಂದಿರುವ ಆರೋಗ್ಯಕರ ಸಸ್ಯಾಹಾರಿ ಪಿಜ್ಜಾದ ರೆಸಿಪಿಯನ್ನು ಪ್ರಖ್ಯಾತ ಶೆಫ್ ಮೇಘನಾ ಕಾಮ್ದಾರ್ ಅವರು ಹಂಚಿಕೊಂಡಿದ್ದಾರೆ.

ಬೇಕಾಗುವ ಪದಾರ್ಥಗಳು:

  • 1 ಕಪ್ ಉದ್ದಿನ ಬೇಳೆ, (3-4 ಗಂಟೆಗಳ ಕಾಲ ನೆನೆಸಿದ)
  •  2 ಹಸಿರು ಮೆಣಸಿನಕಾಯಿಗಳು
  • ರುಚಿಗೆ ತಕ್ಕಂತೆ ಉಪ್ಪು
  • 2 ಚಮಚ ಎಣ್ಣೆ
  •  2 ಸಣ್ಣದಾಗಿ ಕೊಚ್ಚಿದ ಬೆಳ್ಳುಳ್ಳಿ ಎಸಳು
  • ಟೊಮೇಟೊ ಪ್ಯೂರಿ (5-6 ಟೊಮೇಟೊಗಳನ್ನು ಸಿಪ್ಪೆ ಸುಲಿದ ಮತ್ತು ಮಿಕ್ಸರ್‌ನಲ್ಲಿ ರುಬ್ಬಿ)
  • 1/2 ಚಮಚ ಚಿಲ್ಲಿ ಫ್ಲೇಕ್ಸ್
  • 1 ಚಮಚ ಟೊಮೆಟೊ ಕೆಚಪ್
  • 1 ಚಮಚ ಫ್ರೂಟಿ ಸಾಲ್ಟ್
  • ಸಣ್ಣದಾಗಿ ಕೊಚ್ಚಿದ ಈರುಳ್ಳಿ ಮತ್ತು ಕ್ಯಾಪ್ಸಿಕಂ
  • ಬೇಯಿಸಿದ ಸ್ವೀಟ್ ಕಾರ್ನ್
  • ಪಿಜ್ಜಾ ಮಸಾಲೆಗಳು
  •  ತುರಿದ ಚೀಸ್

ಮಾಡುವ ವಿಧಾನ:

  • ಮಿಕ್ಸರ್ ಜಾರ್‌ನಲ್ಲಿ, 3-4 ಗಂಟೆಗಳ ಕಾಲ ನೆನೆಸಿದ ಉದ್ದಿನ ಬೇಳೆ ತೆಗೆದುಕೊಂಡು ಹಸಿರು ಮೆಣಸಿನಕಾಯಿ, ರುಚಿಗೆ ಉಪ್ಪು ಸೇರಿಸಿ ಮತ್ತು ನುಣ್ಣಗೆ ಹಿಟ್ಟು ಮಾಡಿ.
  • ನಂತರ ಈ ಹಿಟ್ಟನ್ನು ಮಿಕ್ಸಿಂಗ್ ಬೌಲ್‌ಗೆ ವರ್ಗಾಯಿಸಿ.
  • ಈಗ, ಪಿಜ್ಜಾ ಮಾಡಲು ಪ್ಯಾನ್ ಅನ್ನು ಬೆಂಕಿ ಮೇಲೆ ಇರಿಸಿ.
  • ಎಣ್ಣೆ ಸುರಿಯಿರಿ ಮತ್ತು ಸಣ್ಣದಾಗಿ ಕೊಚ್ಚಿದ ಬೆಳ್ಳುಳ್ಳಿ ಎಸಳು, ಟೊಮೆಟೊ ಪ್ಯೂರಿ, ಮಸಾಲೆಗಳು, ಚಿಲ್ಲಿ ಫ್ಲೇಕ್ಸ್, ಟೊಮೆಟೊ ಕೆಚಪ್, ಉಪ್ಪು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
  • ಈಗ, ಪ್ಯಾನ್ ಅನ್ನು ಮುಚ್ಚಳದಿಂದ ಮುಚ್ಚಿ ಮತ್ತು ಮಧ್ಯಮ ಉರಿಯಲ್ಲಿ 7-8 ನಿಮಿಷ ಬೇಯಿಸಿ.
  • ಮುಂದೆ ತ್ವರಿತವಾಗಿ ಮೂಂಗ್ಲೆಟ್ ತಯಾರಿಸಲು ಪ್ರಾರಂಭಿಸೋಣ.
  • ಪ್ಯಾನ್ ಅನ್ನು ಬಿಸಿ ಮಾಡಿ, 1/2 ಚಮಚ ಎಣ್ಣೆಯನ್ನು ಸೇರಿಸಿ ಮತ್ತು ಅದನ್ನು ಚೆನ್ನಾಗಿ ಹರಡಿ.
  • ಹಿಟ್ಟನ್ನು ಸುರಿಯಿರಿ ಮತ್ತು ಸುತ್ತಲೂ ಹರಡಿ.
  • ಅದರ ಮೇಲೆ ಸ್ವಲ್ಪ ಎಣ್ಣೆ ಸವರಿ.
  • ಬೇಯಿಸಿದ ನಂತರ, ಪಿಜ್ಜಾವನ್ನು ತಿರುಗಿಸಿ ಮತ್ತು ಅದರ ಮೇಲೆ ಪಿಜ್ಜಾ ಪ್ಯೂರಿಯನ್ನು ಹರಡಿ.
  • ಈಗ ಸ್ವಲ್ಪ ಸಣ್ಣಗೆ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ ಮತ್ತು ಬೇಯಿಸಿದ ಸ್ವೀಟ್‌ಕಾರ್ನ್ ಸೇರಿಸಿ.
  • ಪಿಜ್ಜಾ ಮಸಾಲೆಗಳನ್ನು ಹಾಕಿ ಮತ್ತು ತುರಿದ ಚೀಸ್ ಸೇರಿಸಿ.
  • ಚೀಸ್ ಕರಗುವವರೆಗೆ ಮತ್ತು ತಳವು ಸ್ವಲ್ಪ ಗರಿಗರಿಯಾಗುವವರೆಗೆ ಮುಚ್ಚಳವನ್ನು ಮುಚ್ಚಿಡಿ.
  • ನಂತರ ಒಂದು ಸರ್ವಿಂಗ್ ಪ್ಲೇಟ್‌ನಲ್ಲಿ ತೆಗೆದುಕೊಳ್ಳಿ ಹಾಗೂ ತ್ರಿಕೋನ ಆಕೃತಿಯಲ್ಲಿ ಕತ್ತರಿಸಿ ಹಾಗೂ ನಿಮ್ಮ ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಆರೋಗ್ಯಕರ ರುಚಿಕರವಾದ ಮೂಂಗ್ಲೆಟ್ ಪಿಜ್ಜಾವನ್ನು ಆನಂದಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: