‘ಯಾರು ಮುದ್ದಾಗಿದ್ದಾರೆ?’ ನಾಗಾಲ್ಯಾಂಡಿನ ಸಚಿವರು ಕೇಳುತ್ತಿದ್ದಾರೆ
Temjen Imna Along : ನೀವಿಬ್ಬರೂ ಮುದ್ದು. ನಿಮ್ಮ ಕೆನ್ನೆಗಳನ್ನು ಖಂಡಿತ ಒಮ್ಮೆ ಎಳೆದು ನೋಡಬೇಕು ಎಂದಿದ್ದಾರೆ ಒಬ್ಬರು. ನಾಗಾಲ್ಯಾಂಡಿನ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿವೇತನ ಕೊಟ್ಟರೆ ನೀವು ಇನ್ನೂ ಚೆಂದ ಎಂದಿದ್ದಾರೆ ಒಬ್ಬ ವಿದ್ಯಾರ್ಥಿ
Viral Video : ನಾಗಾಲ್ಯಾಂಡಿನ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಮತ್ತೀಗ ಹೊಸ ಟ್ವೀಟ್ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಆಗಾಗ ಇವರು ತಮ್ಮ ಪೋಸ್ಟ್ಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತ ತಮಾಷೆಯಾಗಿ ಹರಟುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ನಾಗಾಲ್ಯಾಂಡ್ನಲ್ಲಿ ಸಸ್ಯಾಹಾರ ಸಿಗುತ್ತದೆಯಾ? ಎಂದು ನೆಟ್ಟಿಗರೊಬ್ಬರು ಕೇಳಿದ್ದಕ್ಕೆ ನಾಗಾಲ್ಯಾಂಡ್ನ ತರಕಾರಿ, ಹಣ್ಣುಗಳನ್ನೆಲ್ಲಾ ಟ್ವಿಟರ್ ತುಂಬಾ ತಂದು ಸುರುವಿದ್ದರು! ಇದೀಗ ತಮ್ಮ ಮುದ್ದಿನ ನಾಯಿಮರಿಯೊಂದಿಗೆ ಫೋಟೋ ಟ್ವೀಟ್ ಮಾಡಿದ್ದಾರೆ. ನಮ್ಮಿಬ್ಬರಲ್ಲಿ ಯಾರು ಮುದ್ದಾಗಿದ್ದಾರೆ ಎಂಬ ಪ್ರಶ್ನೆ ಬೇರೆ ಕೇಳಿದ್ಧಾರೆ.
Who is cuter? pic.twitter.com/DG9VDJgv4o
ಇದನ್ನೂ ಓದಿ— Temjen Imna Along (@AlongImna) December 9, 2022
ಈತನಕ 13,000ದಷ್ಟು ಜನ ಈ ಫೋಟೋ ಇಷ್ಟಪಟ್ಟಿದ್ದಾರೆ. 300ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಸುಮಾರು 70 ಜನರು ರೀಕೋಟ್ ಮಾಡಿದ್ದಾರೆ. ಅನೇಕರು ಕೇಳಿದ ಪ್ರಶ್ನೆಗಳಿಗೆ ರೆಮ್ಜೆನ್ ಉತ್ತರಿಸಿದ್ದಾರೆ ಕೂಡ. ಬರೀ ಟ್ವೀಟ್ ಮಾಡಿ ಸುಮ್ಮನಿರುವುದಿಲ್ಲ ಈ ಸಚಿವರು. ಜನರು ಕೇಳಿದ ಪ್ರಶ್ನೆಗಳಿಗೂ ಉತ್ತಿರಿಸುತ್ತಿರುತ್ತಾರೆ.
ಇವನ ಹೆಸರೇನು? ಬಹಳ ಮುದ್ದಾಗಿ ಕಾಣುತ್ತಿದ್ದಾನೆ. ದಯವಿಟ್ಟು ಮೆಸೇಜ್ ಮಾಡಿ ಅವನಿಗೊಂದು ಊಟದ ಬಟ್ಟಲನ್ನು ಕಳಿಸಬೇಕಾಗಿದೆ ಎಂದಿದ್ದಾರೆ ಒಬ್ಬರು. ನೀವೂ ಮತ್ತು ನಿಮ್ಮ ಮರಿಯೂ ಇಬ್ಬರೂ ಮುದ್ದಾಗಿ ಕಾಣುತ್ತಿದ್ದೀರಾ. ನಿಮ್ಮ ಹೃದಯವು ಶುದ್ಧವಾದ ಪ್ರೀತಿಯಿಂದ ಕೂಡಿದೆ ಎಂದಿದ್ದಾರೆ ಮತ್ತೊಬ್ಬರು. ನಾಯಿಮರಿಗಿಂತ ನೀವೇ ಮುದ್ಧಾಗಿದ್ದೀರಿ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : ನಾಗಾಲ್ಯಾಂಡ್ನ ಸಾಂಪ್ರದಾಯಿಕ ನೃತ್ಯ ತಂಡದೊಂದಿಗೆ ಹೆಜ್ಜೆ ಹಾಕಿದ ಸಚಿವ ತೆಮ್ಜೆನ್ ಇಮ್ನಾ
ನಿಯಮಿತವಾಗಿ ನಾಯಿಮರಿಯ ಕಿಡ್ನಿ ಮತ್ತು ಶ್ವಾಸಕೋಶವನ್ನು ವೈದ್ಯರ ಬಳಿ ತಪಾಸಣೆ ಮಾಡಿಸುತ್ತಿರಿ. ನನ್ನ ನಾಯಿಮರಿಯ ಆರೋಗ್ಯವನ್ನು ಅಲಕ್ಷಿಸಿದ್ದರಿಂದ ಅದು ತೀರಿಹೋಯಿತು. ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ ಎಂದಿದ್ದಾರೆ ಮಗದೊಬ್ಬರು. ನೀವಿಬ್ಬರೂ ಚೆನ್ನಾಗಿ ಕಾಣುತ್ತಿದ್ದೀರಿ. ಆದರೆ ನಿಮ್ಮ ಕೆನ್ನೆಗಳನ್ನು ಒಮ್ಮೆ ಖಂಡಿತ ನಾನು ಎಳೆದು ನೋಡಬೇಕು, ಮುದ್ಧಾಗಿ ಕಾಣುತ್ತಿದ್ದೀರಿ ಸುಮೋ ಗೊಂಬೆ ನೀವು ಎಂದಿದ್ದಾರೆ ಇನ್ನೂ ಒಬ್ಬರು.
ಇದನ್ನೂ ಓದಿ : ನಾಗಾಲ್ಯಾಂಡ್ ಸಿಎಂ ಪುತ್ರಿಯ ಮದುವೆಯಲ್ಲಿ ಕುಣಿದ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್, ವಿಡಿಯೊ ವೈರಲ್
ನೀವಿಬ್ಬರೂ ಮುದ್ದಾಗಿ ಕಾಣುತ್ತಿದ್ದೀರಿ. ನಾಗಾಲ್ಯಾಂಡಿನ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿವೇತನ ಕೊಟ್ಟರೆ ಇನ್ನೂ ಮುದ್ದಾಗಿ ಕಾಣುತ್ತೀರಿ ಎಂದಿದ್ದಾರೆ ಒಬ್ಬ ವಿದ್ಯಾರ್ಥಿ. ಆಗಾಗ ನಾಗಾಲ್ಯಾಂಡಿಗೆ ಬರುತ್ತಿರುತ್ತೇನೆ, ಖಂಡಿತ ನಿಮ್ಮನ್ನೊಮ್ಮೆ ಭೇಟಿ ಮಾಡುತ್ತೇನೆ ಎಂದಿದ್ದಾರೆ ದಕ್ಷಿಣ ಭಾರತದ ವೈದ್ಯೆಯರೊಬ್ಬರು.
ಹೀಗೆ ಸಚಿವರು ತಮ್ಮ ಸಹೃದಯತೆ ಮತ್ತು ಸರಳತೆಯಿಂದ ನೆಟ್ಟಿಗರನ್ನು ತಮ್ಮ ವಿಚಾರ, ಫೋಟೋ, ಮಾಹಿತಿಯ ಮೂಲಕ ಹಿಡಿದಿಡುತ್ತಿರುತ್ತಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:27 pm, Fri, 9 December 22