ನಾಗಾಲ್ಯಾಂಡ್ನಲ್ಲಿ ಸಸ್ಯಾಹಾರ ಲಭ್ಯವೆ? ಟ್ವಿಟರ್ನಲ್ಲಿ ತರಕಾರಿಯನ್ನೆಲ್ಲ ತಂದುಸುರಿದ ಸಚಿವ
Veg Food in Nagaland : ನೋಡಿ ಇಲ್ಲಿ ಬೆಳೆದ ಸಾವಯವ ತರಕಾರಿ. ಆದರೂ ನಾವು ಫ್ರೆಂಚ್ ಫ್ರೈ ಹಿಂದೆ ಹೋಗುತ್ತೇವೆ ಎಂದಿದ್ದಾರೆ ನಾಗಾಲ್ಯಾಂಡ್ ಸಚಿವರು. ಅಣ್ಣಾ, ಅಲ್ಲಿಯೇ ಕಾಯಂ ಆಗಿ ನೆಲೆಗೊಳ್ಳುವ ಮಾರ್ಗ ಯಾವುದೆಂದು ತಿಳಿಸಿ ಎಂದಿದ್ದಾರೆ ನೆಟ್ಟಿಗರು.
Viral : ನಾಗಾಲ್ಯಾಂಡ್ನ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಸ್ಯಪ್ರವೃತ್ತಿಯಿಂದ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ನಾಗಾಲ್ಯಾಂಡ್ನಲ್ಲಿ ಸಸ್ಯಾಹಾರ ಲಭ್ಯವೇ ಎಂದು ಯಾರೋ ಕೇಳಿದ್ದಕ್ಕೆ ಅವರು ಕೊಟ್ಟ ತಾಜಾ ತಾಜಾ ಸಾಕ್ಷಿ ಹೇಗಿದೆ ನೋಡಿ! ಸೊಪ್ಪುಗಳು, ಸೋರೆಕಾಯಿ, ಅಣಬೆ, ಬದನೆಕಾಯಿ, ಎಳೆಬಿದಿರು, ಹಣ್ಣುಗಳು ಹೀಗೆ ಅಲ್ಲಿ ತರಕಾರಿ ಮಂಡಿಯನ್ನೇ ಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಇದನ್ನು ನೋಡಿ ಸುಸ್ತೋಸುಸ್ತು.
All these organic healthy veggies and still we choose French fries. ?
ಇದನ್ನೂ ಓದಿSee how those fresh veggies are inviting you to Nagaland.
???? ???
Isn’t it alluring enough?
P.S. Someone asking me whether they will get veg or not in Nagaland ? pic.twitter.com/Jw0twHi4SL
— Temjen Imna Along (@AlongImna) November 13, 2022
ತೆಮ್ಜೆನ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫಾಲೋವರ್ಗಳನ್ನ ಹೇಗೆ ಕಾಯ್ದುಕೊಳ್ಳಬೇಕು ಎನ್ನುವುದು ಚೆನ್ನಾಗಿ ತಿಳಿದಿದೆ. ನವೆಂಬರ್ 13ರಂದು ಇವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ. ನಿಮ್ಮ ನಾಗಾಲ್ಯಾಂಡ್ನಲ್ಲಿ ತರಕಾರಿ ಸಿಗುತ್ತದೆಯೆ ಎಂದು ಯಾರೋ ಕೇಳಿದ್ದಕ್ಕೆ ಅವರು ಹೀಗೆ ಟ್ವೀಟ್ ಮಾಡಿದ್ದಾರೆ, ‘ಇಷ್ಟೆಲ್ಲ ಸಾವಯವ ತರಕಾರಿ, ಹಣ್ಣು, ಸೊಪ್ಪುಗಳಿದ್ದಾಗಲೂ ನಾವು ಫ್ರೆಂಚ್ ಫ್ರೈಗೆ ಮಾರುಹೋಗುತ್ತೇವೆ. ನೋಡಿ ನಾಗಾಲ್ಯಾಂಡ್ನ ತರಕಾರಿ’ ಎಂದಿದ್ದಾರೆ.
ಅಬ್ಬಾ ಎಷ್ಟು ತಾಜಾತನದಿಂದ ಇದೆಲ್ಲವೂ ಕೂಡಿದೆ. ಅಷ್ಟೊಂದು ಚೆನ್ನಾಗಿ ಬಾಳೆ ಎಲೆ ಮೇಲೆ ಹರಡಿಕೊಂಡು ಸುತ್ತಿಕೊಂಡು ಇರುವ ಈ ಎಲ್ಲವನ್ನ ನೋಡುವುದೇ ಆನಂದ ಎಂದಿದ್ದಾರೆ ಒಬ್ಬರು. ಆಸೆಯಾಗುತ್ತಿದೆ ಇದೆಲ್ಲವನ್ನು ನೋಡುತ್ತಿದ್ದರೆ ಎಂದಿದ್ದಾರೆ ಇನ್ನೊಬ್ಬರು.
ಹೌದು! ಈ ತರಕಾರಿಗಳು ರೈತರಿಂದ ನೇರ ಮಾರಾಟ ಸ್ಥಳಕ್ಕೆ ಬಂದಂಥವು ಎಂದಿದ್ದಾರೆ ಮಗದೊಬ್ಬರು. ಅಣ್ಣಾ, ದಯವಿಟ್ಟು ಝೊಮ್ಯಾಟೋ ಮೂಲಕ ಆನ್ಲೈನ್ ಡೆಲಿವರಿ ಮಾಡಿ. ಇಂದು ಬೆಳೆದಿದ್ದನ್ನು ನಾಳೆ ಸಿಗುವಂತೆ ಮಾಡಿ ಎನ್ನುತ್ತಿದ್ದಾರೆ ಇನ್ನೊಬ್ಬರು. ಸರ್, ನಿಮ್ಮ ಊರಿಗೆ ಶಿಫ್ಟ್ ಆಗಲು ಏನು ಪ್ರೊಸೀಜರ್ ಇದೆ ಎಂದು ಕೇಳಿದ್ದಾರೆ ಇನ್ನೊಬ್ಬರು. ನಿಮ್ಮನ್ನು ನಾಗಾಲ್ಯಾಂಡ್ನಲ್ಲಿ ಎಲ್ಲಿ ಭೇಟಿ ಮಾಡಬೇಕು ಎಂದಿದ್ದಾರೆ ಯಾರೋ ಒಬ್ಬರು. ಇದೆಲ್ಲ ನೋಡಿ ಫ್ರೆಂಚ್ ಫ್ರೈಸ್ ಓಡಿ ಹೋಗುತ್ತದೆ ಎಂದಿದ್ದಾರೆ ಮಗದೊಬ್ಬರು.
ಏನೀಗ ನೀವು ನಾಗಾಲ್ಯಾಂಡ್ಗೆ ಹೋಗಬೇಕು ಎಂದುಕೊಳ್ಳುತ್ತಿದ್ದೀರೋ ಹೇಗೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ