ವಂದಿಪೆ ನಿನಗೇ ಗಣನಾಥ: ನಮಗೂ ಸ್ವಲ್ಪ ಬುದ್ಧಿ ಕೊಡೋ ಗಣೂಮಾಮಾ

Dog bows down : ನಿಮ್ಮನ್ನು ಮಕ್ಕಳಷ್ಟೇ ಅಲ್ಲ ಪ್ರಾಣಿಗಳೂ ಅನುಕರಿಸುತ್ತವೆ. ಕೋತಿಯೊಂದು ಮದ್ಯಪಾನ ಮಾಡುವುದನ್ನು ಕಲಿತಿದೆ. ಮೇಕೆಯೊಂದು ನಮಸ್ಕರಿಸುವುದ ಕಲಿತಿದೆ. ಈಗ ಈ ನಾಯಿಯೂ ನಮಸ್ಕರಿಸುವುದನ್ನು ರೂಢಿಸಿಕೊಂಡಿದೆ.

ವಂದಿಪೆ ನಿನಗೇ ಗಣನಾಥ: ನಮಗೂ ಸ್ವಲ್ಪ ಬುದ್ಧಿ ಕೊಡೋ ಗಣೂಮಾಮಾ
Dog bows down, pays respect to Lord Ganesha outside temple
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 15, 2022 | 4:02 PM

Viral Video : ಶಿವಮಂದಿರದಲ್ಲಿ ಮೇಕೆಯೊಂದು ಮೊಣಕಾಲೂರಿ ನಮಸ್ಕರಿಸುವ ವಿಡಿಯೋ ನೋಡಿದ್ದೀರಿ. ನಾಯಿಯೊಂದು ದೇವಸ್ಥಾನದ ಘಂಟೆ ಬಾರಿಸುವುದನ್ನು ನೋಡಿದ್ದೀರಿ. ತನ್ನ ಪೋಷಕ ಕಾಲುಮುರಿದುಕೊಂಡು ಕುಂಟುತ್ತಿರುವಾಗ ಅವನಿಗೆ ಸಾಥ್​ ಕೊಡಲು ತಾನೂ ಕುಂಟುತ್ತಿದ್ದ ನಾಯಿಯ ವಿಡಿಯೋ ನೋಡಿದ್ದೀರಿ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ನಾಯಿಯು ತನ್ನ ಪೋಷಕನೊಂದಿಗೆ ದೇವಸ್ಥಾನಕ್ಕೆ ಹೋಗಿದೆ. ಅಲ್ಲಿ ತಲೆಬಾಗಿ ಗಣೇಶನಿಗೆ ನಮಸ್ಕರಿಸಿದೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Pure thrift (@thrifts_grace)

1 ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ದಾರಿಹೋಕರೊಬ್ಬರು ಈ ಅಪರೂಪದ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್​ಲೋಡ್ ಮಾಡಿದ್ದಾರೆ. ಆದರೆ ಇದು ಯಾವ ಊರಲ್ಲಿ ನಡೆದಿದೆ ಎಂಬ ಮಾಹಿತಿ ಇಲ್ಲ. ನೆಟ್ಟಿಗರು ಇದು ಪುಣೆಯಲ್ಲಿರುವ ಗಣೇಶ ದೇವಸ್ಥಾನ. ಈ ವಿಡಿಯೋದಲ್ಲಿರುವ ವ್ಯಕ್ತಿಯ ಹೆಸರು ವಿಶಾಲ್ ಎಂದಿದ್ದಾರೆ. ಈ ವಿಶಾಲ ದಗಡೂಶೇಟ್​ ಗಣಪತಿಯ ಮಂದಿರದ ಬಳಿ ವಾಸವಾಗಿದ್ದರೆ ಎಂದೂ ಹೇಳಿದ್ದಾರೆ.

2,50,000ಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿ ಮೆಚ್ಚಿದ್ದಾರೆ. ಮಾತು ಹೊಮ್ಮದೆ ಎಮೋಟಿಕಾನ್​ಗಳ ಸುರಿಮಳೆ ಸುರಿಸಿದ್ದಾರೆ.

ನಿಮ್ಮನ್ನು ಮಕ್ಕಳಷ್ಟೇ ಅಲ್ಲ ಪ್ರಾಣಿಗಳೂ ಅನುಕರಿಸುತ್ತವೆ!

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:33 am, Tue, 15 November 22