AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರಿಬೆಕ್ಕಿಗೆ ಸಹಾಯ ಮಾಡಿದ ನಾಯಿ; ನೆಟ್ಟಿಗರೇಕೆ ಕೋಪಗೊಂಡಿದ್ದಾರೆ?

Dog and Cat : ಈ ನಾಯಿ ಎಲ್ಲಿಂದಲೋ ಮರದ ತುಂಡನ್ನು ತಂದಿಟ್ಟಿದೆ. ಮರಿಬೆಕ್ಕು ದಾಟಿ ದಡ ತಲುಪಿದೆ. ಸಿನೆಮಾದ ದೃಶ್ಯದಂತೆ ನೀವೆಲ್ಲ ನೋಡಿ ಮನಸ್ಸನ್ನು ಆರ್ದ್ರಗೊಳಿಸಿಕೊಂಡಿದ್ದೀರಿ. ಆದರೆ ನೆಟ್ಟಿಗರ ವಾದವೇನು ಈ ಬಗ್ಗೆ?

ಮರಿಬೆಕ್ಕಿಗೆ ಸಹಾಯ ಮಾಡಿದ ನಾಯಿ; ನೆಟ್ಟಿಗರೇಕೆ ಕೋಪಗೊಂಡಿದ್ದಾರೆ?
Dog uses a plank to help kitten stuck in water
TV9 Web
| Updated By: ಶ್ರೀದೇವಿ ಕಳಸದ|

Updated on: Nov 14, 2022 | 1:12 PM

Share

Viral Video : ಈತನಕ 1.8 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಸಣ್ಣ ತೊರೆಯ ಮಧ್ಯೆ ಬೆಕ್ಕಿನಮರಿಯೊಂದು ಸಿಕ್ಕಿಹಾಕಿಕೊಂಡುಬಿಟ್ಟಿದೆ. ಕಲ್ಲಿನ ಮೇಲೆ ನಿಂತು ಅತ್ತೂ ದಾಟದೆ ಇತ್ತೂ ದಾಟದೆ ಕಂಗಾಲಾಗಿದೆ. ಅಲ್ಲಿಗೆ ಬಂದ ನಾಯಿಯೊಂದು ಮರದ ತುಂಡನ್ನು ತಂದು ನೀರನ್ನು ದಾಟಲು ಸಹಾಯ ಮಾಡಿದೆ. ಈ ವಿಡಿಯೋ ನೋಡಿದ ಯಾರಿಗೂ ಆಹಾ ಎನ್ನಿಸದೇ ಇರದು. ಒಮ್ಮೆ ನಾಯಿಯನ್ನು ಮುದ್ದಾಡಬೇಕು ಎನ್ನಿಸದೇ ಇರದು. ಹಾಗೆಯೇ ಬೆಕ್ಕನ್ನು ಬೆಚ್ಚಗೆ ಎತ್ತಿಕೊಳ್ಳಬೇಕು ಎನ್ನಿಸದೇ ಇರದು. ವಿಡಿಯೋ ನೋಡಿ.

ಎಷ್ಟೊತ್ತಿನಿಂದ ಈ ಮರಿಬೆಕ್ಕು ಹೀಗೆ ನಟ್ಟನಡುವೆ ನಿಂತುಕೊಂಡಿತ್ತೋ, ನಿಂತು ಹೆದರಿತ್ತೋ ಗೊತ್ತಿಲ್ಲ. ಅಂತೂ ಈ ನಾಯಿ ಮರದ ತುಂಡನ್ನು ಎಲ್ಲಿಂದಲೋ ಹುಡುಕಿಕೊಂಡು ಬಂದಿದೆ. ಸರಾಗವಾಗಿ ಬೆಕ್ಕು ದಾಟಿದೆ. ಹೀಗೆಂದುಕೊಳ್ಳುತ್ತ ಸಿನೆಮಾದ ದೃಶ್ಯದಂತೆ ನೀವೆಲ್ಲ ನೋಡಿ ಮರುಗಿದ್ದೀರಿ, ಮನಸ್ಸನ್ನು ಆರ್ದ್ರಗೊಳಿಸಿಕೊಂಡಿದ್ದೀರಿ.

ಆದರೆ ನೆಟ್ಟಿಗರು ಮಾತ್ರ ಇದನ್ನು ನೋಡಿ ಕೋಪಿಸಿಕೊಂಡಿದ್ದಾರೆ. ಈ ಮರಿಬೆಕ್ಕನ್ನು ಹೀಗೆ ನಡೆಸಿಕೊಂಡಿದ್ದು ತಪ್ಪು, ಇಂಥ ವಿಡಿಯೋಗಳನ್ನು ನೋಡಲು ಜನರನ್ನು ಪ್ರೋತ್ಸಾಹಿಸಬೇಡಿ. ಈ ವಿಡಿಯೋ ಮಾಡುವಾಗ ಅದೆಷ್ಟು ಹೊತ್ತಿನಿಂದ ಮರಿಬೆಕ್ಕಿಗೆ ಹೀಗೆ ಹಿಂಸೆ ಕೊಟ್ಟಿದ್ದಾರೋ ಏನೋ. ಜನ ಲೈಕ್ಸ್​​, ಶೇರ್​ ಮೂಲಕ ಹಣ ಏನೆಲ್ಲ ಮಾಡಲೂ ತಯಾರು ಎಂದಿದ್ದಾರೆ.

ನಿಮಗೇನು ಅನ್ನಿಸುತ್ತಿದೆ ಈ ವಿಡಿಯೋ ನೋಡುತ್ತಿದ್ದರೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ