AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘನ್ ಬಾಲೆಯ ಎಬಿಸಿಡಿ ವಿಡಿಯೋ ಟ್ವೀಟ್ ಮಾಡಿದ ರವೀನಾ ಟಂಡನ್

Afghanistan : ಈ ಪುಟ್ಟ ಮಗುವಿಗೂ ಹಿಜಾಬ್​ ಬೇಕೆ? ಅಲ್ಲಿಯ ಹೆಣ್ಣುಮಕ್ಕಳು ತಾಲಿಬಾನಿಗಳ ಅಟ್ಟಹಾಸಕ್ಕೆ ಒಳಗಾಗಬಾರದು. ಹೆಣ್ಣುಮಕ್ಕಳಿಗೆ ಶಿಕ್ಷಣ ಬೇಕು. ಈ ಮಗುವಿನ ಮುಖದ ಮೇಲೆ ಅರಳಿರುವ ಸಂತೋಷ ನೋಡಿ ಎನ್ನುತ್ತಿದ್ದಾರೆ ಹಲವರು.

ಅಫ್ಘನ್ ಬಾಲೆಯ ಎಬಿಸಿಡಿ ವಿಡಿಯೋ ಟ್ವೀಟ್ ಮಾಡಿದ ರವೀನಾ ಟಂಡನ್
ಅಫ್ಗನ್​ ಬಾಲಕಿ ABCD ಹೇಳುತ್ತಿರುವುದು
TV9 Web
| Updated By: ಶ್ರೀದೇವಿ ಕಳಸದ|

Updated on:Dec 10, 2022 | 9:39 AM

Share

Viral Video : ಅಫ್ಘಾನಿಸ್ತಾನದ ಪುಟ್ಟ ಹುಡುಗಿ ಇಂಗ್ಲಿಷ್​ನ ವರ್ಣಮಾಲೆಗಳನ್ನು ಹೇಳುತ್ತಿರುವ ವಿಡಿಯೋ ಅನ್ನು ನಟಿ ರವೀನಾ ಟಂಡನ್ ಟ್ವೀಟ್ ಮಾಡಿದ್ಧಾರೆ. 1.6 ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಈ ವಿಡಿಯೋ ನೋಡಿದ್ದಾರೆ. ಸುಮಾರು 1,500 ಜನರು ಇಷ್ಟಪಟ್ಟಿದ್ದಾರೆ. ತಾಲಿಬಾನ್​ ಅಟ್ಟಹಾಸದಿಂದಾಗಿ ಅಫ್ಘಾನಿಸ್ತಾನದ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವಾಗ ಇಂಥ ವಿಡಿಯೋಗಳು ಭರವಸೆಯನ್ನು ಹುಟ್ಟಿಸುತ್ತಿವೆ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.

ಮೂಲತಃ ಈ ವಿಡಿಯೋ ಅನ್ನು ಪತ್ರಕರ್ತ ನಾಸರ್ ಖಾನ್​ ಎನ್ನುವವರು ಟ್ವೀಟ್ ಮಾಡಿದ್ದಾರೆ. ತರಗತಿಯೊಂದರಲ್ಲಿ ಶಿಕ್ಷಕಿ ಉದ್ದೇಶಪೂರ್ವಕವಾಗಿ ಇಂಗ್ಲಿಷ್​ ವರ್ಣಮಾಲೆಗಳನ್ನು ಹೇಳಲು ಈ ಪುಟ್ಟಹುಡುಗಿಗೆ ಪ್ರೋತ್ಸಾಹಿಸಿದ್ದಾರೆ. ಮುಖದ ಮೇಲಿನ ಉತ್ಸಾಹ ಮತ್ತು ಖುಷಿ ಗಮನಿಸಿ. ಅಲ್ಲಲ್ಲಿ ಒಂದೆರಡು ಅಕ್ಷರಗಳು ಲೋಪವಾದರೂ ಅದೆಲ್ಲ ಲೆಕ್ಕಕ್ಕುಂಟೇ?

ಅಫಘಾನಿಸ್ತಾನದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ದೊರೆಯಬೇಕು, ತಾಲಿಬಾನಿಗಳ ಅಟ್ಟಹಾಸದಿಂದ ಅವರು ನರಳಬಾರದು ಎಂದು ನೆಟ್ಟಿಗರು ಹೇಳಿದ್ದಾರೆ. ಈ ಮಗುವಿನ ಉತ್ಸಾಹ ಸಂತೋಷ ವರ್ಣಿಸಲಸಾಧ್ಯ ಎಂದು ಒಬ್ಬರು ಹೇಳಿದ್ಧಾರೆ. ಪುಟ್ಟಮಗುವಿಗೆ ಹಿಜಾಬ್​ ಬೇಕೆ? ಎಂದು ಕೇಳಿದ್ದಾರೆ ಮತ್ತೊಬ್ಬರು. ಈ ಮಕ್ಕಳಿಗೆಲ್ಲ ಶಿಕ್ಷಣ, ಜ್ಞಾನ ಅಪರಿಮಿತವಾಗಿ ಸಿಗಲಿ, ಅವರ ಮುಖಗಳು ಹೀಗೇ ನಗುವಿನಿಂದ ಕೂಡಿರಲಿ ಎಂದಿದ್ದಾರೆ ಮಗದೊಬ್ಬರು. ಅಲ್ಲಿರುವ ಹೆಣ್ಣುಮಕ್ಕಳಿಗೆ ಆರು ವರ್ಷ ತುಂಬುತ್ತಿದ್ದಂತೆ 40ರ ಗಂಡಸಿನೊಂದಿಗೆ ಮದುವೆಯಾಗುವ ಹಿಂಸೆ ಇದೆಯಲ್ಲ ಅದೆಲ್ಲ ಯಾವಾಗ ತಪ್ಪುತ್ತದೆಯೋ ಎಂದು ಬೇಸರ ವ್ಯಕ್ತಪಡಿಸಿದ್ಧಾರೆ ಒಬ್ಬರು.

ಈ ವಿಡಿಯೋ ನೋಡಿದ ನಿಮಗೆ ಏನನ್ನಿಸುತ್ತದೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 9:16 am, Sat, 10 December 22

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?