ಮೇಆಂವೂ? ಲಗೇಜಿನೊಳಗೆ ಬೆಕ್ಕು; ನ್ಯೂಯಾರ್ಕ್ ಏರ್ಪೋರ್ಟ್ನಲ್ಲಿ ನಡೆದ ಅಚ್ಚರಿಯ ಘಟನೆ
Cat : ಇದು ನಮ್ಮ ಮನೆಯ ಬೆಕ್ಕು ಅಲ್ಲವೇ ಅಲ್ಲ, ಇದು ನನ್ನ ಟ್ರಾಲಿಯೊಳಗೆ ಹೇಗೆ ಬಂತೆಂದೂ ಗೊತ್ತಿಲ್ಲ ಎಂದು ಪ್ರಯಾಣಿಕ ಹೇಳಿದ್ದಾನೆ. ನಂತರ ಏರ್ಪೋರ್ಟ್ ಸಿಬ್ಬಂದಿ ಈ ಉಡಾಳ ಬೆಕ್ಕಿಗೆ ಏನು ಶಿಕ್ಷೆ ವಿಧಿಸಿದರು?

Viral Video : ಬಟ್ಟೆಗಳನ್ನು ಪ್ಯಾಕ್ ಮಾಡಲೆಂದು ಹರವಿಕೊಂಡ ಸೂಟ್ಕೇಸ್, ಟ್ರಾಲಿಬ್ಯಾಗ್ನೊಳಗೆ ಪುಟ್ಟ ಮಕ್ಕಳು, ಬೆಕ್ಕುಗಳು ಕುಳಿತುಕೊಳ್ಳುವುದನ್ನು, ಮಲಗುವುದನ್ನು ನೋಡಿರುತ್ತೀರಿ. ಅವುಗಳಿಗೊಂದು ಆಟ. ಆದರೆ ಈ ಆಟ ನಿಜವೇ ಆದಲ್ಲಿ ಏನಾಗುತ್ತದೆ? ಇದೀಗ ವೈರಲ್ ಆಗಿರುವ ಈ ಸುದ್ದಿಯನ್ನು ಓದಿ. ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್ ಚೆಕ್ ಮಾಡುವಾಗ ಟ್ರಾಲಿಯಲ್ಲಿ ಜೀವಂತ ಬೆಕ್ಕೊಂದು ಪತ್ತೆಯಾಗಿದೆ.
ನ್ಯೂಯಾರ್ಕ್‌ನ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣದಲ್ಲಿ ನವೆಂಬರ್ 16ರಂದು ಈ ಘಟನೆ ನಡೆದಿದೆ. ಎಕ್ಸ್ರೇಯಲ್ಲಿ ಟ್ರಾಲಿ ಬ್ಯಾಗಿನೊಳಗೆ ಮಿಸುಕಾಡುತ್ತಿರುವ ಪ್ರಾಣಿಯಾಕಾರ ಕಂಡಿದೆ. ಭದ್ರತಾ ಸಿಬ್ಬಂದಿ ಅಚ್ಚರಿಯಿಂದ ಮೆಲ್ಲಗೆ ಟ್ರಾಲಿ ತೆರೆದು ನೋಡಿದರೆ ಅದು ಜಿಂಜರ್ ಕ್ಯಾಟ್!
ನಂತರ ಪ್ರಯಾಣಿಕರನ್ನು ಭದ್ರತಾ ಸಿಬ್ಬಂದಿಯು ಟಿಕೆಟ್ ಕೌಂಟರ್ಗೆ ಹಿಂದಿರುಗಲು ಹೇಳಿದೆ. ‘ಇದು ನಮ್ಮ ಮನೆಯ ಬೆಕ್ಕಲ್ಲ. ಇದು ಬೇರೆಯವರದು. ಇದು ನನ್ನ ಟ್ರಾಲಿ ಬ್ಯಾಗ್ನಲ್ಲಿ ಹೇಗೆ ಬಂದು ಕುಳಿತುಕೊಂಡಿತು ಎನ್ನುವುದೂ ಗೊತ್ತಿಲ್ಲ’ ಎಂದು ಪ್ರಯಾಣಿಕ ಫಾರ್ಬ್ಸ್ಟೇನ್ ಹೇಳಿದ್ದಾರೆ.
ಏರ್ಪೋರ್ಟ್ ಸಿಬ್ಬಂದಿಗೆ ಬೆಕ್ಕಿನ ಉಡಾಳತನ ಅರ್ಥವಾಗಿದೆ. ಅಂತೂ ಅದನ್ನು ಅದರ ಪೋಷಕರಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ತಮ್ಮ ಬೆಕ್ಕು ಇಷ್ಟೆಲ್ಲ ಸಾಹಸವನ್ನು ಮಾಡಿದೆ ಎಂಬ ಕಲ್ಪನೆ ಪೋಷಕರಿಗೆ ಆತನಕ ತಿಳಿದೇ ಇರಲಿಲ್ಲ!
ಹುಷಾರು ನೀವು ಊರಿಗೆ ಹೊರಡುವಾಗ ಟ್ರಾಲಿ ಪ್ಯಾಕ್ ಮಾಡುವಾಗ!
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:14 am, Fri, 25 November 22