ವೆಜ್ ಬಿರಿಯಾನಿಯಲ್ಲಿ ಮೂಳೆಗಳು ಪತ್ತೆ, ರೆಸ್ಟೋರೆಂಟ್ ವಿರುದ್ಧ ದೂರು ದಾಖಲು
ಸಸ್ಯಾಹಾರಿಯೊಬ್ಬರಿಗೆ ವೆಜ್ ಬಿರಿಯಾನಿಯಲ್ಲಿ ಮಾಂಸಾಹಾರ ಪತ್ತೆಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಪೊಲೀಸರು ಇಂದೋರ್‌ನಲ್ಲಿ ರೆಸ್ಟೋರೆಂಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇಂದೋರ್: ಸಸ್ಯಾಹಾರಿಯೊಬ್ಬರಿಗೆ ವೆಜ್ ಬಿರಿಯಾನಿಯಲ್ಲಿ (Veg Biryani) ಮಾಂಸಾಹಾರ ಪತ್ತೆಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ (Madhya Pradesh) ಪೊಲೀಸರು ಇಂದೋರ್‌ನಲ್ಲಿ ರೆಸ್ಟೋರೆಂಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದೂರುದಾರ ಆಕಾಶ್ ದುಬೆ ಅವರು ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದರು ಆದರೆ ವಿಜಯ್ ನಗರ ಪ್ರದೇಶದ ರೆಸ್ಟೋರೆಂಟ್‌ನಲ್ಲಿ ಅವರ ಪ್ಲೇಟ್‌ನಲ್ಲಿ ವೆಜ್ ಬಿರಿಯಾನಿ ಮೂಳೆಗಳನ್ನು ಪತ್ತೆ ಮಾಡಿದ್ದಾರೆ.
ಅವರು ಈ ಬಗ್ಗೆ ರೆಸ್ಟೋರೆಂಟ್ ಮ್ಯಾನೇಜರ್ ಮತ್ತು ಸಿಬ್ಬಂದಿಗೆ ದೂರು ನೀಡಿದರು, ನಂತರ ಅವರು ಕ್ಷಮೆಯಾಚಿಸಿದ್ದಾರೆ. ನಂತರ ಆಕಾಶ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದನ್ನು ಓದಿ: ಬಸ್ ಚಲಾಯಿಸುವಾಗಲೇ ಡ್ರೈವರ್ಗೆ ಹೃದಯಾಘಾತ; ಬಸ್ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರೂ ಸಾವು
ವಿಜಯ್ ನಗರ ಪೊಲೀಸರು ರೆಸ್ಟೋರೆಂಟ್ ಮ್ಯಾನೇಜರ್ ಸ್ವಪ್ನಿಲ್ ಗುಜರಾತಿ ವಿರುದ್ಧ ಸೆಕ್ಷನ್ 298 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಸ್ತುತ, ಈ ವಿಷಯವನ್ನು ತನಿಖೆ ನಡೆಸಲಾಗುತ್ತಿದೆ, ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಪೊಲೀಸ್ ಆಯುಕ್ತ ಸಂಪತ್ ಉಪಾಧ್ಯಾಯ ಎಎನ್‌ಐಗೆ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:27 am, Wed, 28 December 22