Madhya Pradesh Explosion ಮಧ್ಯಪ್ರದೇಶ: ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ, ನಾಲ್ವರು ದುರ್ಮರಣ
ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದ್ದು ನಾಲ್ವರು ಮೃತಪಟ್ಟಿದ್ದಾರೆ. 7 ಮಂದಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ
ಮಧ್ಯಪ್ರದೇಶದ (Madhya Pradesh) ಮೊರೆನಾ ಜಿಲ್ಲೆಯ ಬನ್‌ಮೋರ್ ನಗರದಲ್ಲಿ ಪಟಾಕಿಗಳನ್ನು (Fire Cracker) ಸಂಗ್ರಹಿಸಲಾಗಿದ್ದ ಗೋಡೌನ್‌ನಲ್ಲಿ ಸ್ಫೋಟ ಸಂಭವಿಸಿ ನಾಲ್ವರು ಸಾವಿಗೀಡಾಗಿದ್ದಾರೆ. ಕೆಲವರು ಅವಶೇಷಗಳಡಿಯಲ್ಲಿ ಹೂತುಹೋಗಿದ್ದಾರೆ ಎಂದು ಶಂಕಿಸಲಾಗಿದೆ. ದೀಪಾವಳಿಗೆ ಮುಂಚಿತವಾಗಿ ಗೋಡೌನ್ ಪಟಾಕಿಗಳಿಂದ ತುಂಬಿದ್ದು, ಸ್ಫೋಟದಲ್ಲಿ ಇತರ ಏಳು ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳನ್ನು ತೆರವುಗೊಳಿಸಲು ಯಂತ್ರಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ ಎಂದು ಪೊಲೀಸ್ ಮಹಾನಿರೀಕ್ಷಕ ರಾಜೇಶ್ ಚಾವ್ಲಾ ತಿಳಿಸಿದ್ದಾರೆ.
Morena, MP | Explosion in an illegal firecracker factory in the Banmore Police Station area killed 3. One is missing, 7 have also been injured. People also suspected to be buried under debris: IG Chambal range, Rakesh Chawla pic.twitter.com/YkBoz7djQF
— ANI MP/CG/Rajasthan (@ANI_MP_CG_RJ) October 20, 2022
ಸ್ಫೋಟಕ್ಕೆ ಕಾರಣ ಪಟಾಕಿಯೇ ಅಥವಾ ಬೇರೇನಾದರೂ ವಸ್ತುವೇ ಎಂದು ಹೇಳಲು ಈಗ ಸಾಧ್ಯವಿಲ್ಲ. ಸ್ಫೋಟದಲ್ಲಿ ನಾಲ್ವರು ಸಾವಿಗೀಡಾಗಿದ್ದು, 7 ಮಂದಿ ಗಾಯಗೊಂಡವರಲ್ಲಿ ಹಲವರು ಸ್ಥಿತಿ ಚಿಂತಾಜನಕರಾಗಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಒಂದು ಮಗುವನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ಮೆಜಿಸ್ಟ್ರೇಟ್ ಬಿ ಕಾರ್ತಿಕೇಯನ್ ಹೇಳಿದ್ದಾರೆ.
ಸ್ಫೋಟದ ಕಾರಣ ಸದ್ಯಕ್ಕೆ ಸ್ಪಷ್ಟವಾಗಿಲ್ಲ ಎಂದು ಮೊರೆನಾ ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಬಗ್ರಿ ಪಿಟಿಐಗೆ ತಿಳಿಸಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದ ಈ ಘಟನೆಯಲ್ಲಿ ಮನೆ ಕುಸಿದು ಬಿದ್ದಿದೆ. ಒಂದೇ ಕುಟುಂಬದ ಮೂವರು ಮತ್ತು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
Published On - 1:41 pm, Thu, 20 October 22