Video Viral: ತಾಯಿ, ಸಹೋದರಿಗೆ ಸಿಗದ ಶಿಕ್ಷಣ ನನಗೂ ಬೇಡ, ಟಿವಿ ಲೈವ್ನಲ್ಲಿ ಸರ್ಟಿಫಿಕೇಟ್ ಹರಿದು ಹಾಕಿದ ಪ್ರಾಧ್ಯಾಪಕ
ಅಫ್ಘಾನಿಸ್ತಾನ ಕಾಬೂಲ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರು ಲೈವ್ ಟೆಲಿವಿಷನ್‌ನಲ್ಲಿ ತಮ್ಮ ಡಿಪ್ಲೋಮಾ ದಾಖಲೆಗಳನ್ನು ಹರಿದು ಹಾಕಿದರು. ತನ್ನ ತಾಯಿ ಮತ್ತು ಸಹೋದರಿ ಅಧ್ಯಯನ ಮಾಡಲು ಸಾಧ್ಯವಾಗದಿದ್ದರೆ ಈ ಶೈಕ್ಷಣಿಕ ಸರ್ಟಿಫಿಕೇಟ್ ನನಗೆ ಯಾಕೆ? ಈ ಶಿಕ್ಷಣ ವ್ಯವಸ್ಥೆಯನ್ನು ಸ್ವೀಕರಿಸುವುದಿಲ್ಲ
ಕಾಬೂಲ್: ಅಫ್ಘಾನಿಸ್ತಾನ (afghanistan) ಕಾಬೂಲ್ ವಿಶ್ವವಿದ್ಯಾನಿಲಯದ (Kabul University) ಪ್ರಾಧ್ಯಾಪಕರೊಬ್ಬರು ಲೈವ್ ಟೆಲಿವಿಷನ್‌ನಲ್ಲಿ ತಮ್ಮ ಡಿಪ್ಲೋಮಾ ದಾಖಲೆಗಳನ್ನು ಹರಿದು ಹಾಕಿದರು. ತನ್ನ ತಾಯಿ ಮತ್ತು ಸಹೋದರಿ ಅಧ್ಯಯನ ಮಾಡಲು ಸಾಧ್ಯವಾಗದಿದ್ದರೆ ಈ ಶೈಕ್ಷಣಿಕ ಸರ್ಟಿಫಿಕೇಟ್ ನನಗೆ ಯಾಕೆ? ಈ ಶಿಕ್ಷಣ ವ್ಯವಸ್ಥೆಯನ್ನು ಸ್ವೀಕರಿಸುವುದಿಲ್ಲ ಎಂದು ಲೈವ್ ಕಾರ್ಯಕ್ರಮದಲ್ಲೇ ಹರಿದು ಹಾಕಿದ್ದಾರೆ. ಇದೀಗ ಈ ಲೈವ್ ಕ್ಲಿಕ್ ವಿಡಿಯೊ ಎಲ್ಲ ಕಡೆ ವೈರಲ್ ಆಗುತ್ತಿದೆ. ಪ್ರಾಧ್ಯಾಪಕರು ತಮ್ಮ ಡಿಪ್ಲೊಮಾ ಸರ್ಟಿಫಿಕೇಟ್ನ್ನು ಒಂದೊಂದಾಗಿ ಎತ್ತಿ ಹಿಡಿದಿರುವುದನ್ನು ತೋರಿಸಿ. ನಂತರ ಅವುಗಳನ್ನು ಒಂದೊಂದಾಗಿ ಹರಿದು ಹಾಕುತ್ತಾನೆ.
ಅಫ್ಘಾನ್ ಪುನರ್ವಸತಿ ಮತ್ತು ನಿರಾಶ್ರಿತರ ಸಚಿವರ ಮಾಜಿ ನೀತಿ ಸಲಹೆಗಾರರಾದ ಶಬ್ನಮ್ ನಸಿಮಿ, ಕಾಬೂಲ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಅಫ್ಘಾನಿಸ್ತಾನದ ಲೈವ್ ಟಿವಿಯಲ್ಲಿ ಅವರ ಡಿಪ್ಲೋಮಾ ಸರ್ಟಿಫಿಕೇಟ್ ಹರಿದು ಹಾಕಿರುವುದು ವಿಸ್ಮಯಕಾರಿ ದೃಶ್ಯ ಎಂದು ಹೇಳಿದ್ದಾರೆ.
ಇಂದಿನಿಂದ ನನಗೆ ಈ ಡಿಪ್ಲೋಮಾ ಸರ್ಟಿಫಿಕೇಟ್ ಮುಂದೆ ಅಗತ್ಯವಿಲ್ಲ ಏಕೆಂದರೆ ಈ ದೇಶವು ಶಿಕ್ಷಣಕ್ಕೆ ಸ್ಥಳವಿಲ್ಲ ಮತ್ತು ಬೆಲೆ ಇಲ್ಲ. ನನ್ನ ಸಹೋದರಿ ಮತ್ತು ನನ್ನ ತಾಯಿ ಅಧ್ಯಯನ ಮಾಡಲು ಸಾಧ್ಯವಾಗದಿದ್ದರೆ, ನಾನು ಈ ಶಿಕ್ಷಣ ವ್ಯವಸ್ಥೆಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದರು. ನಾಸಿಮಿ ಪ್ರಸ್ತುತ ಕನ್ಸರ್ವೇಟಿವ್ ಫ್ರೆಂಡ್ಸ್ ಆಫ್ ಅಫ್ಘಾನಿಸ್ತಾನದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಇದು ಯುನೈಟೆಡ್ ಕಿಂಗ್‌ಡಮ್‌ಗೆ ಅಫ್ಘಾನಿಸ್ತಾನದ ಬಗ್ಗೆ ತಿಳಿಯಲಿ ಎಂದು ಹೇಳಿದ್ದಾರೆ.
Astonishing scenes as a Kabul university professor destroys his diplomas on live TV in Afghanistan —
“From today I don’t need these diplomas anymore because this country is no place for an education. If my sister & my mother can’t study, then I DON’T accept this education.” pic.twitter.com/cTZrpmAuL6
— Shabnam Nasimi (@NasimiShabnam) December 27, 2022
ಇದನ್ನು ಓದಿ: ಓದುವ ಅವಕಾಶಕ್ಕಾಗಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಜಲಫಿರಂಗಿ ಪ್ರಯೋಗಿಸಿದ ತಾಲೀಬಾನ್
ಕಳೆದ ವರ್ಷ ಆಗಸ್ಟ್‌ನಲ್ಲಿ, 9/11 ದಾಳಿಯ ಹಿನ್ನೆಲೆಯಲ್ಲಿ US ಪಡೆಗಳು ಅಫ್ಘಾನಿಸ್ತಾನದಿಂದ ಹೊರಗೆ ಹೋದ ತಕ್ಷಣ ತಾಲಿಬಾನ್ ಅಫ್ಘಾನಿಸ್ತಾನವನ್ನು ಪುನಃ ವಶಪಡಿಸಿಕೊಂಡಿತು. ತಾಲಿಬಾನ್ ಅಫ್ಘಾನಿಸ್ತಾನದ ಅಧಿಕಾರವನ್ನು ವಶಪಡಿಸಿಕೊಂಡ ನಂತರ, ತಾಲಿಬಾನ್ ನಾಯಕರು ಮೃದುವಾದ ಆಡಳಿತವನ್ನು ಭರವಸೆ ನೀಡಿದರು. ಆದರೆ ಅನೇಕ ನಿರ್ಬಂಧಗಳು ಮಹಿಳೆಯರ ಜೀವನದ ಪ್ರತಿಯೊಂದು ಅಂಶಗಳನ್ನು ನಿಯಂತ್ರಣ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕಳೆದ ವಾರ, ತಾಲಿಬಾನ್ ಸರ್ಕಾರವು ಅಫ್ಘಾನಿಸ್ತಾನದಾದ್ಯಂತ ಮಹಿಳೆಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣವನ್ನು ನಿಷೇಧಿಸಿತು, ಆದರೆ ಈ ಕ್ರಮ ವ್ಯಾಪಕ ಟೀಕೆಗೆ ಗುರಿಯಾಯಿತು.
ಮುಂದಿನ ಸೂಚನೆ ಬರುವವರೆಗೆ ಮಹಿಳಾ ಶಿಕ್ಷಣದಿಂದ ದೂರ ಉಳಿಯುವಂತೆ ಆದೇಶವನ್ನು ತಕ್ಷಣವೇ ಜಾರಿಗೆ ತರಲು ನಿಮಗೆಲ್ಲರಿಗೂ ತಿಳಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ನೇಡಾ ಮೊಹಮ್ಮದ್ ನದೀಮ್ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದಿದ್ದಾರೆ.
ಈ ನಿಷೇಧವು ವಿಶ್ವವಿದ್ಯಾನಿಲಯದ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಅನುಸರಿಸಿತು, ಲಿಂಗ-ಬೇರ್ಪಡಿಸಿದ ತರಗತಿಗಳು ಮತ್ತು ಪ್ರವೇಶಗಳು ಸೇರಿದಂತೆ ಅನೇಕ ಕ್ರಮಗಳನ್ನು ತರಲಾಗಿತ್ತು. ಅಲ್ಲದೆ, ಮಹಿಳೆಯರಿಗೆ ಮಹಿಳಾ ಪ್ರಾಧ್ಯಾಪಕರು ಅಥವಾ ವೃದ್ಧರು ಮಾತ್ರ ಕಲಿಸಲು ಅನುಮತಿ ನೀಡಲಾಗಿತ್ತು.
ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ