Naegleria Fowleri: ಮೆದುಳು ತಿನ್ನುವ ಅಮೀಬಾ ಎಂದೇ ಆತಂಕ ಸೃಷ್ಟಿಸಿರುವ ನೇಗ್ಲೇರಿಯಾ ಫೌಲೆರಿ ಸೋಂಕು ಎಂದರೇನು?

Brain Eating Amoeba: ಡಿಸೆಂಬರ್ 10 ರಂದು ಕೊರಿಯಾಕ್ಕೆ ಹಿಂದಿರುಗಿದ ವ್ಯಕ್ತಿಯೊರ್ವ ನೇಗ್ಲೇರಿಯಾ ಫೌಲೆರಿ ಸೋಂಕಿನಿಂದ ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ್ದ. ಈತ ನಾಲ್ಕು ತಿಂಗಳ ಕಾಲ ಥೈಲ್ಯಾಂಡ್‌ನಲ್ಲಿ ತಂಗಿದ್ದ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆಯ ಸಂಶೋಧನೆಯು ದೃಢಪಡಿಸಿದೆ.

Naegleria Fowleri: ಮೆದುಳು ತಿನ್ನುವ ಅಮೀಬಾ ಎಂದೇ ಆತಂಕ ಸೃಷ್ಟಿಸಿರುವ ನೇಗ್ಲೇರಿಯಾ ಫೌಲೆರಿ ಸೋಂಕು ಎಂದರೇನು?
ಸಾಂದರ್ಭಿಕ ಚಿತ್ರImage Credit source: Getty
Follow us
|

Updated on:Nov 07, 2023 | 2:18 PM

ಚೀನಾದಲ್ಲಿ ರೂಪಾಂತರಿ ಕೋವಿಡ್ -19(Covid-19)  ಭೀತಿಯ ಮಧ್ಯೆ, ದಕ್ಷಿಣ ಕೊರಿಯಾ ತನ್ನ 50 ರ ಹರೆಯದ ವ್ಯಕ್ತಿಯನ್ನು ಕೊಂದ ನೇಗ್ಲೇರಿಯಾ ಫೌಲೆರಿ ಸೋಂಕಿನ ಮೊದಲ ಪ್ರಕರಣವನ್ನು ವರದಿ ಮಾಡಿದೆ. ವ್ಯಕ್ತಿಯ ಮೆದುಳನ್ನು ನಿಷ್ಕ್ರಿಯಗೊಳಿಸುವ ಈ ಸೋಂಕಿಗೆ ಮಾರಣಾಂತಿಕ ಚುಚ್ಚುಮದ್ದು ಕಾರಣವೆಂದು ಥೈಲ್ಯಾಂಡ್‌ನ ವರದಿಯೊಂದು ಬಹಿರಂಗಪಡಿಸಿದೆ. ಈ ಸೋಂಕನ್ನು ಮೆದುಳನ್ನು ತಿನ್ನುವ ಅಮೀಬಾ(Brain-eating Amoeba) ಎಂದು ಕರೆಯಾಗುತ್ತಿದೆ.ಕೊರಿಯಾ ಟೈಮ್ಸ್‌ನ ವರದಿಯು ತಿಳಿಸಿರುವಂತೆ ಡಿಸೆಂಬರ್ 10 ರಂದು ಕೊರಿಯಾಕ್ಕೆ ಹಿಂದಿರುಗಿದ ವ್ಯಕ್ತಿಯೊರ್ವ ನೇಗ್ಲೇರಿಯಾ ಫೌಲೆರಿ ಸೋಂಕಿನಿಂದ ಮರಣ ಹೊಂದಿದ. ಈತ ನಾಲ್ಕು ತಿಂಗಳ ಕಾಲ ಥೈಲ್ಯಾಂಡ್‌ನಲ್ಲಿ ತಂಗಿದ್ದ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ (KDCA) ಸಂಶೋಧನೆಯು ದೃಢಪಡಿಸಿದೆ.

ವ್ಯಕ್ತಿಯ ಮೆದುಳನ್ನು ನಿಷ್ಕ್ರಿಯಗೊಳಿಸುವ ಅಮೀಬಾ ನೇಗ್ಲೇರಿಯಾ ಫೌಲೆರಿ ಎಂದರೇನು?

ನೇಗ್ಲೇರಿಯಾ ಏಕಕೋಶೀಯ ಜೀವಿಯಾಗಿದ್ದು, ಸೂಕ್ಷ್ಮದರ್ಶಕವಾಗಿದೆ. ಸರೋವರಗಳು, ನದಿಗಳು ಮತ್ತು ಮಣ್ಣು ಸೇರಿದಂತೆ ಸಿಹಿನೀರಿನಲ್ಲಿ ಕಂಡುಬರುತ್ತದೆ. ಆದರೆ, ಎಲ್ಲಾ ಜಾತಿಯ ಅಮೀಬಾಗಳಿಂದ ಈ ಮಾರಣಾಂತಿಕ ರೋಗ ಹರಡಲ್ಲ. ಸಾಮಾನ್ಯವಾಗಿ ನೀರಿನಲ್ಲಿ ಈಜುವ ಆಸಕ್ತಿ ನಿಮಗಿದ್ದರೆ ಆದಷ್ಟು ಎಚ್ಚರ ವಹಿಸಿ. ಯಾಕೆಂದರೆ ಸರೋವರಗಳು ಮತ್ತು ನದಿಗಳಲ್ಲಿ ಈಜುವಾಗ ಅಮೀಬಾವನ್ನು ಹೊಂದಿರುವ ನೀರು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿ ಸಾಮಾನ್ಯವಾಗಿ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ. ಇದು ನೇರವಾಗಿ ಮೆದುಳು ನಾಶಗೊಳಿಸುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ನದಿಗೆ ಸ್ನಾನ ಮಾಡಲು ಹೋಗಿದ್ದ ಬಾಲಕನ ದೇಹಕ್ಕೆ ಅಮೀಬಾ ಹೆಸರಿನ ವೈರಸ್ ಸೇರಿದ್ದು ಬಾಲಕ ಮೃತಪಟ್ಟಿರುವ ಪೂರ್ವ ಅಮೆರಿಕದಲ್ಲಿ ನಡೆದಿದೆ ಎಂದು ವರದಿಗಳು ತಿಳಿಸಿವೆ. ಇದನ್ನು ಓದಿ: ಚಳಿಗಾಲದಲ್ಲಿ ನೀವು ಜಾಸ್ತಿ ನಿದ್ರಿಸುತ್ತೀರಾ, ಹಾಗಾದರೆ ನಿಮಗೆ ಈ ಸಮಸ್ಯೆಗಳು ಕಾಡಬಹುದು

ನೇಗ್ಲೇರಿಯಾ ಫೌಲೆರಿ ರೋಗ ಹೇಗೆ ಹರಡುತ್ತದೆ?

ಏಕ-ಕೋಶದ ಒಳನುಸುಳುವಿಕೆ ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) ಗೆ ಕಾರಣವಾಗುತ್ತದೆ, ಇದು ತೀವ್ರವಾ ತಲೆನೋವಿಗೆ ಕಾರಣವಾಗುತ್ತದೆ. ಇದರ ಇನ್ನಷ್ಟು ಸೋಂಕಿನ ಲಕ್ಷಣಗಳು ಇಲ್ಲಿವೆ. ಜ್ವರ, ವಾಕರಿಕೆ, ವಾಂತಿ ಮತ್ತು ಗಂಟಲು ನೋವಿನಂತಹ ಸಮಸ್ಯೆಗಳು ಇದರ ಪ್ರಾಥಮಿಕ ಲಕ್ಷಣವಾಗಿದೆ. ಇದು ಪ್ರಾಥಮಿಕ ಲಕ್ಷಣವಾದರೆ ಕಾಲ ನಂತರದಲ್ಲಿ ಮತಿ ಭ್ರಮಣೆ ಮತ್ತು ಕೋಮಾಕ್ಕೆ ಕಾರಣವಾಗಬಹುದು. ಈಗಾಗಲೇ ಅಮೇರಿಕಾದಲ್ಲಿ 1962 ರಿಂದ 2021 ರವರೆಗೆ ಒಟ್ಟು 154 ಜನರಲ್ಲಿ 4 ಜನರು ಮಾತ್ರ ಸೋಂಕಿನಿಂದ ಬದುಕುಳಿದ್ದಿದ್ದರು ಎಂದು ತಿಳಿದುಬಂದಿದೆ. ಆದರೆ ಇದು ಯಾವುದೇ ಸಾಂಕ್ರಾಮಿಕ ರೋಗವಲ್ಲ.

ನೇಗ್ಲೇರಿಯಾ ಫೌಲೆರಿ ರೋಗಕ್ಕೆ ಚಿಕಿತ್ಸೆ ಏನು?

ಈಗಾಗಲೇ ಈ ಸೋಂಕಿಗೆ ಕೆಲವು ಚಿಕಿತ್ಸೆಗಳು ಲಭ್ಯವಿದ್ದರೂ, ಕೂಡ ಈ ಕಾಯಿಲೆಯನ್ನು ಶಾಶ್ವತವಾಗಿ ಪರಿಹರಿಸಲು ಯಾವುದೇ ಚಿಕಿತ್ಸೆ ಇನ್ನೂ ಸಿಕ್ಕಿಲ್ಲ. ರೋಗಿಗಳು ಬದುಕುಳಿದ ಅಪರೂಪದ ಪ್ರಕರಣಗಳಲ್ಲಿ (ಸಂಪೂರ್ಣವಾಗಿ ಚೇತರಿಸಿಕೊಂಡ ಇಬ್ಬರು ಮಕ್ಕಳಲ್ಲಿ), ಈ ಮೆದುಳಿನ ಕಾಯಿಲೆಗೆ ಚಿಕಿತ್ಸೆ ನೀಡಲು ರೋಗಿಯು ದೇಹವನ್ನು ಸಾಮಾನ್ಯವಾಗಿರುವ ತಾಪಮಾನಕ್ಕಿಂತ, ಕಡಿಮೆ ತಾಪಮಾನಕ್ಕೆ ತಂಪಾಗಿಸುವುದು ಅಗತ್ಯವಾಗಿದೆ. ಜೊತೆಗೆ ವೈದ್ಯರು ನೇಗ್ಲೇರಿಯಾ ಫೌಲೆರಿಯ ಮೇಲೆ ಕೆಲವು ಪ್ರಭಾವ ಬೀರುವ ಔಷಧಿಗಳನ್ನು ಒಟ್ಟಾಗಿ ಸಂಯೋಜನೆ ಮಾಡಿ ರೋಗಿಗಳ ಮೇಲೆ ಪ್ರಯೋಗಿಸಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 5:07 pm, Tue, 27 December 22

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ