AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cardiovascular Disease: ಹೃದಯದ ಆರೋಗ್ಯಕ್ಕಾಗಿ ನಿದ್ರೆ ಅವಶ್ಯಕ, ತಜ್ಞರ ಸಲಹೆಗಳು ಇಲ್ಲಿವೆ

ನಿರಂತರವಾಗಿ ಕಡಿಮೆ ನಿದ್ರೆ ಮಾಡುವುದು ಪ್ರತಿರಕ್ಷಣಾ ವ್ಯವಸ್ಥೆಯ ಕಾಂಡಕೋಶಗಳನ್ನು ಹಾನಿಗೊಳಿಸುತ್ತದೆ. ಇದು ಉರಿಯೂತದ ಅಸ್ವಸ್ಥತೆಗಳು ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಹೆಚ್ಚಿಸುತ್ತದೆ.

Cardiovascular Disease: ಹೃದಯದ ಆರೋಗ್ಯಕ್ಕಾಗಿ ನಿದ್ರೆ ಅವಶ್ಯಕ, ತಜ್ಞರ ಸಲಹೆಗಳು ಇಲ್ಲಿವೆ
ಸಾಂದರ್ಭಿಕ ಚಿತ್ರImage Credit source: NHLBI - NIH
TV9 Web
| Edited By: |

Updated on:Dec 28, 2022 | 4:01 PM

Share

ನ್ಯೂಯಾರ್ಕ್‌ನ ಹೃದಯರಕ್ತನಾಳ(Cardiovascular)ದ ಸಂಶೋಧನಾ ಸಂಸ್ಥೆಯ ನಿರ್ದೇಶಕರು ಅಧ್ಯಯನಕ್ಕಾಗಿ ಕೆಲವು ವ್ಯಕ್ತಿಗಳ ಮೇಲೆ ಪ್ರಯೋಗ ನಡೆಸಿದ್ದಾರೆ. ಕಡಿಮೆ ನಿದ್ರೆಯು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿದೆ. ನಿರಂತರವಾಗಿ ಕಡಿಮೆ ನಿದ್ರೆ ಮಾಡುವುದು ಪ್ರತಿರಕ್ಷಣಾ ವ್ಯವಸ್ಥೆಯ ಕಾಂಡಕೋಶಗಳನ್ನು ಹಾನಿಗೊಳಿಸುತ್ತದೆ. ಇದು ಉರಿಯೂತದ ಅಸ್ವಸ್ಥತೆಗಳು ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಹೆಚ್ಚಿಸುತ್ತದೆ ಎಂದು ನ್ಯೂಯಾರ್ಕ್‌ನ ಕಾರ್ಡಿಯೋವಾಸ್ಕುಲರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಅಧ್ಯಯನದ ಮೂಲಕ ತಿಳಿದುಬಂದಿದೆ.

ಆರೋಗ್ಯಕರ ಹೃದಯಕ್ಕೆ 8 ಗಂಟೆಗಳ ನಿದ್ದೆ ಅಗತ್ಯ:

ನ್ಯೂಯಾರ್ಕ್‌ನ ಹೃದಯರಕ್ತನಾಳದ ಸಂಶೋಧನಾ ಸಂಸ್ಥೆಯ ನಿರ್ದೇಶಕರು ಅಧ್ಯಯನಕ್ಕಾಗಿ ಕೆಲವು ಆರೋಗ್ಯವಂತ ಸ್ವಯಂಸೇವಕರ ಮಾದರಿಯನ್ನು ತೆಗೆದುಕೊಂಡು, ಅಂದರೆ 6 ವಾರಗಳವರೆಗೆ ದಿನಕ್ಕೆ ಒಂದೂವರೆ ಗಂಟೆ ಕಡಿಮೆ ನಿದ್ದೆ ಮಾಡಿದವರು. ಇದರಲ್ಲಿ ನಿರಂತರ ಕಡಿಮೆ ನಿದ್ದೆಯಿಂದ ಕಾಂಡಕೋಶಗಳಲ್ಲಿ ವ್ಯತ್ಯಾಸ ಉಂಟಾಗಿ ಬಿಳಿರಕ್ತಕಣಗಳು ಹೆಚ್ಚಾದ ಕಾರಣ ಉರಿಯೂತ ಹೆಚ್ಚಾಯಿತು ಎಂದು ತಿಳಿದುಬಂದಿದೆ.

ಈ ಸಂಶೋಧನೆಯ ಸಮಯದಲ್ಲಿ, 35 ವರ್ಷ ವಯಸ್ಸಿನ ಕೆಲವು ಜನರನ್ನು ಮೊದಲ 6 ವಾರಗಳವರೆಗೆ 8 ಗಂಟೆಗಳ ಕಾಲ ಮಲಗಲು ಕೇಳಲಾಯಿತು ಮತ್ತು ನಂತರ ಅವರ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಯಿತು ಮತ್ತು ಅದರಲ್ಲಿರುವ ಪ್ರತಿರಕ್ಷಣಾ ಕೋಶಗಳ ಡೇಟಾವನ್ನು ಹೊರತೆಗೆಯಲಾಯಿತು. ಇದರ ನಂತರ, ಅವರ ನಿದ್ರೆಯನ್ನು 6 ವಾರಗಳವರೆಗೆ ಪ್ರತಿದಿನ 90 ನಿಮಿಷಗಳವರೆಗೆ ಕಡಿಮೆಗೊಳಿಸಲಾಯಿತು ಮತ್ತು ನಂತರ ರಕ್ತದ ಮಾದರಿಯನ್ನು ತೆಗೆದುಕೊಂಡು ಪ್ರತಿರಕ್ಷಣಾ ಕೋಶಗಳ ಡೇಟಾವನ್ನು ಹೊರತೆಗೆದ ನಂತರ, ಆರೋಗ್ಯಕರ ಜೀವಕೋಶಗಳು ಅದರಲ್ಲಿ ಕಡಿಮೆಯಾಗುತ್ತವೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಮೆದುಳು ತಿನ್ನುವ ಅಮೀಬಾ ಎಂದೇ ಆತಂಕ ಸೃಷ್ಟಿಸಿರುವ ನೇಗ್ಲೇರಿಯಾ ಫೌಲೆರಿ ಸೋಂಕು ಎಂದರೇನು?

ಕಡಿಮೆ ನಿದ್ರೆ ಹೃದಯಕ್ಕೆ ಅಪಾಯಕಾರಿ:

ಕಡಿಮೆ ನಿದ್ರೆಯು ಉರಿಯೂತವನ್ನು ಹೆಚ್ಚಿಸುತ್ತದೆ ಎಂದು ಈ ಅಧ್ಯಯನವು ಹೇಳುತ್ತದೆ. ಈ ಸಂಶೋಧನೆಯ ಸಮಯದಲ್ಲಿ, ಸ್ವಲ್ಪ ಕಡಿಮೆ ಮಲಗುವ ಜನರನ್ನು ತೆಗೆದುಕೊಳ್ಳಲಾಯಿತು. ಕಡಿಮೆ ಅವಧಿ ಮಲಗುವುದರಿಂದ ಉರಿಯೂತವನ್ನು ಹೆಚ್ಚಿಸುತ್ತದೆ. ಸೋಂಕು, ಗಾಯ ಅಥವಾ ಸಣ್ಣ ಅನಾರೋಗ್ಯವನ್ನು ತಡೆಗಟ್ಟಲು ದೇಹದಲ್ಲಿ ಸ್ವಲ್ಪ ಉರಿಯೂತದ ಅಗತ್ಯವಿದ್ದರೂ, ಅದು ತುಂಬಾ ಹೆಚ್ಚಾದರೆ ಅದು ಅಪಾಯಕಾರಿ. ವಿಶೇಷವಾಗಿ ಉರಿಯೂತವು ನಿರಂತರವಾಗಿ ಮತ್ತು ಅಧಿಕವಾಗಿದ್ದರೆ, ಅದು ಹೃದ್ರೋಗಗಳು ಅಥವಾ ಆಲ್ಝೈಮರ್ನಂತಹ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಸಂಶೋಧನೆಯು ತಿಳಿಸಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 3:54 pm, Wed, 28 December 22

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!