AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Winter Sleeping: ಚಳಿಗಾಲದಲ್ಲಿ ನೀವು ಜಾಸ್ತಿ ನಿದ್ರಿಸುತ್ತೀರಾ, ಹಾಗಾದರೆ ನಿಮಗೆ ಈ ಸಮಸ್ಯೆಗಳು ಕಾಡಬಹುದು

ಬೇಸಿಗೆ ಕಾಲಕ್ಕೆ ಹೋಲಿಸಿದರೆ ಚಳಿಗಾಲದಲ್ಲಿ ಸಾಕಷ್ಟು ತಂಪಾದ ವಾತಾವರಣ ಇರುತ್ತದೆ. ಆ ಸಮಯದಲ್ಲಿ ಸಾಕಷ್ಟು ಸಮಯ ಮನೆಯೊಳಗೆ ನಿದ್ರಿಸಿಕೊಂಡೆ ಕಾಲ ಕಳೆಯುವವರೇ ಹೆಚ್ಚು. ಏಕೆಂದರೆ ನಿಮ್ಮ ನಿದ್ರೆಯ ಅಭ್ಯಾಸಗಳು ಋತುಮಾನಕ್ಕೆ ಅನುಗುಣವಾಗಿ ಬದಲಾಗುತ್ತವೆ.

Winter Sleeping: ಚಳಿಗಾಲದಲ್ಲಿ ನೀವು ಜಾಸ್ತಿ ನಿದ್ರಿಸುತ್ತೀರಾ, ಹಾಗಾದರೆ ನಿಮಗೆ ಈ ಸಮಸ್ಯೆಗಳು ಕಾಡಬಹುದು
ಸಾಂದರ್ಭಿಕ ಚಿತ್ರImage Credit source: Shutterstock
TV9 Web
| Edited By: |

Updated on:Dec 27, 2022 | 2:52 PM

Share

ಚಳಿಗಾಲದಲ್ಲಿ ಬೆಚ್ಚಗೆ ಹೊದಿಕೆ ಹೊತ್ತು ದಿನ ಪೂರ್ತಿ ಮಲಗಬೇಕೆಂದು ಅನಿಸುವುದು ಸಹಜ. ಆದರೆ ಇಂತಹ ಅಭ್ಯಾಸಗಳು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ? ಈ ಚಳಿಗಾಲದಲ್ಲಿ ಅತಿಯಾಗಿ ಮಲಗುವುದು ನಿಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಆರೋಗ್ಯ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ. ಬೇಸಿಗೆ ಕಾಲಕ್ಕೆ ಹೋಲಿಸಿದರೆ ಚಳಿಗಾಲದಲ್ಲಿ ಸಾಕಷ್ಟು ತಂಪಾದ ವಾತಾವರಣ ಇರುತ್ತದೆ. ಜೊತೆಗೆ ಚಳಿಗಾಲದಲ್ಲಿ ಹೊರಗಡೆ ಹೋಗಲು ಮನಸ್ಸು ಬಯಸುವುದಿಲ್ಲ. ಆ ಸಮಯದಲ್ಲಿ ಸಾಕಷ್ಟು ಸಮಯ ಮನೆಯೊಳಗೆ ನಿದ್ರಿಸಿಕೊಂಡೆ ಕಾಲ ಕಳೆಯುವವರೇ ಹೆಚ್ಚು. ಏಕೆಂದರೆ ನಿಮ್ಮ ನಿದ್ರೆಯ ಅಭ್ಯಾಸಗಳು ಋತುಮಾನಕ್ಕೆ ಅನುಗುಣವಾಗಿ ಬದಲಾಗುತ್ತವೆ.

ವೈದ್ಯರು ಹೇಳುವುದೇನು?

ನಿದ್ರೆಯು ನಿಮ್ಮ ಆಂತರಿಕ ಸಮಯಪಾಲನಾ ಕೋಶಗಳಾದ ಸಿರ್ಕಾಡಿಯನ್ ಪ್ರಕ್ರಿಯೆಗಳಿಂದ ಪ್ರಭಾವಿತವಾಗಿರುತ್ತದೆ. ಇದರಿಂದಾಗಿ ಋತುಮಾನಕ್ಕೆ ಅನುಗುಣವಾಗಿ ನಿದ್ರೆಯ ಅಭ್ಯಾಸಗಳು ಬದಲಾಗುತ್ತಿರುತ್ತದೆ ಎಂದು ಹೈದರಾಬಾದ್‌ನ ಯಶೋದಾ ಹಾಸ್ಪಿಟಲ್ಸ್‌ನ ಆರೋಗ್ಯ ಸಲಹೆಗಾರ ಡಾ ವಿಶ್ವೇಶ್ವರನ್ ಬಾಲಸುಬ್ರಮಣಿಯನ್ ಅವರು ವಿವರಿಸುತ್ತಾರೆ. ಚಳಿಗಾಲದ ಸಮಯದಲ್ಲಿ ಸೂರ್ಯನ ತಾಪಮಾನವು ಸಾಕಷ್ಟು ಕಡಿಮೆ ಇರುವುದರಿಂದ ವಾತಾವರಣವು ಸ್ವಲ್ಪ ಕತ್ತಲು ಕವಿದಂತೆ ಇರುತ್ತದೆ. ಜೊತೆಗೆ ತಂಪಾದ ಗಾಳಿ ನಿಮ್ಮನ್ನು ನಿದ್ದೆಗೆ ಜಾರುವಂತೆ ಮಾಡುತ್ತದೆ ಎಂದು ಫರಿದಾಬಾದ್​ನ ಅಮೃತಾ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ ವಿಕಾಸ್ ಗೌರ್ ಹೇಳುತ್ತಾರೆ.

ಏಕೆ ಚಳಿಗಾಲದಲ್ಲಿ ಜಾಸ್ತಿ ನಿದ್ರೆ ಬರುತ್ತದೆ?

ಮಾನವನ ದೇಹವು ಮೆಲಟೋನಿನ್ ಎಂಬ ನಿದ್ರೆಯ ಹಾರ್ಮೋನ್​ನ್ನು ಉತ್ಪಾದಿಸುತ್ತದೆ. ಬೆಳಗಿನ ಸಮಯದಲ್ಲಿ ಮೆಲಟೋನಿನ್ ಮಟ್ಟವು ಕಡಿಮೆಯಾಗುತ್ತದೆ. ಇದು ನಿಮ್ಮನ್ನು ಎಚ್ಚರವಾಗುವಂತೆ ಮಾಡುತ್ತದೆ. ಸಾಮಾನ್ಯವಾಗಿ ತಿಳಿದಿರುವಂತೆ, ಬೇಸಿಗೆಯಲ್ಲಿ, ಹಗಲಿನ ಸಮಯ ಹೆಚ್ಚಾಗುತ್ತದೆ ಮತ್ತು ಚಳಿಗಾಲದಲ್ಲಿ, ರಾತ್ರಿಯ ಸಮಯದಲ್ಲಿ ಹೆಚ್ಚಾಗುತ್ತದೆ. ಪರಿಣಾಮವಾಗಿ, ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯಗಳಲ್ಲಿನ ಬದಲಾವಣೆಗಳು ಮೆಲಟೋನಿನ್ ಮಟ್ಟಗಳು ಮತ್ತು ರಾತ್ರಿಯಲ್ಲಿ ನಿದ್ದೆ ಮಾಡಲು ಪ್ರಾರಂಭಿಸುವ ಸಮಯದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳುತ್ತಾರೆ.

ಇದನ್ನು ಓದಿ: ಆಘಾತಕಾರಿ ಮಿದುಳಿನ ಗಾಯ PTSD ಆಲ್ಝೈಮರ್​ಗೆ ಸಂಬಂಧಿಸಿದೆ: ಸಂಶೋಧನೆ

ಚಳಿಗಾಲದಲ್ಲಿ ದೇಹವು ಹಗಲು ಮತ್ತು ರಾತ್ರಿಯ ನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಹೊಂದಿರುವುದಿಲ್ಲ, ಇದು ನಿದ್ದೆ ಮಾಡುವ ಬಯಕೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ರಾತ್ರಿಯಲ್ಲಿ ನಿದ್ರಿಸಲು ಕಷ್ಟವಾಗುತ್ತದೆ ಎಂದು ಡಾ ಗೌರ್ ಹೇಳುತ್ತಾರೆ. ಚಳಿಗಾಲದಲ್ಲಿ ಹೆಚ್ಚಾಗಿ ಮಲಗುವುದು ರಾತ್ರಿ ಹೊತ್ತಿನಲ್ಲಿ ನಿದ್ರಾಹೀನತೆಗೆ ಕಾರಣವಾಗಬಹುದು. ಆದ್ದರಿಂದ ಪ್ರತಿದಿನ 10-30 ನಿಮಿಷಗಳ ಕಾಲ ನಿಯಮಿತವಾದ ದೈಹಿಕ ವ್ಯಾಯಾಮವು ರಾತ್ರಿಯಲ್ಲಿ ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಅದರಲ್ಲೂ ರಾತ್ರಿ ಊಟದ ಸಮಯದಲ್ಲಿ ಅತಿಯಾಗಿ ತಿನ್ನುವುದನ್ನು ತಪ್ಪಿಸಿ. ಹಗಲು ನಿದ್ದೆ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ ಎಂದು ಸಲಹೆ ನೀಡುತ್ತಾರೆ.

ಆರೋಗ್ಯಕ್ಕೆ  ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 2:17 pm, Tue, 27 December 22

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್