Dates Benefits: ಚಳಿಗಾಲದಲ್ಲಿ ಒಣ ಖರ್ಜೂರ ಸೇವನೆಯ ಪ್ರಯೋಜನಗಳು ತಿಳಿಯಿರಿ
ಡ್ರೈ ಪ್ರೊಟ್ಸ್ನಲ್ಲಿ ಹಲವಾರು ಪೋಷಕಾಂಶಗಳಿವೆ. ಇದು ನಮ್ಮನ್ನು ಆರೋಗ್ಯವಾಗಿರಿಸವುದು ಮಾತ್ರವಲ್ಲದೆ, ದಿನವಿಡೀ ಶಕ್ತಿಯನ್ನು ತುಂಬುತ್ತದೆ. ಖರ್ಜೂರವು ಅಂತಹ ಹಣ್ಣುಗಳಲ್ಲಿ ಒಂದಾಗಿದೆ.
Updated on: Dec 26, 2022 | 10:30 PM

ನಮ್ಮ ಆರೋಗ್ಯದ ಮೇಲೆ ಒಣ ಹಣ್ಣುಗಳು ವಿಭಿನ್ನ ಪ್ರಾಮುಖ್ಯತೆಯನ್ನು ಬೀರಿತ್ತವೆ. ಡ್ರೈ ಪ್ರೊಟ್ಸ್ನಲ್ಲಿ ಹಲವಾರು ಪೋಷಕಾಂಶಗಳಿವೆ. ಇದು ನಮ್ಮನ್ನು ಆರೋಗ್ಯವಾಗಿರಿಸವುದು ಮಾತ್ರವಲ್ಲದೆ, ದಿನವಿಡೀ ಶಕ್ತಿಯನ್ನು ತುಂಬುತ್ತದೆ. ಖರ್ಜೂರವು ಅಂತಹ ಹಣ್ಣುಗಳಲ್ಲಿ ಒಂದಾಗಿದೆ.

ಚಳಿಗಾಲದಲ್ಲಿ ಹೃದ್ರೋಗ ಸಮಸ್ಯೆ ಉಂಟಾಗು ಸಾಧ್ಯತೆ ಹೆಚ್ಚಿರುತ್ತದೆ, ಆದ್ದರಿಂದ ಖಂಡಿತವಾಗಿ ಅವುಗಳನ್ನು ನಮ್ಮ ಆಹಾರದ ಭಾಗವಾಗಿಸಿಕೊಳ್ಳಬಹುದು, ಖರ್ಜೂರದಲ್ಲಿರುವ ಪೊಟ್ಯಾಶಿಯಂ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

ಖರ್ಜೂರವನ್ನು ತಿನ್ನುವ ಮೂಲಕ ಮಲಬದ್ಧತೆಯನ್ನು ಹೋಗಲಾಡಿಸುತ್ತದೆ, ಏಕೆಂದರೆ ಇದರಲ್ಲಿರುವ ಫೈಬರ್ ಮಲವನ್ನು ಭಾರವಾಗಿಸುತ್ತದೆ ಮತ್ತು ದೇಹದಿಂದ ಹೊರಹಾಕುತ್ತದೆ.

ಖರ್ಜೂರದಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಖರ್ಜೂರ ರಾಮಬಾಣ ಎಂದೇ ಹೇಳಬಹುದು. ನಿಯಮಿತವಾಗಿ ಖರ್ಜೂರವನ್ನು ಸೇವಿಸುವುದರಿಂದ ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಹೋಗಲಾಡಿಸಬಹುದು.

ಗರ್ಭಿಣಿಯರಿಗೆ ಖರ್ಜೂರ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಕಬ್ಬಿಣವು ತಾಯಿ ಮತ್ತು ಮಗುವಿಗೆ ತುಂಬಾ ಉಪಯುಕ್ತವಾಗಿದೆ. ಖರ್ಜೂರದಲ್ಲಿರುವ ಪೋಷಕಾಂಶಗಳು ಗರ್ಭಾಶಯದ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
























