Covid Alert: ಚೀನಾದಿಂದ ಬರುವ ಪ್ರಯಾಣಿಕರಿಗೆ ಅಮೆರಿಕದಲ್ಲಿ ಕೊವಿಡ್ ಪರೀಕ್ಷೆ ಕಡ್ಡಾಯ
ಚೀನಾದಿಂದ ಬರುವ ಪ್ರಯಾಣಿಕರ ಮೇಲೆ ಇತರೆ ದೇಶಗಳು ಹೆಚ್ಚಿನ ನಿಗಾ ಇರಿಸಿವೆ. ಅಮೆರಿಕದಲ್ಲಿ ಕೂಡ ಚೀನಾದಿಂದ ವಿಮಾನದಲ್ಲಿ ಆಗಮಿಸುವ ಎಲ್ಲ ಪ್ರಯಾಣಿಕರಿಗೂ ಕೊವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.
ವಾಷಿಂಗ್ಟನ್: ಚೀನಾದಲ್ಲಿ ಕೊವಿಡ್-19 (COVID-19) ಸೋಂಕಿನ ಅಬ್ಬರ ಹೆಚ್ಚಾಗುತ್ತಲೇ ಇದೆ. ಚೀನಾದಿಂದಲೇ (China Covid Cases) 2 ವರ್ಷಗಳ ಹಿಂದೆ ಇಡೀ ವಿಶ್ವಾದ್ಯಂತ ಹರಡಿದ್ದ ಕೊರೊನಾವೈರಸ್ (Coronavirus) ಇದೀಗ ಹೊಸ ರೂಪಾಂತರದಲ್ಲಿ ಮತ್ತೆ ಆತಂಕ ಮೂಡಿಸಿದೆ. ಹೀಗಾಗಿ, ಚೀನಾದಿಂದ ಬರುವ ಪ್ರಯಾಣಿಕರ ಮೇಲೆ ಇತರೆ ದೇಶಗಳು ಹೆಚ್ಚಿನ ನಿಗಾ ಇರಿಸಿವೆ. ಅಮೆರಿಕದಲ್ಲಿ (United States) ಕೂಡ ಚೀನಾದಿಂದ ವಿಮಾನದಲ್ಲಿ ಆಗಮಿಸುವ ಎಲ್ಲ ಪ್ರಯಾಣಿಕರಿಗೂ ಕೊವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.
ಕೋವಿಡ್ ಪ್ರಕರಣಗಳ ರಾಷ್ಟ್ರವ್ಯಾಪಿ ಏರಿಕೆಗೆ ಪ್ರತಿಕ್ರಿಯೆಯಾಗಿ ಚೀನಾ ತನ್ನ ಆ್ಯಂಟಿವೈರಸ್ ನಿಯಮಗಳನ್ನು ಸಡಿಲಗೊಳಿಸಿದೆ. ಚೀನಾದಲ್ಲಿ ಹೊಸ ಸೋಂಕುಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದರೂ ಚೀನಾದಲ್ಲಿ ಇನ್ನೂ ಕೊವಿಡ್ ನಿಯಂತ್ರಣ ಸಂಪೂರ್ಣವಾಗಿ ಜಾರಿಯಾಗಿಲ್ಲ.
ಇದನ್ನೂ ಓದಿ: Air India Express: ಯುಎಇಯಿಂದ ಭಾರತಕ್ಕೆ ಪ್ರಯಾಣಿಸುವವರಿಗೆ ಕೊವಿಡ್ ಮಾರ್ಗಸೂಚಿ ಘೋಷಿಸಿದ ಏರ್ ಇಂಡಿಯಾ ಎಕ್ಸ್ಪ್ರೆಸ್
ಜನವರಿ 5ರಿಂದ 2 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ವಿಮಾನ ಪ್ರಯಾಣಿಕರು ಚೀನಾ, ಹಾಂಗ್ ಕಾಂಗ್ ಅಥವಾ ಮಕಾವೊದಿಂದ ಹೊರಡುವ 2 ದಿನಗಳ ಮೊದಲು ಕೊವಿಡ್ ಪರೀಕ್ಷೆ ಮಾಡಿಸಿಕೊಂಡು, ಕೊವಿಡ್ ನೆಗೆಟಿವ್ ಫಲಿತಾಂಶ ಬಂದರೆ ಮಾತ್ರ ಅಮೆರಿಕಕ್ಕೆ ಪ್ರವೇಶಿಸಲು ಅನುಮತಿ ನೀಡುವುದಾಗಿ ಅಮೆರಿಕದ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ತಮ್ಮ ಪ್ರಯಾಣಕ್ಕೆ 10 ದಿನಗಳ ಮೊದಲು ಕೊವಿಡ್ ಪಾಸಿಟಿವ್ ಪರೀಕ್ಷೆ ಮಾಡಿಸಿಕೊಳ್ಳುವ ಪ್ರಯಾಣಿಕರು ನೆಗೆಟಿವ್ ಪರೀಕ್ಷೆಯ ಫಲಿತಾಂಶದ ಬದಲಿಗೆ ಚೇತರಿಕೆಯ ಸಾಕ್ಷಿಯನ್ನು ನೀಡಬಹುದು ಎಂದು ಫೆಡರಲ್ ಅಧಿಕಾರಿಗಳು ಸೂಚಿಸಿದ್ದಾರೆ. ಚೀನಾದಲ್ಲಿ ಕೊವಿಡ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ಚೀನಾ ಪ್ರತಿದಿನ ಕೊವಿಡ್ ಸೋಂಕಿತರ ಪಟ್ಟಿಯನ್ನು ಬಿಡುಗಡೆ ಮಾಡುವುದನ್ನೇ ನಿಲ್ಲಿಸಿದೆ. ಇದು ಬೇರೆ ದೇಶಗಳಲ್ಲಿ ಕಳವಳ ಉಂಟುಮಾಡಿದೆ.
ಇದನ್ನೂ ಓದಿ: ಚೆನ್ನೈ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಬಂದ ಇಬ್ಬರಿಗೆ ಕೊವಿಡ್ ಸೋಂಕು ದೃಢ
ಕೊವಿಡ್ನಿಂದ ಚೀನಾ 2 ಮಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿನ ಜನರನ್ನು ಕಳೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಆದರೆ ಕೆಲವು ಜಾಗತಿಕ ಆರೋಗ್ಯ ತಜ್ಞರು ಕೊರೊನಾವೈರಸ್ ಪ್ರತಿದಿನ 1 ಮಿಲಿಯನ್ ಜನರಿಗೆ ಸೋಂಕು ತಗುಲಿಸಬಹುದು ಎಂದು ಅಂದಾಜಿಸಿದ್ದಾರೆ.