ತಾಯಿಯ ಕೊನೆಯ ಆಸೆ ಪೂರೈಸಲು ಐಸಿಯುನಲ್ಲಿಯೇ ಮಗಳ ಮದುವೆ
Bihar News: ಸಹಾಯಕ ನರ್ಸ್ ಆಗಿದ್ದ ಪೂನಂ ಕೊವಿಡ್ ಅವಧಿಯ ನಂತರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಕೊನೆಯ ಆಸೆಯನ್ನು ಐಸಿಯುನಲ್ಲಿಯೇ ನೆರವೇರಿಸಲಾಯಿತು. ಎರಡು ಗಂಟೆಗಳ ನಂತರ ಅವರು ಕೊನೆಯುಸಿರೆಳೆದರು.
ಮದುವೆ ಎಂದರೆ ಹೀಗೇ ಆಗಬೇಕೆಂಬ ನಿಯಮವೇನೂ ಇಲ್ಲ. ಹಾಗೆಂದು ಎಲ್ಲವೂ ನಮ್ಮ ಎಣಿಕೆಯಂತೆಯೇ ನೆರವೇರುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ನಿಭಾವಣೆ ಮಾಡುವುದು ಅನಿವಾರ್ಯವಾಗುತ್ತದೆ. ಅದರಲ್ಲಿಯೂ ಮದುವೆ ಎನ್ನುವುದು ಭಾವಬಂಧಕ್ಕೆ ಸಂಬಂಧಿಸಿದ್ದು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ವಧುವಿನ ತಾಯಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದಾರೆ. ಮಗಳ ಮದುವೆಯನ್ನು ನೋಡುವುದೇ ಅವರ ಕೊನೆಯ ಆಸೆಯಾಗಿತ್ತು. ಅಂತೂ ಅದು ಸಾಧ್ಯವಾಗಿದೆ.
मरती मां की ख्वाहिश देख ICU में हुई बेटी की शादी #Bihar #ICU pic.twitter.com/vpxDbcJbnr
ಇದನ್ನೂ ಓದಿ— Aman Kumar Dube (@Aman_Journo) December 26, 2022
ಬಿಹಾರದ ಗುರಾರು ಬ್ಲಾಕ್ನ ಬಾಲಿ ಗ್ರಾಮದ ನಿವಾಸಿ ಪೂನಂ ಕುಮಾರಿ ವರ್ಮಾ ಎಂಬುವವರ ಆರೋಗ್ಯ ತೀರಾ ಬಿಗಡಾಯಿಸಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗಯಾದ ಖಾಸಗಿ ಆಸ್ಪತ್ರೆಯ ವೈದ್ಯರು ಇವರ ಆರೋಗ್ಯ ಚಿಂತಾಜನಕವಾಗಿದೆ ಯಾವ ಸಂದರ್ಭದಲ್ಲಿಯೂ ಏನೂ ಆಗಬಹುದು ಎಂದು ಮೊದಲೇ ಹೇಳಿದ್ದರು. ಹಾಗಾಗಿ ಪೂನಂ ತನ್ನ ಮಗಳು ಚಾಂದನಿ (26)ಯ ಮದುವೆ ನೋಡುವುದು ತನ್ನ ಕೊನೆಯ ಆಸೆಯಾಗಿದ್ದು ಅದನ್ನು ನೆರವೇರಿಸಿ ಕೊಡಬೇಕೆಂದು ಕುಟುಂಬಸ್ಥರಲ್ಲಿ ವಿನಂತಿಸಿಕೊಂಡಳು.
ಇದನ್ನೂ ಓದಿ : ಅಂಗಾಂಗದಾನ ಪ್ರತಿಜ್ಞೆಯ ಮೂಲಕ ನವದಾಂಪತ್ಯಕ್ಕೆ ಕಾಲಿಡಲಿರುವ ಆಂಧ್ರಪ್ರದೇಶದ ಜೋಡಿ
ಆ ಪ್ರಕಾರ ಗುರುವಾ ಪೊಲೀಸ್ ಠಾಣೆಯ ವ್ಯಾಪ್ತಿಯ ಸೇಲಂಪುರದ ನಿವಾಸಿ ಸುಮಿತ್ ಗೌರವ್ (28) ಅವರೊಂದಿಗೆ ಚಾಂದನಿಯ ಮದುವೆ ನೆರವೇರಿತು. ಆದರೆ ಮದುವೆಯಾದ ಎರಡು ಗಂಟೆಗಳ ನಂತರ ವಧುವಿನ ತಾಯಿ ಪೂನಂ ನಿಧನರಾದರು. ಇಂಥ ಸಂಕಟಮಯ, ಸಂದಿಗ್ಧ ಮತ್ತು ಭಾವನಾತ್ಮಕ ಸಂದರ್ಭಕ್ಕೆ ಅಲ್ಲಿದ್ದವರೆಲ್ಲ ಸಾಕ್ಷಿಯಾದರು.
ಇದನ್ನೂ ಓದಿ : ಹೇಳಿ ಕೇಳಿ ಗೂಳಿ, ಆಮಂತ್ರಣ ಬೇಕೇ ಮದುವೆಗೆ? ವೈರಲ್ ಆದ ವಿಡಿಯೋ ನೋಡಿ
ಸುಮಿತ್ ಮತ್ತು ಚಾಂದನಿಯ ನಿಶ್ಚಿತಾರ್ಥ ಇದೇ 26ರಂದು ನೆರವೇರಿಸಲು ನಿರ್ಧರಿಸಲಾಗಿತ್ತು. ಆದರೆ ವಧುವಿನ ತಾಯಿ ಪೂನಂ ತಮ್ಮ ಕೊನೆಯ ಆಸೆಯನ್ನು ನೆರವೇರಿಸಲು ಕೇಳಿಕೊಂಡಾಗ ಎರಡೂ ಕುಟುಂಬಗಳು ಈ ಮಾರ್ಪಾಡನ್ನು ಮಾಡಿಕೊಂಡವು. ಹಾಗಾಗಿ ಆಸ್ಪತ್ರೆಯಲ್ಲಿಯೇ ವಧುವರರು ಹಾರ ಬದಲಾಯಿಸಿಕೊಂಡರು. ಕುಟುಂಬದ ನಾಲ್ಕು ಜನ ಮಾತ್ರ ಹಾಜರಿದ್ದರು.
ಇದನ್ನೂ ಓದಿ : ರಾ ರಾ ರಕ್ಕಮ್ಮ; ತನ್ನ ಮದುವೆಯ ದಿನ ವಧು ನರ್ತಿಸಿದ ವಿಡಿಯೋ ವೈರಲ್
‘ನನ್ನ ತಾಯಿ ಪೂನಂ ಮಗಧ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಹಾಯಕ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೊರೊನಾ ಅವಧಿಯ ನಂತರ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಹೃದ್ರೋಗವೂ ಇತ್ತು. ಅವರ ಕೊನೆಯ ಆಸೆಯನ್ನು ನೆರವೇರಿಸಲು ಆಸ್ಪತ್ತೆಯಲ್ಲಿಯೇ ಮದುವೆಯಾದೆ. ಈಗ ಅವರು ನಮ್ಮೊಂದಿಗಿಲ್ಲದೇ ಇರುವುದು ದೊಡ್ಡ ದುಃಖ.’ ಎಂದಿದ್ದಾರೆ ವಧು ಚಾಂದನಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:08 pm, Tue, 27 December 22