AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಗಾಂಗದಾನ ಪ್ರತಿಜ್ಞೆಯ ಮೂಲಕ ನವದಾಂಪತ್ಯಕ್ಕೆ ಕಾಲಿಡಲಿರುವ ಆಂಧ್ರಪ್ರದೇಶದ ಜೋಡಿ

Organ Donation: 'ಅಂಗಾಂಗ ದಾನ ಮಾಡಿ ಜೀವರಕ್ಷಕರಾಗಿ' ಲಗ್ನಪತ್ರಿಕೆಯಲ್ಲಿ ವಧುವರರು ಪ್ರಕಟಿಸಿರುವ ಈ ಸಂದೇಶದಿಂದ ಪ್ರೇರೇಪಣೆಗೊಂಡ ಸುಮಾರು 60 ಜನ ಸಂಬಂಧಿಕರು ಅಂಗಾಂಗದಾನಕ್ಕೆ ಅರ್ಜಿ ಹಾಕಲು ತೀರ್ಮಾನಿಸಿದ್ದಾರೆ.

ಅಂಗಾಂಗದಾನ ಪ್ರತಿಜ್ಞೆಯ ಮೂಲಕ ನವದಾಂಪತ್ಯಕ್ಕೆ ಕಾಲಿಡಲಿರುವ ಆಂಧ್ರಪ್ರದೇಶದ ಜೋಡಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Dec 27, 2022 | 2:19 PM

Share

ನೀವು ಈತನಕ ಸಾಕಷ್ಟು ಮದುವೆಗಳಿಗೆ ಸಾಕ್ಷಿಯಾಗಿದ್ದೀರಿ. ಆದರೆ ಈಗ ನಡೆಯಲಿರುವ ಮದುವೆಯ ವೈಶಿಷ್ಟ್ಯ ಕೇಳಿದರೆ ಖಂಡಿತ ಅಚ್ಚರಿಗೆ ಒಳಗಾಗುತ್ತೀರಿ. ಡಿ. 29ರಂದು ಆಂಧ್ರಪ್ರದೇಶದಲ್ಲಿ ಈ ವಿಶೇಷ ಮದುವೆ ಏರ್ಪಾಡಾಗಿದೆ.  ಶ್ರೀಮಂತಿಕೆ, ಆಡಂಬರ, ಅಭಿರುಚಿ ಅಥವಾ ಇನ್ನ್ಯಾವುದೋ ಕಲೆ, ಸಾಹಸ ಪ್ರದರ್ಶನದ ಹಿನ್ನೆಲೆಯಿಂದ ಈ ಮದುವೆ ಆಯೋಜನೆಗೊಂಡಿಲ್ಲ. ಬದಲಾಗಿ ಮಾನವೀಯ ಪ್ರಜ್ಞೆಗೆ ಸಾಕ್ಷಿಯಾಗಲಿದೆ ಈ ಮದುವೆ. ಆ ದಿನ ನವಜೋಡಿ ಅಂಗಾಂಗದಾನ ಪ್ರತಿಜ್ಞೆ ಮೂಲಕ ದಾಂಪತ್ಯಕ್ಕೆ ಕಾಲಿಡಲಿದೆ. ಈ ಜೋಡಿಯ ನಿರ್ಧಾರದಿಂದ ಸ್ಫೂರ್ತಿಗೊಂಡ ಸುಮಾರು 60 ಜನ ಸಂಬಂಧಿಕರು ಅಂಗಾಂಗ ದಾನ ಅರ್ಜಿಗಳನ್ನು ಭರ್ತಿ ಮಾಡಲು ಆಸಕ್ತಿ ತೋರಿದ್ದಾರೆ.

ಸತೀಶ್ ಕುಮಾರ್ ಮತ್ತು ಸಜೀವ ರಾಣಿ ಇದೇ 29ರಂದು ಪೂರ್ವ ಗೋದಾವರಿ ಜಿಲ್ಲೆಯ ನಿಡದವೊಲು ಪಟ್ಟಣದ ಬಳಿ ಇರುವ ವೆಲಿವೆಣ್ಣು ಗ್ರಾಮದಲ್ಲಿ ವಿವಾಹಬಂಧಕ್ಕೆ ಒಳಗಾಗಲಿದ್ದಾರೆ. ಈ ಸಂದರ್ಭದಲ್ಲಿ ಸ್ವಯಂಪ್ರೇರಿತರಾಗಿ ಅವರು ಅಂಗಾಂಗದಾನ ಪ್ರತಿಜ್ಞೆ ಕೈಗೊಳ್ಳಲಿದ್ದಾರೆ. ಇವರಿಂದ ಪ್ರೇರೇಪಣೆಗೊಂಡ ಅವರ ಸಂಬಂಧಿಗಳು ತಾವೂ ಅಂಗಾಗಂದಾನ ಅರ್ಜಿ ಭರ್ತಿ ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮದುವೆಯ ಮೂಲಕ ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎನ್ನುವ ಇರಾದೆಯಿಂದ ಈ ಜೋಡಿ ಈ ನಿರ್ಧಾರ ಕೈಗೊಂಡಿದೆ. ಲಗ್ನಪತ್ರಿಕೆಯಲ್ಲಿ, ‘ಅಂಗಾಂಗದಾನ ಮಾಡಿ ಜೀವರಕ್ಷಕರಾಗಿ’ ಎಂಬ ಸಂದೇಶ ಕಂಡ ಸಂಬಂಧಿಕರು ತಾವೂ ಈ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ. ವಿಶಾಖಪಟ್ಟಣಂನ ಸಾವಿತ್ರಿಬಾಯಿ ಫುಲೆ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷೆ ಜಿ. ಸೀತಾಮಹಾಲಕ್ಷ್ಮಿ ಮದುವೆಯ ದಿನದಂದು ಅಂಗಾಂಗ ದಾನದ ಅರ್ಜಿ ನಮೂನೆಗಳನ್ನು ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಇದನ್ನೂ ಓದಿ : ಮದುವೆ ಮಂಟಪದ ಹೊರಗೆ ಝೊಮ್ಯಾಟೋ ಡೆಲಿವರಿ ಏಜೆಂಟ್ ಡ್ಯಾನ್ಸ್​ ವಿಡಿಯೋ ವೈರಲ್

ವಿಲ್ಲಿಂಗ್​ ಟು ಹೆಲ್ಪ್ ಫೌಂಡೇಶನ್‌ನ ಸಹಕಾರದೊಂದಿಗೆ ಸತೀಶ್ ಕುಮಾರ್ ತಮ್ಮ ಮದುವೆಯ ದಿನದಂದು ಅಂಗಾಂಗದಾನ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಿದರು. ಅಂಗಾಂಗದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಈ ವಿಶೇಷ ಮದುವೆಯ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:07 pm, Tue, 27 December 22

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ