ನಾಯಿಯ ದಾಳಿಯಿಂದ ತನ್ನ ‘ಅಣ್ಣ’ನನ್ನು ರಕ್ಷಿಸಿದ ಜರ್ಮನ್ ಶೆಫರ್ಡ್​

German Shephard: ನಾಯಿಗಳು ಅತೀ ಸೂಕ್ಷ್ಮ ಸಂವೇದನೆಯುಳ್ಳ ಪ್ರಾಣಿಗಳು. ಇನ್ನೊಂದು ನಾಯಿ ದಾಳಿ ಮಾಡುವ ಮೂಡ್​ನಲ್ಲಿದೆ ಎನ್ನುವುದನ್ನು ಸೆಕೆಂಡುಗಳ ವೇಗದಲ್ಲಿ ಅರ್ಥ ಮಾಡಿಕೊಂಡು ರಕ್ಷಣೆಗೆ ಸನ್ನದ್ಧರಾಗುತ್ತವೆ. ನೋಡಿ ಈ ವಿಡಿಯೋ.

ನಾಯಿಯ ದಾಳಿಯಿಂದ ತನ್ನ ‘ಅಣ್ಣ’ನನ್ನು ರಕ್ಷಿಸಿದ ಜರ್ಮನ್ ಶೆಫರ್ಡ್​
ಅಣ್ಣನನ್ನು ರಕ್ಷಿಸುತ್ತಿರುವ ಜರ್ಮನ್ ಶೆಫರ್ಡ್​
Follow us
TV9 Web
| Updated By: Digi Tech Desk

Updated on:Dec 27, 2022 | 10:57 AM

Viral Video: ತನ್ನ ಅಣ್ಣನೊಂದಿಗೆ ಈ ಜರ್ಮನ್​ ಶೆಫರ್​ ವಾಕಿಂಗ್​ ಬಂದಿದೆ. ಆದರೆ ವಾಕಿಂಗ್​ ಬಂದ ಇನ್ನೊಂದು ನಾಯಿಯು ಇದ್ದಕ್ಕಿದ್ದ ಹಾಗೆ ತನ್ನ ಪೋಷಕನಿಂದ ತಪ್ಪಿಸಿಕೊಂಡು ಬಂದು ಅಣ್ಣನ ಮೇಲೆ ದಾಳಿ ಮಾಡಲು ನೋಡಿದೆ. ಆಗ ಜರ್ಮನ್​ ಶೆಫರ್ಡ್​ ಶರವೇಗದಲ್ಲಿ ಅಣ್ಣನನ್ನು ತಳ್ಳಿ ಆ ನಾಯಿಯೊಂದಿಗೆ ಕಾದಾಡಿ ಅಣ್ಣನನ್ನು ರಕ್ಷಿಸಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಜರ್ಮನ್ ಶೆಫರ್ಡ್​ಗೆ ಶಭಾಷ್​ ಹೇಳುತ್ತಿದ್ದಾರೆ.

ಜರ್ಮನ್ ಶೆಫರ್ಡ್​ಗೆ ಅದೆಷ್ಟು ಬೇಗ ಅರ್ಥವಾಗುತ್ತದೆ ನೋಡಿ ಆ ನಾಯಿಯ ನಡೆವಳಿಕೆ ದಾಳಿಯ ಉದ್ದೇಶದಿಂದ ಕೂಡಿದೆ ಎಂದು.  ಹೇಗೆ ಅವನ ಮೇಲೆ ಬಿದ್ದು ಅವನನ್ನು ರಕ್ಷಿಸುತ್ತದೆ. ಎಲ್ಲವೂ ಸೆಕೆಂಡುಗಳ ಲೆಕ್ಕದಲ್ಲಿ ನಡೆದುಹೋಗುತ್ತದೆ. ಪಾಸಿಟಿವ್ ನ್ಯೂಸ್​ ಎಂಬ ಇನ್​ಸ್ಟಾಗ್ರಾಂ ಪುಟವು ಈ ವಿಡಿಯೋ ಅನ್ನು ಹಂಚಿಕೊಂಡಿದೆ. ಈ ಲೀಡರ್​ಗೆ ಸನ್ಮಾನ ಮಾಡಬೇಕು ಎಂದಿದ್ದಾರೆ ಕೆಲವರು. 2.8 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 16,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ : ವಿಮಾನ ನಿಲ್ದಾಣದ ಸ್ಕ್ಯಾನಿಂಗ್​ ಮಶೀನಿನಲ್ಲಿ ಪತ್ತೆಯಾದ ನಾಯಿ; ನೆಟ್ಟಿಗರ ಆಕ್ರೋಶ

ಜರ್ಮನ್ ಶೆಫರ್ಡ್​ ನಿಷ್ಠೆಗೆ ಹೆಸರಾದ ತಳಿ ಎಂದಿದ್ದಾರೆ ಕೆಲವರು. ಪಡೆದ ಪ್ರೀತಿಯನ್ನು ಹೀಗೆ ಸಕಾಲದಲ್ಲಿ ಹಿಂದಿರುಗಿಸುತ್ತವೆ ಈ ನಾಯಿಗಳು ಎಂದಿದ್ದಾರೆ ಒಬ್ಬರು. ಸದ್ಯ ಈ ನಾಯಿ ಅಲ್ಲಿದ್ದು ರಕ್ಷಿಸಿತಲ್ಲ ಆ ಹುಡುಗನನ್ನು ಎಂದಿದ್ದಾರೆ ಹಲವರು. ದೇವರು ಒಳ್ಳೆಯದನ್ನು ಮಾಡಲಿ ಈ ನಾಯಿಗೆ ಎಂದಿದ್ದಾರೆ ಹಲವಾರು ಜನ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:07 am, Tue, 27 December 22

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ