ಬೆದರಿದ ಹರಿಣಿಯರು; ಕುಖ್ಯಾತ ಸರಣಿ ಹಂತಕ ಚಾರ್ಲ್ಸ್​ ಶೋಭರಾಜ ವಿಮಾನ ಪ್ರಯಾಣದ ಫೋಟೋ ವೈರಲ್

Charles Sobhraj : 78 ವರ್ಷದ ಚಾರ್ಲ್ಸ್​ ಶೋಭರಾಜ 20 ವರ್ಷಗಳ ಕಾಲ ನೇಪಾಳದ ಜೈಲಿನಲ್ಲಿದ್ದ. 2 ದಿನಗಳ ಹಿಂದೆಯಷ್ಟೇ ಬಿಡುಗಡೆಗೊಂಡ ಈತ ಪ್ಯಾರೀಸ್​ಗೆ ಪ್ರಯಾಣಿಸುತ್ತಿದ್ದ. ಈ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ.

ಬೆದರಿದ ಹರಿಣಿಯರು; ಕುಖ್ಯಾತ ಸರಣಿ ಹಂತಕ ಚಾರ್ಲ್ಸ್​ ಶೋಭರಾಜ ವಿಮಾನ ಪ್ರಯಾಣದ ಫೋಟೋ ವೈರಲ್
ಜೈಲಿನಿಂದ ಬಿಡುಗಡೆಗೊಂಡು ಪ್ಯಾರೀಸ್​ಗೆ ಪ್ರಯಾಣಿಸುತ್ತಿರುವ ಚಾರ್ಲ್ಸ್​ ಶೋಭರಾಜ್​, ಪಕ್ಕದಲ್ಲಿರುವ ಯುವತಿಯರ ಮುಖಭಾವ ಗಮನಿಸಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 26, 2022 | 6:40 PM

Viral Video : ಸರಣಿ ಕೊಲೆಗಳಿಂದ ಕುಖ್ಯಾತಿ ಪಡೆದಿರುವ ಚಾರ್ಲ್ಸ್​ ಶೋಭರಾಜನ ಪಕ್ಕದಲ್ಲಿ ಕುಳಿತುಕೊಳ್ಳುವ ಪ್ರಸಂಗ ಬಂದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಕಲ್ಪಿಸಿಕೊಳ್ಳಿ. ಅವನ ಹೆಸರು ಕೇಳಿದರೇ ಸಾಕು! ಇನ್ನು ಅವನ ಬಳಿ ಕುಳಿತುಕೊಳ್ಳುವುದೆಂದರೆ? ಹಾಗೂ ಹೀಗೂ ಕುಳಿತುಕೊಂಡಿರಿ, ಈ ಅನುಭವದ ಬಗ್ಗೆ ಹಂಚಿಕೊಳ್ಳಿ ಎಂದರೆ ನಿಮ್ಮಲ್ಲಿ ಬಹುಶಃ ಶಬ್ದಗಳೇ ಇರುವುದಿಲ್ಲ. ಅಂಥ ಆತಂಕ, ಭಯ ನಿಮ್ಮನ್ನು ಆವರಿಸದೇ ಇರದು. ಇದೀಗ ವೈರಲ್ ಆಗಿರುವ ಈ ಫೋಟೋ ಗಮನಿಸಿ. ಚಾರ್ಲ್ಸ್​ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾನೆ. ಅವನ ಪಕ್ಕದಲ್ಲಿ ಈ ಯುವತಿಯರು ಬೆದರಿದ ಹರಿಣಿಯಂತೆ ಕುಳಿತಿದ್ದಾರೆ.

ಜಗತ್ತಿನಾದ್ಯಂತ ಕನಿಷ್ಟ 20 ಜನರನ್ನಾದರೂ ಕೊಂದು ಕುಖ್ಯಾತಿ ಪಡೆದ ಸರಣಿಹಂತಕ ಚಾರ್ಲ್ಸ್​ ಶೋಭರಾಜ್ ಎರಡು ದಿನಗಳ ಹಿಂದೆಯಷ್ಟೇ ನೇಪಾಳದ ಜೈಲಿನಿಂದ ಬಿಡುಗಡೆಗೊಂಡಿದ್ಧಾನೆ. 1975ರಲ್ಲಿ ಉತ್ತರ ಅಮೆರಿಕದ ಇಬ್ಬರು ಪ್ರಜೆಗಳನ್ನು ಕೊಂದಿದ್ದಕ್ಕಾಗಿ 20 ವರ್ಷಗಳ ಕಾಲ ಜೈಲುಬಂದಿಯಾಗಿದ್ದ. ಇದೀಗ ಉತ್ತಮ ನಡೆವಳಿಕೆ ಆಧಾರದ ಮೇಲೆ ಬಿಡುಗಡೆಗೊಂಡಿದ್ದಾನೆ. ನಂತರ ಕತಾರ್​ ಏರ್​ವೇಸ್ ಮೂಲಕ ದೋಹಾಗೆ ತೆರಳಿ ಅಲ್ಲಿಂದ ಪ್ಯಾರೀಸ್​ನಲ್ಲಿ ವಾಸಿಸಲು ತೆರಳಿದ್ದಾನೆ.  ಈ ಪ್ರಯಾಣದ ಮಧ್ಯೆಯೇ  ತೆಗೆದ ಫೋಟೋ ಇದಾಗಿದೆ.

ಬಿಕಿನಿ ಧರಿಸಿದ ಮಹಿಳೆಯರನ್ನೇ ಈತ ಗುರಿ ಇಟ್ಟುಕೊಂಡು ಕೊಲೆ ಮಾಡುತ್ತಿದ್ದನಾದ್ದರಿಂದ ಇವನಿಗೆ ‘ಬಿಕಿನಿ ಕಿಲ್ಲರ್’ ಎಂದು ಬಿರುದು ನೀಡಲಾಗಿತ್ತು! ನೆಟ್​ಫ್ಲಿಕ್ಸ್​ನ  ‘ದಿ ಸರ್ಪೆಂಟ್​’ ಸೀರೀಸ್​ಗೆ ಇವನೇ ಸ್ಫೂರ್ತಿ. ಇವನ ಜೀವನವೃತ್ತಾಂತವನ್ನಿಟ್ಟುಕೊಂಡು ಈ ಸೀರೀಸ್​ನ ಕಥೆ ಹೆಣೆಯಲಾಗಿದೆ.

ಇದನ್ನೂ ಓದಿ : ಮದುವೆ ಮಂಟಪದ ಹೊರಗೆ ಝೊಮ್ಯಾಟೋ ಡೆಲಿವರಿ ಏಜೆಂಟ್ ಡ್ಯಾನ್ಸ್​ ವಿಡಿಯೋ ವೈರಲ್

1970 ರ ದಶಕದಲ್ಲಿ ಏನಿಲ್ಲವೆಂದರೂ 20 ಜನರನ್ನು ಕೊಂದ ಆರೋಪ ಇವನ ಮೇಲಿತ್ತು. ಈತ ತನ್ನದೇ ಆದ ವಿಶಿಷ್ಟ ಮೋಡಿಯಿಂದ ತನಗೆ ಬೇಕಾದವರೊಂದಿಗೆ ಸ್ನೇಹ ಬೆಳೆಸುತ್ತಿದ್ದ, ಕ್ರಮೇಣ ವಿಶ್ವಾಸ ಗಳಿಸಿ ಅವರನ್ನು ಬಲಿಪಶುವನ್ನಾಗಿಸುತ್ತಿದ್ದ. ಹೆಚ್ಚಿನ ಮಂದಿ ಹಿಪ್ಪಿಗಳೇ ಇವನಿಗೆ ಬಲಿಯಾಗಿರುವುದು.

ಇಂಥ ಭಯಂಕರ ಚರಿತ್ರೆ ಹೊಂದಿದ ಈತನ ಪಕ್ಕದಲ್ಲಿ ಕುಳಿತು ವಿಮಾನಯಾನ ಮಾಡುವುದೆಂದರೆ ಸುಲಭವೇ?

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:29 pm, Mon, 26 December 22