AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓಹ್! ನಿಜಕ್ಕೂ ಸಾಂತಾನ ಬಂಡಿ ಬಂದಿತ್ತೇ?; ವೈರಲ್ ಆದ ಎಮಿರೇಟ್ಸ್​ ಪೋಸ್ಟ್​

Merry Christmas : ವಿಮಾನಕ್ಕೆ ಹಾಕಿದ ಸಾಂತಾನ ಟೋಪಿ ಎಂಥ ಸುಂದರ. ಈ ಹಿಮಸಾರಂಗಗಳು ಈ ಬಂಡಿಯನ್ನು ಎಳೆದುಕೊಂಡು ಹೇಗೆ ಆಕಾಶದಲ್ಲಿ ಓಡುತ್ತಿವೆ? ನೆಟ್ಟಿಗರು ಈ ವಿಷಯವಾಗಿ ತಲೆ ಕೆರೆದುಕೊಳ್ಳುತ್ತಿದ್ದಾರೆ.

ಓಹ್! ನಿಜಕ್ಕೂ ಸಾಂತಾನ ಬಂಡಿ ಬಂದಿತ್ತೇ?; ವೈರಲ್ ಆದ ಎಮಿರೇಟ್ಸ್​ ಪೋಸ್ಟ್​
ಸಾಂತಾನ ಬಂಡಿ ಹಾರುತಿದೆ ನೋಡಿ
TV9 Web
| Edited By: |

Updated on: Dec 26, 2022 | 3:46 PM

Share

Viral Video : ಎಮಿರೇಟ್ಸ್​ ಏರ್​ಲೈನ್ಸ್​ ತನ್ನ ಪ್ರಯಾಣಿಕರಿಗಾಗಿ ಮಾಡಿದ ಮ್ಯಾಜಿಕ್​ನ ವಿಡಿಯೋ ಇದೀಗ ವೈರಲ್ ಆಗಿದೆ. ಕ್ರಿಸ್​ಮಸ್​ ನಿಮಿತ್ತ ಒಂದು ವಿಮಾನವನ್ನು ಸಾಂತಾನ ಬಂಡಿಯಂತೆ ಅಲಂಕರಿಸಲಾಗಿತ್ತು. ಹಿಮಸಾರಂಗಗಳು ಆ ವಿಮಾನವೆಂಬ ಬಂಡಿಯನ್ನು ಎಳೆದುಕೊಂಡು ಆಕಾಶದಲ್ಲಿ ಹೋಗುತ್ತಿದ್ದವು. ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಎಮಿರೇಟ್ಸ್​ ಪೋಸ್ಟ್​ ಮಾಡುತ್ತಿದ್ದಂತೆ ನೆಟ್ಟಿಗರು ಅಚ್ಚರಿಯಿಂದ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Emirates (@emirates)

ಈ ವಿಮಾನವು ಸಾಂತಾನ ಕೆಂಪು ಟೋಪಿಯನ್ನು ಧರಿಸಿದ್ದು, ಹಿಮಸಾರಂಗಗಳು ಇದನ್ನು ಆಕಾಶಕ್ಕೆ ಕೊಂಡೊಯ್ಯುತ್ತವೆ. ನೋಡಿದ ಯಾರಿಗೂ ನಿಜವಾದ ಸಾರಂಗಗಳೇ ಎಂಬ ಅನುಮಾನ ಬಾರದೇ ಇರದು. ಆದರೆ ಈ ವಿಡಿಯೋ ಕ್ಲಿಪ್​ CGI ತಂತ್ರಜ್ಞಾನದಿಂದ ರೂಪುಗೊಂಡಿದೆ. ಈ ಪರಿಕಲ್ಪನೆಯನ್ನು ನೆಟ್ಟಿಗರು ಮೆಚ್ಚಿದ್ದಾರೆ. ಅನೇಕರು ಪ್ರತಿಕ್ರಿಯೆಗಳ ಮೂಲಕ ಶುಭಾಶಯ ಕೋರಿದ್ದಾರೆ. ಸಾಕಷ್ಟು ಜನರು ಈ ವಿಡಿಯೋ ಅನ್ನು ನಿಜವೆಂದೇ ನಂಬಿದ್ದಾರೆ.

ಮಕ್ಕಳು ಇದನ್ನು ನೋಡಿ ಬಹಳ ಮಜಾ ಉಡಾಯಿಸುತ್ತಿದ್ದಾರೆ ಎಂದಿದ್ಧಾರೆ ಒಬ್ಬರು. ಬಹಳ ಅದ್ಭುತವಾಗಿದೆ ಯಾರು ಮಾಡಿದ್ದಿದು ಎಂದು ಕೇಳಿದ್ದಾರೆ ಇನ್ನೊಬ್ಬರು. ಇದು ನಿಜವೇ ಎಂದು ಕೇಳಿದ್ದಾರೆ ಅನೇಕರು. ಫಿಸಿಕ್ಸ್​ಗೆ ಇದು ಅನುಮಾನ ಎಂದಿದ್ದಾರೆ ಮತ್ತೊಬ್ಬರು. ಮೆಚ್ಚುಗೆಯೊಂದಿಗೆ ಅಸಂಬದ್ಧ ಪ್ರತಿಕ್ರಿಯೆಗಳನ್ನೂ ಈ ಪೋಸ್ಟ್ ಹೊಂದಿದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ