ಹೆಂಡತಿಯೊಂದಿಗೆ ಜಗಳಕ್ಕಿಳಿದ ಯೂಟ್ಯೂಬರ್; ಕೊನೆಯಲ್ಲಿ ಏನಾಯಿತು?
English Tutorial videos : ಮೂರ್ಹೊತ್ತೂ ಮೊಬೈಲ್, ಬಟ್ಟೆ ಬಿದ್ದಲ್ಲೇ. ಡೈನಿಂಗ್ ಟೇಬಲ್ ನೋಡಕ್ಕಾಗ್ತಿಲ್ಲ ಎಂದ ಗಂಡ. ನನಗೂ ಸಾಕಾಗಿದೆ, ಡೈವೋರ್ಸ್ ಕೊಡ್ತೀನಿ ಎಂದ ಹೆಂಡತಿ. ಫಾಲೋವರ್ಸ್ ಕಂಗಾಲು. ಮುಂದೆ ಆಗಿದ್ದಾದರೂ ಏನು?
Viral Video : ಕೊರೋನಾ ನಂತರದ ಅವಧಿಯಲ್ಲಿ ಡಿಜಿಟಲ್ ಕಂಟೆಂಟ್ ಕ್ರಿಯೇಷನ್ಗೆ ಬಹು ಬೇಡಿಕೆ ಉಂಟಾಯಿತು. ಯಾವ ರೀತಿ ಎಂದರೆ ಕುಟುಂಬಕ್ಕೆ ಕುಟುಂಬವೇ ಈ ಸೃಷ್ಟಿಯಲ್ಲಿ ತೊಡಗಿಕೊಳ್ಳಲು ಶುರುಮಾಡಿತು. ಅದರಲ್ಲಿ ಎಲ್ಲ ರೀತಿಯ ನೀರೂ ಹರಿಯಿತು. ಅವರವರ ಆಯ್ಕೆ ಅಭಿರುಚಿಗೆ ತಕ್ಕಂತೆ ಫಾಲೋವರ್ಗಳು ಹುಟ್ಟಿಕೊಂಡರು. ಕ್ಷಣಕ್ಷಣವೂ ಭಿನ್ನವಾಗಿ ತಮ್ಮ ಕಂಟೆಂಟ್ ಅನ್ನು ಪ್ರೆಸೆಂಟ್ ಮಾಡುವುದು ಹೇಗೆ ಎಂಬ ಯೋಚನೆಯಲ್ಲಿಯೇ ಹಲವಾರು ಯೂಟ್ಯೂಬರ್ಗಳು, ಇನ್ಸ್ಟಾಗ್ರಾಮ್, ಫೇಸ್ಬುಕ್ ಖಾತೆದಾರರು ಮುಳುಗಿ ಅದನ್ನೇ ಬದುಕಾಗಿಸಿಕೊಂಡು ಸಾಗುವಷ್ಟು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ.
You’ll never be able to guess how this video ends. pic.twitter.com/RWdxYQ26SG
ಇದನ್ನೂ ಓದಿ— Pakchikpak Raja Babu (@HaramiParindey) December 28, 2022
ಇನ್ಸ್ಟಾಗ್ರಾಂ, ಯೂಟ್ಯೂಬ್ ಮೂಲಕ ಇಂಗ್ಲಿಷ್ ಟ್ಯುಟೋರಿಯಲ್ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ ಈ ಕಂಟೆಂಟ್ ಕ್ರಿಯೇಟರ್ ಗೌರವ್. ಈ ವಿಡಿಯೋದಲ್ಲಿ ತಮ್ಮ ಹೆಂಡತಿಯೊಂದಿಗೆ ಕೆಟ್ಟ ಜಗಳಕ್ಕಿಳಿದಿದ್ದಾರೆ. ಇದು ಮನೆಯಾ? ಮೂರು ದಿನದಿಂದ ಬಟ್ಟೆ ಬಿದ್ದಲ್ಲೇ ಬಿದ್ದುಕೊಂಡಿದೆ. ಇನ್ನು ಬೆಡ್ರೂಮಿನಲ್ಲಿ ಮಲಗಲೂ ಜಾಗವಿಲ್ಲ. ಡೈನಿಂಗ್ ಟೇಬಲ್ ಎಂಥ ಕೆಟ್ಟದಾಗಿದೆ. ಸ್ವಚ್ಛತೆ ಅನ್ನೋದೇ ಇಲ್ಲ. ಮೂರ್ಹೊತ್ತೂ ಮೊಬೈಲ್ನಲ್ಲಿಯೇ ಇರ್ತೀಯಾ. ಅದು ಹಾಗೆ ಇದು ಹೀಗೆ ಎಂದು ಎಲ್ಲರ ಮನೆಯ ದೋಸೆಯೂ ತೂತು ಎಂಬಂತೆ ಈ ಜಗಳದ ಕ್ಲಿಪ್ ಇದೆ.
ಇದನ್ನೂ ನೋಡಿ : ಸಿಲ್ಕಿ ಹೇರ್ ಸಿಂಹಪ್ಪ ವೈರಲ್ ಆದನು ನೋಡಪ್ಪ
ನನಗೆ ಇದೊಂದೇ ಕೆಲಸವಾ ಎಂದು ಹೆಂಡತಿಯೂ ಪ್ರತಿಯಾಗಿ ತರಾಟೆಗೆ ತೆಗೆದುಕೊಳ್ಳುತ್ತಾಳೆ. ನನಗೂ ಸಾಕಾಯ್ತು ಮಾಡಿ ಮಾಡಿ ಬೇಡವಾದರೆ ಡೈವೋರ್ಸ್ ಕೊಡಿ ಎನ್ನುತ್ತಾಳೆ. ಅಷ್ಟೊತ್ತಿಗೆ ಅಡ್ಡಬಂದ ಮಗು ಬೇಡ ಎನ್ನುತ್ತೆ. ಅದು ಡೈವೋರ್ಸ್ ಅಲ್ಲ ಡಿವೋರ್ಸ್ ಎಂದು ಇಂಗ್ಲಿಷ್ ಪದದ ಉಚ್ಛಾರದ ಬಗ್ಗೆ ಪಾಠ ಮಾಡುತ್ತಾರೆ ಗೌರವ್.
ಈ ವಿಡಿಯೋ ನೋಡಿ ಇವರ ಫಾಲೋವರ್ಗಳು ಆರಂಭದಲ್ಲಿ ನಿಜಕ್ಕೂ ಆಘಾತಕ್ಕೆ ಒಳಗಾಗುತ್ತಾರೆ. ಇಷ್ಟು ದಿನ ಶಾಂತರೀತಿಯಿಂದ ಇಂಗ್ಲಿಷ್ ಪಾಠ ಮಾಡುತ್ತಿದ್ದವರು ಹೀಗೆ ಹೆಂಡತಿಯೊಂದಿಗೆ ಕೆಟ್ಟದಾಗಿ ಜಗಳವಾಡುವ ವಿಡಿಯೋ ಯಾಕೆ ಅಪ್ಲೋಡ್ ಮಾಡಿದ್ದಾರೆ ಎಂದು. ಕೊನೆಯ ತನಕ ನೋಡಿದಾಗ ನಿಜವಾದ ವಿಷಯ ತಿಳಿಯುತ್ತದೆ.
ಹೇಗಿದೆ ಸೃಜನಶೀಲತೆಯ ಪರಮಾವಧಿ!
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:43 pm, Fri, 30 December 22