ಪಠಾಣ್ ಸಿನೆಮಾದ ಹಾಡಿಗೆ ಈ ಹಿರಿಯ ಮಹಿಳೆ ಹೆಜ್ಜೆ ಹಾಕಿದ್ದಕ್ಕೆ ನೆಟ್ಟಿಗರು ಫಿದಾ
Pathaan : ಈ ವಯಸ್ಸಿನಲ್ಲಿಯೂ ನೀವು ಈ ಪೀಳಿಗೆಯ ಹಾಡಿಗೆ ಉತ್ಸಾಹದಿಂದ ಮತ್ತು ದೀಪಿಕಾ, ಶಾರುಖ್ ಹಾಕಿದ ಪಟ್ಟುಗಳನ್ನೇ ಅನುಕರಿಸಿದ್ದೀರಲ್ಲ, ಇದು ಅದ್ಭುತ! ಈ ಶಕ್ತಿ ನಿಮ್ಮಲ್ಲಿ ಹೀಗೇ ಇರಲಿ ಎನ್ನುತ್ತಿದ್ದಾರೆ ನೆಟ್ಟಿಗರು.
Viral Video : ಈಗೇನಿದ್ದರೂ ಪಠಾಣ್ ಸಿನೆಮಾದ ರಂಗ್. ಸಾಮಾಜಿಕ ಜಾಲತಾಣದಲ್ಲಿ ಈ ಸಿನೆಮಾದ ಹಾಡುಗಳಿಗೆ ಜಗತ್ತಿನಾದ್ಯಂತ ಜನ ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ. ಶಾರುಖ್ಖಾನ್, ದೀಪಿಕಾ ಪಡುಕೋಣೆ ನಟಿಸಿದ ಈ ಸಿನೆಮಾದ ಝೂಮ್ ಜೋ ಟೈಟಲ್ ಟ್ರ್ಯಾಕ್ಗೆ ಹಿರಿಯ ಮಹಿಳೆಯೊಬ್ಬರ ಹೆಜ್ಜೆ ಹಾಕಿದ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋ ಅನ್ನು ಈಗಾಗಲೇ ಲಕ್ಷಗಟ್ಟಲೆ ಜನ ನೋಡಿದ್ದಾರೆ. ಸುಮಾರು 50,000 ಜನರು ಇಷ್ಟಪಟ್ಟಿದ್ದಾರೆ.
ಇದನ್ನೂ ಓದಿView this post on Instagram
ಡಿಸೆಂಬರ್ 22 ರಂದು ಪಠಾಣ್ ಸಿನೆಮಾದ ಝೂಮೇ ಜೋ ಹಾಡು ಬಿಡುಗಡೆಯಾಗಿದೆ. ಈ ಹಾಡಿಗೆ ರಾಗ ಸಂಯೋಜಿಸಿದ್ದು ವಿಶಾಲ್ ಮತ್ತು ಶೇಖರ್. ಇದರ ಸಾಹಿತ್ಯ ಕುಮಾರ್. ಹಾಡಿದವರು ಅರಿಜಿತ್ ಸಿಂಗ್, ಸುಕೃತಿ ಕಾಕರ್, ವಿಶಾಲ್ ಮತ್ತು ಶೇಖರ್.
ಇದೀಗ ಈ ಮಹಿಳೆಯ ನೃತ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಈ ಚಳಿಯಲ್ಲಿ ಅವರು ಈ ಹಾಡಿಗೆ ಅತ್ಯುತ್ಸಾಹದಿಂದ ಹೆಜ್ಜೆ ಹಾಕುವುದನ್ನು ನೋಡಿ ಅಚ್ಚರಿಗೆ ಒಳಗಾಗುತ್ತಿದ್ದಾರೆ. ದೀಪಿಕಾ ಮತ್ತು ಶಾರುಖ್ಖಾನ್ ವರ ಹೆಜ್ಜೆಗಳನ್ನು ಸರಿಯಾಗಿ ಅನುಕರಿಸಿದ್ದೀರಿ ಎಂದಿದ್ಧಾರೆ ಒಬ್ಬರು. ಈ ವಯಸ್ಸಿನವರು ಇಂಥ ಹಾಡುಗಳಿಗೆ ನರ್ತಿಸುವುದು ಅಪರೂಪ. ಇವರಲ್ಲಿರುವ ಶಕ್ತಿ ಹೀಗೇ ಇರಲಿ ದೇವರೇ ಎಂದು ಮತ್ತೊಬ್ಬರು ಪ್ರತಿಕ್ರಿಯಸಿದ್ಧಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ