ಯಾವುದೂ ಅಸಾಧ್ಯವಲ್ಲ: ಕಡಿದಾದ ಬಂಡೆಯ ಮೇಲೆ ಆಕಾಶಮುಖಿಯಾಗಿ ಚಲಿಸಿದ ಬೈಕ್​ನ ವಿಡಿಯೋ ವೈರಲ್​

Bike Stunt : ಅತ್ಯಂತ ಅಪಾಯಕರವಾದ ಅಪರೂಪದ ಸಾಹಸವಿದು. ಈ ವ್ಯಕ್ತಿ ಇದನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ ಎಂದು ನೆಟ್ಟಿಗರು ಬೆನ್ನು ತಟ್ಟುತ್ತಿದ್ದಾರೆ. ಇನ್ನೂ ಕೆಲವರು ಇದೆಲ್ಲ ಬೇಕಿತ್ತೆ? ಎಂದು ಪ್ರಶ್ನಿಸುತ್ತಿದ್ಧಾರೆ. ನೀವೇನಂತೀರಿ?

ಯಾವುದೂ ಅಸಾಧ್ಯವಲ್ಲ: ಕಡಿದಾದ ಬಂಡೆಯ ಮೇಲೆ ಆಕಾಶಮುಖಿಯಾಗಿ ಚಲಿಸಿದ ಬೈಕ್​ನ ವಿಡಿಯೋ ವೈರಲ್​
Follow us
TV9 Web
| Updated By: ಶ್ರೀದೇವಿ ಕಳಸದ

Updated on: Dec 30, 2022 | 3:49 PM

Viral Video : ಸಾಹಸಿಗರನ್ನು ಯಾರಾದರೂ ತಡೆಯಲಾಗುವುದೆ? ಸಾಧ್ಯವೇ ಇಲ್ಲ. ಒಂದು ಸಾಹಸದ ತುದಿ ಮುಟ್ಟಿದರು ಎನ್ನುತ್ತಿದ್ದಂತೆ ಮತ್ತದರ ಮುಂದೆ ಚಾಚಿಕೊಂಡಿರುವ ಇನ್ನೊಂದು ತುದಿಯ ಕಡೆ ಅವರ ಗಮನ ನೆಟ್ಟಿರುತ್ತದೆ. ಈಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ, ಕಡಿದಾದ ಬಂಡೆಗಳ ಮೇಲೆ ಹೀಗೆ ಆಕಾಶಮುಖಿಯಾಗಿ ಈ ವ್ಯಕ್ತಿ ಬೈಕ್​ ಮೂಲಕ ಚಲಿಸುತ್ತಾನೆ. ಬಂಡೆಯ ತುದಿಯನ್ನೂ ತಲುಪುತ್ತಾನೆ. ನೆಟ್ಟಿಗರು ಈ ವಿಡಿಯೋ ನೋಡಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಈ ವಿಡಿಯೋ ಅನ್ನು ಸುಮಾರು 6 ಲಕ್ಷ ಜನರು ನೋಡಿದ್ದಾರೆ. 11,500 ಜನರು  ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಇದು ತೀರಾ ಅಪಾಯಕಾರಿ ಮತ್ತು ಕಷ್ಟಕರವಾದ ಸಾಹಸ ಎಂದು ನೆಟ್ಟಿಗರು ಆತಂಕ ಪಡುತ್ತಿದ್ದಾರೆ.

ಇದನ್ನೂ ಓದಿ : ಸಿಲ್ಕಿ ಹೇರ್​ ಸಿಂಹಪ್ಪ ವೈರಲ್ ಆದನು ನೋಡಪ್ಪ

ಲಾಂಗ್​ ರೈಡ್​, ರಾಕ್​ ಕ್ಲೈಂಬಿಂಗ್​, ಡರ್ಟ್​ ಬೈಕಿಂಗ್​ ವಿಡಿಯೋಗಳು ಇದೀಗ ಅಂತರ್ಜಾಲದಲ್ಲಿ ಜನಪ್ರಿಯವಾಗುತ್ತಿವೆ. ಆದರೆ ನೋಡಲೇನೋ ಖುಷಿ. ಆದರೆ ಈ ಸಾಹಸಗಳಲ್ಲಿ ತೊಡಗಿಕೊಂಡವರ ಸುತ್ತ ಸದಾ ಅಪಾಯ ಗಿರಕಿ ಹಾಕುತ್ತಿರುತ್ತದೆ. ಹಾಗಾಗಿ ಅವರು ಮೈಯೆಲ್ಲ ಎಚ್ಚರವಾಗಿರಬೇಕು.

ಇದನ್ನೂ ಓದಿ : ಇಂಥ ಹುಚ್ಚುಸಾಹಸವನ್ನು ಯಾರೂ ಪ್ರಯತ್ನಿಸಬೇಡಿ ಎನ್ನುತ್ತಿದ್ದಾರೆ ನೆಟ್ಟಿಗರು

ಅನೇಕರು ಈ ವಿಡಿಯೋದಲ್ಲಿರುವ ವ್ಯಕ್ತಿಯ ಸಾಹಸವನ್ನು ಬಹುವಾಗಿ ಮೆಚ್ಚುತ್ತಿದ್ದಾರೆ. ಇನ್ನೂ ಕೆಲವರು ಹೆಲ್ಮೆಟ್​ ಇಲ್ಲದೆ ಈ ಸಾಹಸವನ್ನು ಮಾಡಬಾರದು ಎನ್ನುತ್ತಿದ್ದಾರೆ. ಒಂದು ಕ್ಷಣ ಎಚ್ಚರತಪ್ಪಿದರೆ ಈ ವ್ಯಕ್ತಿಯ ಗತಿ? ಎಂದು ಪ್ರಶ್ನಿಸಿದ್ಧಾರೆ ಕೆಲವರು. ಬೈಕ್​ ಓಡಿಸುತ್ತಿರುವ ವ್ಯಕ್ತಿ ಮುಂದೆ ಏನಾದ ಎನ್ನುವುದು ಯಾರಿಗಾದರೂ ತಿಳಿಯಿತೇ? ಎಂದಿದ್ದಾರೆ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?