AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಥ ಹುಚ್ಚುಸಾಹಸವನ್ನು ಯಾರೂ ಪ್ರಯತ್ನಿಸಬೇಡಿ ಎನ್ನುತ್ತಿದ್ದಾರೆ ನೆಟ್ಟಿಗರು

Viral Video : ಈಗ ಕರೆಂಟ್ ಹೋದರೆ ಎಂಥ ಅವಸ್ಥೆ ಇವರದು, ತುಂಡರಿಸಿ ಬಿದ್ದರೆ ಏನಾಗಬೇಡ? ಇಂಥವರಿಗೆ ಶಿಕ್ಷೆ ಆಗಬೇಕು, ಯಾರು ಇಂಥ ಅನಾಹುತ ಐಡಿಯಾ ಮಾಡಿದ ವೆಡ್ಡಿಂಗ್​ ಪ್ಲ್ಯಾನರ್​? ಹೀಗೆಲ್ಲ ಚರ್ಚೆ ನಡೆಯುತ್ತಿದೆ ಟ್ವಿಟರ್​ನಲ್ಲಿ.

ಇಂಥ ಹುಚ್ಚುಸಾಹಸವನ್ನು ಯಾರೂ ಪ್ರಯತ್ನಿಸಬೇಡಿ ಎನ್ನುತ್ತಿದ್ದಾರೆ ನೆಟ್ಟಿಗರು
ಅಪ್ಪನೊಂದಿಗೆ ವಧುವಿನ ಪ್ರವೇಶ
TV9 Web
| Edited By: ಶ್ರೀದೇವಿ ಕಳಸದ|

Updated on:Dec 10, 2022 | 10:20 AM

Share

Viral Video : ತಮ್ಮ ಮದುವೆ ಎಲ್ಲರಿಗಿಂತ ವಿಭಿನ್ನವಾಗಿರಬೇಕು ಎಂದು ಬಯಸದವರು ಯಾರಿದ್ದಾರೆ? ಅದಕ್ಕಾಗಿ ಎಷ್ಟೇ ಖರ್ಚಾದರೂ ಸರಿ, ಅಂದುಕೊಂಡಿದ್ದು ಈಡೇರಿದರೆ ಮುಗಿಯಿತು ಎನ್ನುವ ಕಾಲಮಾನ ಈಗಿನವರದು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮದುಮಗಳು ತನ್ನ ತಂದೆಯೊಂದಿಗೆ ಕಲ್ಯಾಣಮಂಟಪಕ್ಕೆ ಹೀಗೆ ಕ್ರೇನ್​ ಸಹಾಯದಿಂದ ಬಂದಿಳಿಯುತ್ತಾಳೆ. ಸ್ವರ್ಗದಿಂದ ಧರೆಗಳಿದಂತೆ! ಆದರೆ ನೆಟ್ಟಿಗರು ಈ ವಿಡಿಯೋ ನೋಡಿ ವಿಚಲಿತರಾಗಿದ್ದಾರೆ. ಇಂಥ ಸಾಹಸಗಳನ್ನು ಯಾರೂ ಎಂದೂ ಪ್ರಯತ್ನಿಸಲು ಹೋಗಬೇಡಿ. ಏನಾದರೂ ಅಪಘಾತ ಸಂಭವಿಸಿದರೆ ಏನು ಗತಿ ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಅಪ್ಪನೊಂದಿಗೆ ಹೀಗೆ ಬರುತ್ತಿರುವ ವಧುವನ್ನು ಅಲ್ಲಿರುವ ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾರೆ, ಅನೇಕರು ಫೋಟೋ, ವಿಡಿಯೋದಲ್ಲಿ ಮುಳುಗಿದ್ದಾರೆ. ಈಗಾಗಲೇ ಈ ವಿಡಿಯೋ ಅನ್ನು 1.8 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. 2,600ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ನೂರಾರು ಜನರು ರೀಟ್ವೀಟ್ ಮಾಡಿದ್ದಾರೆ. ದಯವಿಟ್ಟು ಇಂಥದನ್ನೆಲ್ಲ ಅನುಕರಿಸಬೇಡಿ ಎಂದು ಕೇಳಿಕೊಂಡಿದ್ದಾರೆ ನೆಟ್ಟಿಗರು.

ಇದನ್ನೂ ಓದಿ : ಗುರುಗ್ರಾಮ್​ನ ‘ಸ್ವೀಟಿ ಮತ್ತು ಶೇರು’ ಭಾರತೀಯ ವಿವಾಹ ಪದ್ಧತಿಯಲ್ಲಿ ದಾಂಪತ್ಯಜೀವನಕ್ಕೆ

ಬದುಕೆಂದರೆ ಸಿನೆಮಾ ಅಲ್ಲ, ಅಲ್ಲಿ ನಡೆಯುವುದನ್ನೆಲ್ಲ ಇಲ್ಲಿ ಅನುಕರಿಸಬೇಡಿ ಎಂದಿದ್ದಾರೆ ಒಬ್ಬರು. ಇದು ಮಿಷನ್​ ಇಂಪಾಸಿಬಲ್​ ಸಿನೆಮಾದ ಆರಂಭಿಕ ದೃಶ್ಯದಂತೆ ಅನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ನಡುವೆಯೇ ಅದು  ಮುರಿದು ಬಿದ್ದಿದ್ದರೆ ಏನು ಗತಿ ಎಂದಿದ್ದಾರೆ ಮಗದೊಬ್ಬರು. ಇಂಥ ಶೋಕಿ ಮಾಡುವವರಿಗೆ ನಿಜಕ್ಕೂ ಶಿಕ್ಷೆ ವಿಧಿಸಬೇಕು ಎಂದಿದ್ದಾರೆ ಒಬ್ಬರು. ಕರೆಂಟ್​ ಹೋದರೆ ಇವರ ಅವಸ್ಥೆ ಏನಾಗಬೇಡ? ಎಂದಿದ್ದಾರೆ ಮತ್ತೊಬ್ಬರು. ವೆಡ್ಡಿಂಗ್ ಪ್ಲ್ಯಾನರ್​ ಯಾರೋ ಅವರನ್ನು ಇಲ್ಲಿ ಟ್ಯಾಗ್ ಮಾಡಿ ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:20 am, Sat, 10 December 22

Follow Us
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್