2022ರಲ್ಲಿ ಗೂಗಲ್​ನಲ್ಲಿ ಅತೀ ಹೆಚ್ಚು ಹುಡುಕಾಡಿದ ಟಾಪ್ 10 ಶಬ್ದಗಳನ್ನು ಊಹಿಸಬಲ್ಲಿರಾ?

Google’s ‘Year In Search 2022’ : ಅಂತೂ ಜಗತ್ತಿನಾದ್ಯಂತ ಜನ ಕೋವಿಡ್​ನಿಂದ ಮುಕ್ತರಾಗಿ ಮನಸ್ಸಿಗೆ ಮುದ ಮತ್ತು ಹಿತ ಕೊಡುವಂಥ ಮನರಂಜನೆ, ಆಟಗಳಲ್ಲಿ ಆಸಕ್ತಿ ವಹಿಸಿದ್ದಾರೆ ಎನ್ನುತ್ತಿದೆ 2022ರ ಗೂಗಲ್​ ಸರ್ಚ್​ ಎಂಜಿನ್​.

2022ರಲ್ಲಿ ಗೂಗಲ್​ನಲ್ಲಿ ಅತೀ ಹೆಚ್ಚು ಹುಡುಕಾಡಿದ ಟಾಪ್ 10 ಶಬ್ದಗಳನ್ನು ಊಹಿಸಬಲ್ಲಿರಾ?
ಪ್ರಾತಿನಿಧಿಕ ಚಿತ್ರ
Follow us
| Updated By: ಶ್ರೀದೇವಿ ಕಳಸದ

Updated on:Dec 10, 2022 | 11:53 AM

Viral : Google’s ‘Year In Search 2022’- 2022ರಲ್ಲಿ ಗೂಗಲ್​ನಲ್ಲಿ ಅತೀ ಹೆಚ್ಚು ಹುಡುಕಾಟಕ್ಕೆ ಒಳಗಾದ ಶಬ್ದಗಳ ಪಟ್ಟಿಯನ್ನು ಗೂಗಲ್​ ಬಿಡುಗಡೆ ಮಾಡಿದೆ. ಯಾವ ದೇಶದಲ್ಲಿ ಯಾವ ವಿಷಯಗಳ ಕುರಿತು ಜನ ಸರ್ಚ್​ ಎಂಜಿನ್​ನಲ್ಲಿ ಹುಡುಕಾಡಿದ್ದಾರೆ ಎನ್ನುವ ಮಾಹಿತಿ ಇದರಲ್ಲಿದೆ. ಕೊವಿಡ್ 19 ಸರ್ಚ್​ ಎಂಜಿನ್​ ಬಿಟ್ಟು ಸರಿದಿದೆ ಎಂದರೆ ಜನ ರೋಗಮುಕ್ತರಾಗಿದ್ದಾರೆ ಎಂದರ್ಥ. ನೋವು, ನರಳಿಕೆ, ಭೀತಿಯಿಂದ ಹೊರಬಂದು ಮನಸಿಗೆ ಉಲ್ಲಾಸ ಕೊಡುವಂಥ ಸಂಗತಿಗಳ ಕಡೆ ಗಮನ ಹರಿಸಿದ್ದಾರೆ. ಆಟ, ಮನರಂಜನೆ ಮತ್ತು ಕ್ರೀಡೆಗ ಸಂಬಂಧಿಸಿದ ವಿಷಯಗಳತ್ತ ಆಸಕ್ತಿ ತೋರಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆಯೇ.

ಇದನ್ನೂ ಓದಿ : 2022ರಲ್ಲಿ ಜಗತ್ತಿನಾದ್ಯಂತ ಗೂಗಲಪ್ಪನ​ ಹೊಟ್ಟೆಯಲ್ಲಿ ಅತೀ ಹೆಚ್ಚು ಹುಡುಕಿದ್ದು ಪನೀರ್​ನ ಈ ರೆಸಿಪಿಯನ್ನು!

ಹಾಗಿದ್ದರೆ ನೀವು ಊಹಿಸಬಲ್ಲಿರಾ? ಅಗ್ರಸ್ಥಾನದಲ್ಲಿರುವ ವಿಷಯ ಅಥವಾ ಶಬ್ದಗಳು ಯಾವುವು ಎಂದು? ಪ್ರಪಂಚದಾದ್ಯಂತ Wordle – ವರ್ಡಲ್​- ಪದರಚನೆಯ ಆಟವನ್ನು ಹೆಚ್ಚು ಜನ ಹುಡುಕಾಡಿದ್ದಾರೆ. ನ್ಯೂಯಾರ್ಕ್​ ಟೈಮ್ಸ್​ ವರದಿಯ ಪ್ರಕಾರ, ಬ್ರೂಕ್ಲಿನ್​ನ ಸಾಫ್ಟ್​ವೇರ್​ ಎಂಜಿನಿಯರ್ ಜೋಶ್ ವಾರ್ಡೆಲ್ ತಮ್ಮ ಭಾರತೀಯ ಪಾರ್ಟನರ್ ಪಲಕ್ ಶಾ ಅವರೊಂದಿಗೆ ಆಡಲು ಈ ಆಟವನ್ನು ರೂಪಿಸಿದ್ದರು. ‘

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ವರ್ಡಲ್​ ನಂತರ ಭಾರತ Vs ಇಂಗ್ಲೆಂಡ್, ಉಕ್ರೇನ್ ಮತ್ತು ರಾಣಿ ಎಲಿಜಬೆತ್ ಈ ಪದಗಳು ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟಿವೆ. ಕ್ರಿಕೆಟ್, ಫುಟ್‌ಬಾಲ್, ಬಾಲಿವುಡ್ ಕೂಡ ಟಾಪ್​ 10ನಲ್ಲಿ ಸೇರಿವೆ.

1. ಇಂಡಿಯನ್ ಪ್ರೀಮಿಯರ್ ಲೀಗ್ 2. ಕೋವಿನ್ 3. ಫಿಫಾ ವಿಶ್ವಕಪ್ 4. ಏಷ್ಯಾ ಕಪ್ 5. ಐಸಿಸಿ ಟಿ20 ವಿಶ್ವಕಪ್ 6. ಬ್ರಹ್ಮಾಸ್ತ್ರ: ಭಾಗ ಒಂದು – ಶಿವ 7. ಇ-ಶ್ರಾಮ್ ಕಾರ್ಡ್ 8. ಕಾಮನ್​ವೆಲ್ತ್​ ಗೇಮ್ಸ್ 9. K.G.F: ಭಾಗ 2 10. ಇಂಡಿಯನ್ ಸೂಪರ್ ಲೀಗ್

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:52 am, Sat, 10 December 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್