ಬ್ರಿಟಿಷ್ ಏರ್​ವೇಸ್​​ ಪ್ರಯಾಣಿಕರ ಊಟದಲ್ಲಿ ಕೃತಕ ಹಲ್ಲು ಪತ್ತೆ

British Airways : ‘ಅಕ್ಟೋಬರ್ 25ರಂದು ಲಂಡನ್​ನಿಂದ ನಾನು ದುಬೈಗೆ ಪ್ರಯಾಣಿಸುತ್ತಿದ್ಧಾಗ ನೀವು ಕೊಟ್ಟ ಊಟದಲ್ಲಿ ಈ ಕೃತಕ ಹಲ್ಲು ಕಾಣಿಸಿಕೊಂಡಿದೆ. ಇದು ನನ್ನ ಹಲ್ಲು ಅಲ್ಲ, ನನ್ನ ಹಲ್ಲುಗಳೆಲ್ಲವೂ ಸುಸ್ಥಿತಿಯಲ್ಲಿವೆ’ ಎಂದಿದ್ದಾರೆ ಆಕೆ.

ಬ್ರಿಟಿಷ್ ಏರ್​ವೇಸ್​​ ಪ್ರಯಾಣಿಕರ ಊಟದಲ್ಲಿ ಕೃತಕ ಹಲ್ಲು ಪತ್ತೆ
ಬ್ರಿಟಿಷ್ ಏರ್​ವೇಸ್ ಪೂರಿಸಿದ ಊಟದಲ್ಲಿ ಪ್ರಯಾಣಿಕರಿಗೆ ಸಿಕ್ಕ ಕೃತಕ ಹಲ್ಲು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 10, 2022 | 2:24 PM

Viral : ವಿಮಾನದಲ್ಲಿ ಪೂರೈಸುವ ಆಹಾರ ಎಲ್ಲವೂ ಶುದ್ಧವಾಗಿರುತ್ತದೆ ಎಂಬ ಭ್ರಮೆಯನ್ನು ಆಗಾಗ ಇಂಥ ವರದಿಗಳು ಕಳಚುತ್ತವೆ. ಇದೀಗ ವೈರಲ್ ಆಗಿರುವ ಈ ವರದಿಯ ಪ್ರಕಾರ, ಬ್ರಿಟಿಷ್​ ಏರ್​ವೇಸ್​ನ ಪ್ರಯಾಣಿಕರಿಗೆ ಏರ್​ವೇಸ್​ ಪೂರೈಸಿದ ಊಟದಲ್ಲಿ ಕೃತಕ ಹಲ್ಲೊಂದು ಪತ್ತೆಯಾಗಿದೆ. ಇದರಿಂದ ವಿಚಲಿತರಾದ ಪ್ರಯಾಣಿಕರು @British_Airways ಟ್ಯಾಗ್​ ಮಾಡಿ ಫೋಟೋ ಟ್ವೀಟ್ ಮಾಡಿದ್ದಾರೆ.

‘ಅಕ್ಟೋಬರ್ 25ರಂದು BA107 ಲಂಡನ್​ನಿಂದ ದುಬೈಗೆ ಪ್ರಯಾಣಿಸುವಾಗ ನೀವು ಕೊಟ್ಟ ಊಟದಲ್ಲಿ ಈ ಕೃತಕ ಹಲ್ಲು ಕಾಣಿಸಿಕೊಂಡಿದೆ (ಇದು ನನ್ನ ಹಲ್ಲು ಅಲ್ಲ, ನನ್ನ ಹಲ್ಲುಗಳೆಲ್ಲವೂ ಸುಸ್ಥಿತಿಯಲ್ಲಿವೆ). ಇದನ್ನು ನೋಡಿ ನಿಜಕ್ಕೂ ನನಗೆ ಭಯವಾಗಿದೆ. ಕಾಲ್​ ಸೆಂಟರ್​ಗೆ ಸಂಪರ್ಕಿಸಲು ಪ್ರಯತ್ನಿಸುತ್ತಲೇ ಇದ್ದೇನೆ, ಸಾಧ್ಯವಾಗುತ್ತಿಲ್ಲ’ ಎಂದು ಪ್ರಯಾಣಿಕರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಎಂಟು ತಾಸಿನ ವಿಮಾನ ಪ್ರಯಾಣದಲ್ಲಿ ಈ ಮಗು ಅವರಿಗೆಲ್ಲ ದುಃಸ್ವಪ್ನದಂತೆ ಕಾಡಿತೆ?

‘ಈ ವಿಷಯವಾಗಿ ನಿಜವಾಗಲೂ ವಿಷಾದಿಸುತ್ತೇವೆ’ ಎಂದು ತಕ್ಷಣವೇ ಟ್ವೀಟ್ ಮೂಲಕ ಉತ್ತರಿಸಿದೆ ಬ್ರಿಟೀಷ್ ಏರ್​ವೇಸ್. ಅನ್ನ ಮತ್ತು ತರಕಾರಿಯುಳ್ಳ ಊಟದಲ್ಲಿ ಈ ಹಲ್ಲು ಪತ್ತೆಯಾಗಿದೆ. ಈ ಮಹಿಳೆ ಟ್ವೀಟ್ ಮಾಡುತ್ತಿದ್ದಂತೆ ಏರ್​ವೇಸ್​ ಆಕೆಯ ವಿವರಗಳನ್ನು ಪಡೆದುಕೊಂಡು ಕ್ಷಮೆ ಕೇಳಿದೆ. ಈ ಕುರಿತು ಅವಶ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಇದನ್ನೂ ಓದಿ : ವಿಮಾನ ನಿಲ್ದಾಣದ ಸ್ಕ್ಯಾನಿಂಗ್​ ಮಶೀನಿನಲ್ಲಿ ಪತ್ತೆಯಾದ ನಾಯಿ; ನೆಟ್ಟಿಗರ ಆಕ್ರೋಶ

ನೆಟ್ಟಿಗರು ಈ ಪೋಸ್ಟ್​ ನೋಡಿ ಎಂಥ ಅಸಹ್ಯವಿದು ಎನ್ನುತ್ತಿದ್ದಾರೆ. ನಾನು ಡೆಂಟಲ್​ ಇಂಪ್ಲ್ಯಾಂಟ್​ ಸ್ಪೆಷಲಿಸ್ಟ್ ಈ ಪ್ರಕರಣದ ಬಗ್ಗೆ ನನಗೆ ನಿಜಕ್ಕೂ ಕುತೂಹಲವಿದೆ ಎಂದಿದ್ದಾರೆ ಒಬ್ಬರು. ಇದು ಜೋಳದಂತೆ ಕಾಣುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ನಾನು ನಿಯಮಿತವಾಗಿ ಇದೇ ಏರ್​ವೇಸ್​ ಮೂಲಕ ಪ್ರಯಾಣಿಸುತ್ತೇನೆ. ಈ ವಿಷಯ ತಿಳಿದು ನನಗೆ ಅಸಹ್ಯವೆನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ಈ ವರದಿ ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 2:24 pm, Sat, 10 December 22