Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಸರಳವಾಗಿ ನಡೆಯಿತು ಮೋದಿ ತಾಯಿಯ ಅಂತ್ಯಸಂಸ್ಕಾರ, ವೈರಲ್ ಆಗುತ್ತಿದೆ ಈ ಫೋಸ್ಟ್

ಪ್ರಧಾನಿ ಮೋದಿ ಅವರ ತಾಯಿ ಇಂದು (ಶುಕ್ರವಾರ) ಬೆಳಗಿನ ಜಾವ 3.30ರ ಸುಮಾರಿಗೆ ನಿಧನರಾಗಿದ್ದು, ಇದೀಗ ಈ ಬಗ್ಗೆ ಒಂದು ಫೋಸ್ಟ್ ವೈರಲ್ ಆಗುತ್ತಿದೆ. ಮೋದಿ ಅವರ ತಾಯಿಯ ಅಂತ್ಯಸಂಸ್ಕಾರ ಎಷ್ಟು ಸರಳವಾಗಿ ನಡೆಯಿತು ಎಂದು.

Viral News: ಸರಳವಾಗಿ ನಡೆಯಿತು ಮೋದಿ ತಾಯಿಯ ಅಂತ್ಯಸಂಸ್ಕಾರ, ವೈರಲ್ ಆಗುತ್ತಿದೆ ಈ ಫೋಸ್ಟ್
ವೈರಲ್ ಫೋಟೋ Image Credit source: social Media
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 30, 2022 | 6:04 PM

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ (Heeraben) ಇಂದು (ಶುಕ್ರವಾರ) ಬೆಳಗಿನ ಜಾವ 3.30ರ ಸುಮಾರಿಗೆ ನಿಧನರಾಗಿದ್ದಾರೆ. 100 ವರ್ಷದ ಹೀರಾಬೆನ್ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ 2 ದಿನಗಳ ಹಿಂದೆ ಅಹಮದಾಬಾದ್‌ನ ಯುಎನ್ ಮೆಹ್ತಾ ಕಾರ್ಡಿಯಾಲಜಿ ಮತ್ತು ಸಂಶೋಧನಾ ಕೇಂದ್ರಕ್ಕೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮುಂಜಾನೆ ಮೃತಪಟ್ಟಿದ್ದಾರೆ. ತಾಯಿ ಆಗಲಿಕೆಯ ನೋವು ಒಂದು ಕಡೆಯಾದರೆ, ಇತ್ತ ಮೋದಿ ಇಂದು ತಾಯಿಯ ಅಂತ್ಯಸಂಸ್ಕಾರ ಕಾರ್ಯದಲ್ಲಿ ನಡೆದಕೊಂಡ ರೀತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು ಮೋದಿ ಈ ದೇಶದ ಪ್ರಧಾನಿ, ಅವರಷ್ಟೇ ಅವರ ಕುಟುಂಬಕ್ಕೂ ಸರ್ಕಾರಿ ಗೌರವಗಳು ಇರುತ್ತದೆ. ಅವರ ಕುಟುಂಬ ಕೂಡ ಸಾರ್ವಜನಿಕ ಜನಪ್ರಿಯತೆಯನ್ನು ಪಡೆದಿರುತ್ತದೆ. ಅವರ ಮನೆಯಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ ಅದು ಸಾರ್ವಜನಿಕ ಮುನ್ನಲೆಗೆ ಬರುತ್ತದೆ. ಅವರ ಮನೆಯಲ್ಲಿ ಸಾವಾದರೂ ಸರ್ಕಾರಿ ಗೌರವಗಳ ಮೂಲಕವೇ ಅಂತ್ಯಸಂಸ್ಕಾರ ಇರುತ್ತದೆ. ಆದರೆ ಮೋದಿ ತಾಯಿಗೆ ಈ ಯಾವುದೇ ಗೌರವ ಇರಲಿಲ್ಲ, ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ ಪ್ರಧಾನಿ ತಾಯಿ ಯಾವುದೇ ಸರ್ಕಾರಿ ಗೌರವಗಳು ಇಲ್ಲ, ಅವರ ಮೇಲೆ ಯಾವುದೇ ರಾಷ್ಟ್ರ ಧ್ವಜವನ್ನು ಹೊದಿಸಿಲ್ಲ, ಇದರ ಜೊತೆಗೆ ಪ್ರಧಾನಿ ಅಭಿಮಾನಿಗಳ ಘೋಷಣೆ, ಗಣ್ಯ ವ್ಯಕ್ತಿಗಳ ಆಗಮನ, ಸಂಜೆಯವರೆಗೆ ಲೈವ್ ಸುದ್ದಿ, ಅಥವಾ ಸಾರ್ವಜನಿಕ ದರ್ಶನ ಇದು ಯಾವುದಿಲ್ಲದೆ ಪ್ರಧಾನಿ ಮೋದಿ ಅವರ ತಾಯಿಗೆ ವಿದಾಯ ಹೇಳಿದ್ದಾರೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೋದಿ ಅವರ ತಾಯಿ ಇಂದು ಸಾವನ್ನಪ್ಪಿದ್ದಾರೆ, ರಾಷ್ಟ್ರದ ಪ್ರಧಾನಿ, ಅನೇಕ ದೇಶಗಳನ್ನು ಸುತ್ತಿ, ಸಾರ್ವಜನಿಕ ಜೀವನದಲ್ಲಿ ತೋಡಗಿಕೊಂಡ ವ್ಯಕ್ತಿಯ ತಾಯಿಗೆ ಆಡಂಬರದ ವಿದಾಯ ಇಲ್ಲದೆ ಸಾಮಾನ್ಯ ಜನರಂತೆ ತಾಯಿಗೆ ವಿದಾಯ ಹೇಳಿದ್ದಾರೆ. ಇದು ಮೋದಿ ಸರಳತೆಯನ್ನು ತೋರಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೋದಿಯ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಮೋದಿ ತಾಯಿ ಹೀರಾಬೆನ್ ಪಂಚಭೂತಗಳಲ್ಲಿ ಲೀನ; ಚಿತೆಗೆ ಅಗ್ನಿಸ್ಪರ್ಶ ಮಾಡಿದ ಪ್ರಧಾನಿ

ಮೋದಿ ಅವರು ಇಂದು ಕೋಲ್ಕತಾದಲ್ಲಿ ಅನೇಕ ಕಾರ್ಯಕ್ರಮಗಳಿಗೆ ಚಾಲನೆ ನೀಡಬೇಕಿತ್ತು. ತಾಯಿ ನಿಧನದ ಮಧ್ಯೆಯು ಮೋದಿ ಈ ಕಾರ್ಯಕ್ರಮಕ್ಕೆ ತಪ್ಪಿಸಿಕೊಳ್ಳದೇ, ನೋವಿನಲ್ಲೂ ತನ್ನ ಕರ್ತವ್ಯವನ್ನು ಮಾಡಿದ್ದಾರೆ. ಒಬ್ಬ ಮಗನಾಗಿ ತಾನು ಮಾಡಬೇಕಾದ ಎಲ್ಲ ಕರ್ತವ್ಯವನ್ನು ಮಾಡಿ, ಜೊತೆಗೆ ತನ್ನ ಸರ್ಕಾರದ ಕೆಲಸವನ್ನು ಕೂಡ ಮಾಡಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು, ಈ ಸಮಯದಲ್ಲಿ ಮಾತನಾಡಿದ ಪಶ್ಚಿಮ ಬಂಗಾಳದ ಸಿಎಂ ಮಮತ ಬ್ಯಾನರ್ಜಿ ಮೋದಿ ಅವರೇ ನೀವು ವಿಶ್ರಾಂತಿ ಪಡೆಯಿರಿ, ಅಮ್ಮನ್ನ ಕಳೆದುಕೊಂಡ ದುಃಖದಲ್ಲಿದ್ದರು ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಾ ಧನ್ಯವಾದಗಳು ಎಂದು ಹೇಳಿದ್ದಾರೆ.

ಇಂದು ಇನ್ನೊಂದು ಅಘಾತಕಾರಿ ಘಟನೆಯೊಂದು ನಡೆದಿದೆ. ಕ್ರಿಕೆಟಿಗ ರಿಷಬ್ ಪಂತ್ ಭೀಕರ ಕಾರು ಅಪಘಾತದಲ್ಲಿ ಆಸ್ಪತ್ರೆ ಸೇರಿದ್ದಾರೆ. ಇದೀಗ ಮೋದಿ ರಿಷಬ್ ಪಂತ್​ಗೆ ಶೀಘ್ರವಾಗಿ ಗುಣಮುಖವಾಗಿ ಬರುವಂತೆ ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:55 pm, Fri, 30 December 22

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್