Heeraben Modi Funeral: ಮೋದಿ ತಾಯಿ ಹೀರಾಬೆನ್ ಪಂಚಭೂತಗಳಲ್ಲಿ ಲೀನ; ಚಿತೆಗೆ ಅಗ್ನಿಸ್ಪರ್ಶ ಮಾಡಿದ ಪ್ರಧಾನಿ
ಗುಜರಾತ್ನ ಗಾಂಧಿನಗರದ ಚಿತಾಗಾರದಲ್ಲಿ 100 ವರ್ಷದ ಹೀರಾಬೆನ್ ಮೋದಿ ಅವರ ಅಂತಿಮ ಕ್ರಿಯೆಗಳು ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ.
ಗಾಂಧಿನಗರ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ (Heeraben Modi Death) ಇಂದು ಮುಂಜಾನೆ ಅಹಮದಾಬಾದ್ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ತಕ್ಷಣ ದೆಹಲಿಯಿಂದ ಆಗಮಿಸಿದ ಪ್ರಧಾನಿ ಮೋದಿ (Narendra Modi) ತಮ್ಮ ತಾಯಿಯ ಅಂತಿಮ ದರ್ಶನ ಪಡೆದಿದ್ದರು. ಬಳಿಕ ತಾವೇ ಮುಂದೆ ನಿಂತು ತಾಯಿಯ ಅಂತಿಮಯಾತ್ರೆಗೆ ಹೆಗಲು ಕೊಟ್ಟಿದ್ದರು. ಗಾಂಧಿನಗರದ (Gandhinagar) ಚಿತಾಗಾರದಲ್ಲಿ 100 ವರ್ಷದ ಹೀರಾಬೆನ್ ಮೋದಿ ಅವರ ಅಂತಿಮ ಕ್ರಿಯೆಗಳು ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ.
ಶತಾಯುಷಿಯಾಗಿದ್ದ ತಮ್ಮ ತಾಯಿಯ ಅಂತಿಮ ದರ್ಶನ ಪಡೆದ ನರೇಂದ್ರ ಮೋದಿ ಅಂತಿಮಯಾತ್ರೆಯಲ್ಲಿ ತಾಯಿ ಹೀರಾಬೆನ್ ಅವರ ಮೃತದೇಹಕ್ಕೆ ಹೆಗಲು ಕೊಟ್ಟಿದ್ದರು. ಗಾಂಧಿನಗರದ ರಸ್ತೆಗಳಲ್ಲಿ ತಾಯಿಯ ಮೃತದೇಹವನ್ನು ಹೊತ್ತು ಸಾಗಿದ ನರೇಂದ್ರ ಮೋದಿ ಅಮ್ಮನಿಗೆ ಅಂತಿಮ ವಿದಾಯ ಹೇಳಲಾಯಿತು. ಗುಲಾಬಿ ಹೂವಿನ ಎಸಳುಗಳನ್ನು ಅಂತಿಮಯಾತ್ರೆಯ ರಸ್ತೆಯುದ್ದಕ್ಕೂ ಹಾಕುವ ಮೂಲಕ ಹೀರಾಬೆನ್ ಮೋದಿಗೆ ಭಾವಪೂರ್ಣ ವಿದಾಯ ಹೇಳಲಾಯಿತು.
#WATCH | Gujarat: Heeraben Modi, mother of PM Modi, laid to rest in Gandhinagar. She passed away at the age of 100, today.
(Source: DD) pic.twitter.com/wqjixwB9o7
— ANI (@ANI) December 30, 2022
ಇದನ್ನೂ ಓದಿ: ಸಹೋದರನಿಗೆ ಅಪಘಾತ, ತಾಯಿಗೆ ಅನಾರೋಗ್ಯ; ಪ್ರಧಾನಿ ಮೋದಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಹೇಳಿದ್ದಿಷ್ಟು
ತಮ್ಮ ತಾಯಿಯ ನಿಧನದ ಬಗ್ಗೆ ಇಂದು ಮುಂಜಾನೆ ಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಭವ್ಯವಾದ ಶತಮಾನವೊಂದನ್ನು ಕಳೆದ ನನ್ನ ತಾಯಿ ದೇವರ ಪಾದದ ಮೇಲೆ ಮಲಗಿದ್ದಾರೆ. ಅಮ್ಮನಲ್ಲಿ ನಾನು ಯಾವಾಗಲೂ ತ್ರಿಮೂರ್ತಿಗಳನ್ನು ಅನುಭವಿಸಿದ್ದೇನೆ. ಅವರದ್ದು ತಪಸ್ವಿಯ ಪ್ರಯಾಣ. ನಿಸ್ವಾರ್ಥ ಕರ್ಮಯೋಗಿ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ನಡೆಸಿದ ನನ್ನ ತಾಯಿ ನಮ್ಮನ್ನು ಅಗಲಿದ್ದಾರೆ. ಅಮ್ಮನ 100ನೇ ಹುಟ್ಟುಹಬ್ಬದಂದು ನಾನು ಅವರನ್ನು ಭೇಟಿಯಾದಾಗ ಬುದ್ಧಿವಂತಿಕೆಯಿಂದ ಕೆಲಸ ಮಾಡು, ಶುದ್ಧತೆಯಿಂದ ಜೀವನ ನಡೆಸು ಎಂದು ನನಗೆ ಹೇಳಿದ್ದರು ಎಂದು ಮೋದಿ ತಮ್ಮ ತಾಯಿಯ ಬಗ್ಗೆ ಟ್ವೀಟ್ ಮಾಡಿದ್ದರು.
#WATCH | Mortal remains of Heeraben Modi, mother of PM Modi, brought to a crematorium for last rites in Gandhinagar. pic.twitter.com/Nq5Ddw9hTi
— ANI (@ANI) December 30, 2022
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ದೆಹಲಿಯಿಂದ ತಮ್ಮ ತಾಯಿ ಹೀರಾಬೆನ್ ಅವರನ್ನು ಭೇಟಿಯಾಗಲು ತೆರಳಿದ್ದರು. ಅವರು ಆಸ್ಪತ್ರೆಯಲ್ಲಿ ತಾಯಿಯನ್ನು ಭೇಟಿ ಮಾಡಿ, 1 ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಇದ್ದರು. ಹೀರಾಬೆನ್ ಮೋದಿ ಅವರು ಪ್ರಧಾನಿ ಮೋದಿಯವರ ಕಿರಿಯ ಸಹೋದರ ಪಂಕಜ್ ಮೋದಿ ಜೊತೆ ಗಾಂಧಿನಗರ ಬಳಿಯ ರೈಸನ್ ಗ್ರಾಮದಲ್ಲಿ ವಾಸಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಆಗಾಗ ರೈಸನ್‌ಗೆ ಭೇಟಿ ನೀಡುತ್ತಿದ್ದರು. ಗುಜರಾತ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ತಮ್ಮ ತಾಯಿಯೊಂದಿಗೆ ಸಮಯ ಕಳೆಯುತ್ತಿದ್ದರು.
ಇದನ್ನೂ ಓದಿ: Heeraben Modi Death: ಹೀರಾಬೆನ್ ಅಂತ್ಯಕ್ರಿಯೆ ಆರಂಭ; ತಾಯಿಯ ಮೃತದೇಹ ಹೊತ್ತು ಸಾಗಿದ ಪ್ರಧಾನಿ ಮೋದಿ
ಹೀರಾಬೆನ್ ಅವರ ಆರೋಗ್ಯದಲ್ಲಿ ಬುಧವಾರ ಬೆಳಿಗ್ಗೆ ಏರುಪೇರಾಗಿತ್ತು. ಹೀಗಾಗಿ ಅವರನ್ನು ಅಹಮದಾಬಾದ್ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಹಿಂದೆ 2016ರಲ್ಲಿ ಒಮ್ಮೆ ಹೀರಾಬೆನ್ ಅವರ ಆರೋಗ್ಯ ಹದಗೆಟ್ಟಿತ್ತು. 108 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಗಾಂಧಿನಗರದ ಸಿವಿಲ್ ಆಸ್ಪತ್ರೆಗೆ ದಾಖಲಾಗಿ ಅವರು ಚಿಕಿತ್ಸೆ ಪಡೆದಿದ್ದರು. ಸಾಮಾನ್ಯ ರೋಗಿಗಳಂತೆ ಆಸ್ಪತ್ರೆಯ ಸಾಮಾನ್ಯ ವೈದ್ಯರ ಬಳಿ ತಪಾಸಣೆಗೆ ಒಳಗಾಗಿದ್ದರು.