ಏರ್ಪಾಡ್ಸ್ ಕಳೆದುಕೊಂಡಿದ್ದು ವಿಮಾನದಲ್ಲಿ, ಹುಡುಕಿಕೊಡಿ ಎನ್ನುತ್ತಿರುವುದು ನೆಟ್ಟಿಗರಲ್ಲಿ
AirPods : ವಿಮಾನದಲ್ಲಿರುವ ನನ್ನ ಏರ್ಪಾಡ್ಸ್ ಎಲ್ಲೆಲ್ಲಿ ಪ್ರಯಾಣಿಸುತ್ತಿದೆ ಎಂದು ನಾನಿಲ್ಲಿ ಟ್ರ್ಯಾಕ್ ಮಾಡುತ್ತಿದ್ದೇನೆ. ದಯವಿಟ್ಟು ಮರಳಿಸಿ ಎಂದು ಈಕೆ ವಿಮಾನ ಸಂಸ್ಥೆಗೆ ತಿಳಿಸಿದ್ದಾಳೆ. ಮುಂದೆ ಏನಾಗಿದೆ? ವಿಡಿಯೋ ನೋಡಿ.
Viral Video : ಪ್ರಯಾಣದಲ್ಲಿರುವಾಗ ಅನೇಕ ವಸ್ತುಗಳನ್ನು ನಮಗರಿವಿಲ್ಲದೆಯೇ ಕಳೆದುಕೊಳ್ಳುತ್ತೇವೆ. ಅದು ಬಸ್ಸು, ರೈಲು ಅಥವಾ ವಿಮನ ಹೀಗೆ ಯಾವುದಾದರೂ ಸರಿ. ಆದರೆ ಕಳೆದುಕೊಂಡ ಸಾಮಾನುಗಳು ನೆನಪಿಗೆ ಬರುವುದು ಆ ರೈಲೋ, ಬಸ್ಸೋ, ವಿಮಾನವೋ ಚಲಿಸಿದಾಗಲೇ ಅಲ್ಲವೆ? ಎಲ್ಲಿ ಹೋಯಿತೋ ಹೋಗಲಿ ಬಿಡು ಎಂದು ಹೇಳಿಕೊಂಡು ಸುಮ್ಮನಾಗುವ ಕಾಲ ಇದಲ್ಲ. ಕಳೆದುಕೊಂಡ ವಸ್ತು ಎಲ್ಲಿದೆ, ಎಲ್ಲೆಲ್ಲಿ ಪ್ರಯಾಣಿಸುತ್ತಿದೆ ಎನ್ನುವುದನ್ನು ಪತ್ತೆ ಹಚ್ಚುವ ತಂತ್ರಜ್ಞಾನದ ಕಾಲವಿದು. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಈ ಮಹಿಳೆ ವಿಮಾನದಲ್ಲಿ ತನ್ನ ಏರ್ಪಾಡ್ ಬಿಟ್ಟುಬಂದಿದ್ದಾಳೆ. ನಂತರ ಸಾಮಾಜಿಕ ಜಾಲತಾಣದಲ್ಲಿ ತನ್ನ ಏರ್ಪಾಡ್ ಮರಳಿಸಲು ಸಹಾಯ ಕೋರಿದ್ದಾಳೆ.
ಇದನ್ನೂ ಓದಿView this post on Instagram
ಬ್ರಿಟನಿ ಎಂಬಾಕೆ ತಾನು ಯಾವಾಗ ಹೇಗೆ ಎಲ್ಲಿ ತನ್ನ ಏರ್ಪಾಡ್ ಕಳೆದುಕೊಂಡೆ ಎಂಬುದನ್ನು ಇನ್ಸ್ಟಾಗ್ರಾಮ್ನ ತನ್ನ ಅಕೌಂಟಿನಲ್ಲಿ ವಿವರಿಸಿದ್ದಾಳೆ. ಡೆಲ್ಟಾ ಏರ್ಲೈನ್ಸ್ನಲ್ಲಿ ಆ್ಯಮ್ಸ್ಟರ್ಡ್ಯಾಮ್ಗೆ ಹೋಗುತ್ತಿದ್ದಾಗ ವಿಮಾನದ ಪಾಕೆಟ್ನಲ್ಲಿ ತನ್ನ ಏರ್ಪಾಡ್ ಇಟ್ಟು ಮರೆತುಬಿಟ್ಟಿದ್ದಾಳೆ. ನಂತರ ಈ ಏರ್ಲೈನ್ಸ್ಗೆ ಮೇಲ್ ಮಾಡಿ, ದಯವಿಟ್ಟು ಏರ್ಪಾಡ್ ಹುಡುಕಿ ಮರಳಿಸಿ ಎಂದು ವಿನಂತಿಸಿಕೊಂಡಿದ್ದಾಳೆ. ಆದರೆ, ಕ್ಷಮಿಸಿ ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರಿಸಿದ್ದಾರೆ. ಖಂಡಿತ ಹುಡುಕಿದರೆ ಖಂಡಿತ ಸಿಗುತ್ತದೆ. ಏಕೆಂದರೆ ಈತನಕ ಆ ವಿಮಾನ ಎಲ್ಲೆಲ್ಲಿ ಪ್ರಯಾಣಿಸಿದೆಯೋ ಅದನ್ನು ನಾನು ಟ್ರ್ಯಾಕ್ ಮೂಲಕ ನೋಡಬಹುದಾಗಿದೆ ಎಂದು ತಿಳಿಸಿದ್ದಾಳೆ.
ಆಗ ಡೆಲ್ಟಾ ಏರ್ಲೈನ್ಸ್ನಿಂದ ಬ್ರಿಟನಿಯನ್ನು ಸಂಪರ್ಕಿಸಿ, ಏರ್ಪಾಡ್ ಹುಡುಕಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದೆ. ಇದೆಲ್ಲವನ್ನೂ ಈಕೆ ನೆಟ್ಟಿಗರಿಗೆ ವಿವರಿಸಿದ್ದು, ಈ ವಿಡಿಯೋ ಅನ್ನು ಈಗಾಗಲೇ 3 ಲಕ್ಷ ಜನರು ನೋಡಿದ್ದಾರೆ. 56,000 ಜನರು ಇಷ್ಟಪಟ್ಟಿದ್ದಾರೆ. ಸಾಕಷ್ಟು ಜನ ಪ್ರತಿಕ್ರಿಯಿಸಿದ್ದಾರೆ.
View this post on Instagram
‘ಈ ಏರ್ಪಾಡ್ ನನಗಿಂತ ವಿಮಾನದಲ್ಲಿ ನನಗಿಂತ ಹೆಚ್ಚು ಪ್ರಯಾಣೀಸಿದೆ’ ಎಂದಿದ್ದಾರೆ ಒಬ್ಬರು. ಇನ್ನೊಬ್ಬರು, ‘ಇಷ್ಟೆಲ್ಲಾ ಶ್ರಮ ವ್ಯಯಿಸುವ ಬದಲು ಬೇರೊಂದನ್ನು ಖರೀದಿಬಹುದಿತ್ತಲ್ಲವೆ?’ ಎಂದಿದ್ದಾರೆ. ‘ಅಂತೂ ನಿಮ್ಮ ಏರ್ಪಾಡ್ ಕಥೆಯಿಂದ ನಮಗೆ ಉಚಿತ ಮನರಂಜನೆ ಸಿಕ್ಕಿದೆ’ ಎಂದಿದ್ದಾರೆ ಇನ್ನೂ ಒಬ್ಬರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:23 pm, Wed, 19 October 22