ಡೋಗೆ ಮೀಮ್ ಖ್ಯಾತಿಯ 17 ವರ್ಷದ ಶಿಬಾ ಇನು ಎಂಬ ನಾಯಿಗೆ ಲ್ಯುಕೇಮಿಯಾ
Doge Meme : ಈ ನಾಯಿಯು ಅದೆಷ್ಟು ಜನಪ್ರಿಯವಾಯಿತೆಂದರೆ ‘Dogecoin’ ಎಂಬ ಕ್ರಿಪ್ಟೋಕರೆನ್ಸಿಯ ಮೀಮ್ ಕಾಯಿನ್ ಮೇಲೆ ಇದರ ಮುಖವನ್ನು ಮುದ್ರಿಸಲಾಯಿತು. ಇದೀಗ ನೆಟ್ಟಿಗರು ಈ ನಾಯಿಯ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.
Viral Video : ಡೋಗೆ ಮೀಮ್ಗಳಿಗೆ ಹೆಸರಾಗಿದ್ದ ಶಿಬಾ ಇನು- 17 ವರ್ಷದ ಕಬೊಸು ಎಂಬ ನಾಯಿ ಲ್ಯುಕೇಮಿಯಾ ಮತ್ತು ಲಿವರ್ಗೆ ಸಂಬಂಧಿಸಿದ ಕಾಯಿಲೆಗೆ ಈಡಾಗಿದೆ ಎಂದು ಅದರ ಪೋಷಕಿ ಅತ್ಸುಕೋ ಸಾತೋ ಇನ್ಸ್ಟಾಗ್ರಾಂನ ತಮ್ಮ ಖಾತೆಯಲ್ಲಿ ಅಪ್ಡೇಟ್ ಮಾಡಿದ್ದಾರೆ. ಈ ವಿಷಯ ತಿಳಿದ ಕೊಬೊಸುನ ಅಭಿಮಾನಿಗಳು ಚೇತರಿಸಿಕೊಳ್ಳುವಂತೆ ಹಾರೈಸುತ್ತಿದ್ದಾರೆ. ಅತ್ಸುಕೋಗೆ ಧೈರ್ಯದಿಂದ ಇರುವಂತೆ ಸಾಂತ್ವನ ಹೇಳುತ್ತಿದ್ದಾರೆ.
ಇದನ್ನೂ ಓದಿView this post on Instagram
ಪೋಷಕಿ ಅತ್ಸುಕೋ ಸಾತೋ ಕಬೊಸು ಆರೋಗ್ಯದ ಬಗ್ಗೆ ಅಪ್ಡೇಟ್ ಕೊಡುತ್ತ ಪೋಸ್ಟ್ ಹಾಕುತ್ತಿದ್ದಾರೆ. ಕ್ರಿಸ್ಮಸ್ನ ಹಿಂದಿನ ದಿನ ಕೊಬೊಸು ಊಟ ಮಾಡುವುದನ್ನು, ನೀರು ಕುಡಿಯುವುದನ್ನು ಸಂಪೂರ್ಣ ನಿಲ್ಲಿಸಿದೆ. ವೈದ್ಯರ ಮಾರ್ಗದರ್ಶನದ ಮೇಲೆ ಆಹಾರ ಕೊಡಲು ಪ್ರಯತ್ನಿಸಲಾಗುತ್ತಿದೆ. ಒಟ್ಟಾರೆ ಕಾಯಿಲೆಯ ಸ್ವರೂಪ ಗಂಭೀರಕ್ಕೆ ತಿರುಗಿದೆ ಎಂದಿದ್ದಾರೆ ಅತ್ಸುಕೋ.
2010ರಲ್ಲಿ ಕಬೊಸು ಡೋಗೆ ಮೀಮ್ ಮೂಲಕ ವ್ಲಾಗ್ ನಲ್ಲಿ ಕಾಣಿಸಿಕೊಳ್ಳಹತ್ತಿತು. ಕಬೊಸು ಸಾಕುನಾಯಿಯಲ್ಲ. ರಕ್ಷಿಸಿದ ನಾಯಿ. ಇದರ ಪೋಷಕಿ ಅತ್ಸುಕೋ ವ್ಲಾಗ್ ಮಾಡುವುದರ ಮೂಲಕ ಇದನ್ನು ಜನಪ್ರಿಯಗೊಳಿಸಿದರು. ಪೋಸ್ಟ್ಗಳು ವೈರಲ್ ಆದ ನಂತರ ಜಗತ್ತಿನಾದ್ಯಂತ ಕೋಟ್ಯಂತರ ಜನರ ಮನಸ್ಸನ್ನು ಇದು ಸೂರೆಗೊಂಡಿತು. ಇದರ ಮುಖವು ಅದೆಷ್ಟು ಜನಪ್ರಿಯವಾಯಿತೆಂದರೆ ‘Dogecoin’ ಎಂಬ ಕ್ರಿಪ್ಟೋಕರೆನ್ಸಿಯನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:27 pm, Thu, 29 December 22