Viral Video: ಓನು ಬಂಗಾರಾ ಓನು ಪುಟ್ಟಾ, ಈ ವೀಕೆಂಡ್​ ಎಲ್ಲಿ ಹೋಗೋಣ?

Motherhood : ಈ ವಿಡಿಯೋ ಅನ್ನು 3.7 ಮಿಲಿಯನ್ ಜನರು ನೋಡಿದ್ದಾರೆ. ಮಂಗನಿಂದ ಮಾನವನೋ ಮಾನವನಿಂದ ಮಂಗನೋ, ಈ ವಿಡಿಯೋ ನೋಡಿದ ಮೇಲೆ ಗೊಂದಲ ಮತ್ತಷ್ಟು ಹೆಚ್ಚಾಗುತ್ತಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ನೀವೇನಂತೀರಿ?

Viral Video: ಓನು ಬಂಗಾರಾ ಓನು ಪುಟ್ಟಾ, ಈ ವೀಕೆಂಡ್​ ಎಲ್ಲಿ ಹೋಗೋಣ?
ಮನುಷ್ಯನಂತೆ ಮರಿಯನ್ನು ಮುದ್ದಾಡುತ್ತಿರುವ ಕೋತಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 03, 2023 | 10:19 AM

Monkey : ಅಮ್ಮಕೋತಿ ಎಷ್ಟೇ ಜೋರಾಗಿ ಓಡಲಿ, ಎಷ್ಟೇ ಎತ್ತರದಲ್ಲಿ ಹಾರಲಿ ಮರಿಕೋತಿ ಮಾತ್ರ ಆಕೆಯನ್ನು ಅವುಚಿಕೊಂಡು ಗಟ್ಟಿ ಹಿಡಿದುಕೊಂಡಿರುತ್ತದೆ. ಉಳಿದಂತೆ ಕುಳಿತಾಗ ಅಮ್ಮನ ಮೇಲೆ ಕುಳಿತುಕೊಂಡಿರುತ್ತದೆ. ನೆತ್ತಿ ನೇವರಿಸುತ್ತಲೋ ಮಡಿಲೊಳಗೆ ಎತ್ತಿಕೊಂಡೋ ಮರಿಯನ್ನು ಅಮ್ಮಕೋತಿ ಸಮಾಧಾನ ಮಾಡುತ್ತಿರುತ್ತದೆ. ಈ ದೃಶ್ಯಗಳೆಲ್ಲವೂ ನಮಗೆ ನೋಡಲು ಸಿಗುವಂಥವು. ಆದರೆ ಇಲ್ಲಿರುವ ಈ ದೃಶ್ಯ ನೋಡಿ. ನಮ್ಮ ನಿಮ್ಮಂತೆ ತನ್ನ ಮಗುವನ್ನು ಎತ್ತಿ ಆಡಿಸುತ್ತಿದೆ ಈ ಅಮ್ಮಕೋತಿ.

ಈ ತನಕ ಈ ವಿಡಿಯೋ ಅನ್ನು 3.7 ಮಿಲಿಯನ್​ ಜನರು ನೋಡಿದ್ದಾರೆ. ಆಹಾ ಎಷ್ಟು ಛಂದ ಮುದ್ದು ಮಾಡುತ್ತಿದೆ ಮತ್ತು ಮುತ್ತು ನೀಡುತ್ತಿದೆ ಈ ಅಮ್ಮಕೋತಿ. ನಿಜಕ್ಕೂ ಇದು ಅಪರೂಪದ ದೃಶ್ಯ ನಾನು ಈತನಕ ನೋಡಿಯೇ ಇಲ್ಲ. ಇದೇನು ಮನುಷ್ಯನನ್ನು ನೋಡಿ ಕಲಿತಿದ್ದಲ್ಲ, ಇದು ಅವುಗಳ ಮೂಲ ಸ್ವಭಾವ. ಖಂಡಿತ ಜೀವವಿಕಾಸವಾಗುತ್ತಿದೆ ಇಲ್ಲಿ… ಅಂತೆಲ್ಲ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral: ನನ್ನ ಆತ್ಮ ಪ್ಲಾಸ್ಟಿಕ್​ನಿಂದ ಮಾಡಲ್ಪಟ್ಟಿಲ್ಲ; 8 ವರ್ಷದ ಬಾಲಕಿಯ ಮೊದಲ ಕವನ

ಪೋಷಕರು ಮಕ್ಕಳನ್ನು ಮುದ್ದಿಸುವುದು ಎಲ್ಲಾ ಜೀವಿಗಳಲ್ಲೂ ಸಹಜ ಅಂಥದ್ದೇನಿದೆ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ನಾನು ನನ್ನ ನಾಯಿಯನ್ನು ಹೀಗೇ ಮುದ್ದಿಸುತ್ತೇನೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ವಿಡಿಯೋದ ಹಿನ್ನೆಲೆಯ ಸಂಗೀತ ಯಾವುದು ಎಂದು ಕೇಳಿದ್ದಾರೆ ಒಬ್ಬರು. ನಾವು ಕೋತಿಗಳನ್ನು ಅನುಸರಿಸುತ್ತಿದ್ದೇವೆಯೋ ಅವುಗಳು ನಮ್ಮನ್ನು ಅನುಕರಿಸುತ್ತಿದ್ದಾವೆಯೋ, ಈ ವಿಡಿಯೋ ನೋಡಿದ ಮೇಲೆ ನನ್ನ ಗೊಂದಲ ಹೆಚ್ಚಾಗುತ್ತಿದೆ ಎಂದು ಕೆಲವರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:18 am, Sat, 3 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ