Viral: ‘ನನ್ನ ಆತ್ಮ ಪ್ಲಾಸ್ಟಿಕ್​ನಿಂದ ಮಾಡಲ್ಪಟ್ಟಿಲ್ಲ’; 8 ವರ್ಷದ ಬಾಲಕಿಯ ಮೊದಲ ಕವನ

Poetry Prompts : 2024ರಲ್ಲಿ ಪೆಂಗ್ವಿನ್​ ರ್ಯಾಂಡಮ್​ ಹೌಸ್​ನಿಂದ ಪ್ರಕಟವಾಗಲಿರುವ 'ದಿ ಮ್ಯಾಜಿಕ್​ ವರ್ಡ್ಸ್​' ಪುಸ್ತಕದಲ್ಲಿ ಲಿಲ್ಲಿಪುಟ್ಟಿಯ ಈ ಕವನ ಪ್ರಕಟವಾಗಲಿದೆ. ಕವನ ಬರೆಯುವುದು ಹೇಗೆ ಮತ್ತದು ಪ್ರಕಟವಾಗಬೇಕೆ? ಇಲ್ಲೊಂದು ಉಪಾಯವಿದೆ!

Viral: 'ನನ್ನ ಆತ್ಮ ಪ್ಲಾಸ್ಟಿಕ್​ನಿಂದ ಮಾಡಲ್ಪಟ್ಟಿಲ್ಲ'; 8 ವರ್ಷದ ಬಾಲಕಿಯ ಮೊದಲ ಕವನ
ಎಂಟು ವರ್ಷದ ಲಿಲ್ಲಿ ಬರೆದ ಕವಿತೆ
Follow us
|

Updated on: Jun 02, 2023 | 11:57 AM

Poetry : ನನ್ನ ಮನೆ ಬಂಗಾರದಿಂದ ಮಾಡಲ್ಪಟ್ಟಿಲ್ಲ/ನನ್ನ ಹೃದಯ ಮಂಜುಗಡ್ಡೆಯಿಂದ ಮಾಡಲ್ಪಟ್ಟಿಲ್ಲ/ನನ್ನ ಆತ್ಮ ಪ್ಲಾಸ್ಟಿಕ್​ನಿಂದ ಮಾಡಲ್ಪಟ್ಟಿಲ್ಲ/ಹೂವುಗಳನ್ನು ಯಾರೂ ಕೀಳಲಾಗುವುದಿಲ್ಲ… ಹೀಗೆ ಸಾಗುತ್ತದೆ ಈ ಕವನ. ಎಂಟು ವರ್ಷದ ಬಾಲಕಿಯೊಬ್ಬಳು ಬರೆದ ಮೊದಲ ಕವನ ಇದಾಗಿದೆ. ‘ಈಕೆ ನನ್ನ ಸೋದರಿಯ ಮಗಳು. ತಾನು ಲೇಖಕಿಯಾಗಬೇಕು ಎಂದುಕೊಂಡಿದ್ದಾಳೆ. ಈಕೆಯ ಮೊದಲ ಕವನವು ಇದಾಗಿದೆ’ ಎಂದು ಲೇಖಕ ಮತ್ತು ಬಾಲಕಿ ಲಿಲ್ಲಿಯ ಮಾವ ಜೋಸೆಫ್​ ಫಸಾನೋ (Joseph Fasano) ಟ್ವೀಟ್ ಮಾಡಿದ್ದಾರೆ.

ಜೋಸೆಫ್​ ಎಂಟು ವರ್ಷದ ತಮ್ಮ ಸೊಸೆಗೆ ವಾಕ್ಯಗಳ ಚೌಕಟ್ಟನ್ನು ಹಾಕಿ ಕೊಟ್ಟಿದ್ದಾರೆ. ಖಾಲಿ ಬಿಟ್ಟ ಜಾಗದಲ್ಲಿ ಆಕೆ ತನ್ನ ಮನಸ್ಸಿಕನಾಳದ ಪದಗಳನ್ನು ಹುದುಗಿಸುತ್ತ ಹೋಗಿದ್ದಾಳೆ. ಆಗ ಅದು ಅದ್ಭುತವಾದ ಕಾವ್ಯದ ರಸಧಾರೆಯಾಗಿ ಹೊಮ್ಮಿದೆ. ಅದೇ ಮೇಲಿನ ಕವನ ‘ಹೋಮ್’. ‘ಈ ಕವನವು ಮುಂಬರುವ ದಿನಗಳಲ್ಲಿ ಪೆಂಗ್ವಿನ್​ ರ್ಯಾಂಡಮ್​  (@penguinrandom) ಪ್ರಕಾಶನದಿಂದ ಪ್ರಕಟವಾಗಲಿರುವ ‘ದಿ ಮ್ಯಾಜಿಕ್​ ವರ್ಡ್ಸ್’​ನಲ್ಲಿ (The Magic Words) ಪ್ರಕಟಗೊಳ್ಳಲಿದೆ. ಯಾವುದೇ ವಯಸ್ಸಿನವರು ಈ ಕೆಳಗಿರುವ ಪೋಯೆಟ್ರಿ ಪ್ರಾಂಪ್ಟ್ಸ್ (Poetry Prompts)​ ಉಪಯೋಗಿಸಿಕೊಂಡು ಕವನಗಳನ್ನು ಬರೆಯಬಹುದು. ಮುಂಬರುವ ದಿನಗಳಲ್ಲಿ ಪ್ರಕಟವಾಗುವ ದಿ ಮ್ಯಾಜಿಕ್ ವರ್ಡ್ಸ್​ನಲ್ಲಿ ಪ್ರಕಟಿಸಲಾಗುವುದು’ ಎಂದಿದ್ದಾರೆ ಜೋಸೆಫ್​.

ಪ್ರಾಂಪ್ಟ್ ಅನ್ನು ಆಧರಿಸಿ ಆಲ್ಝೈಮರ್ (Alzheimer) ರೋಗಿಯ ಕವಿತೆಯನ್ನು ಓದಿದ ನೆನಪಾಗುತ್ತಿದೆ ಈ ಪೋಸ್ಟ್​ ನೋಡಿ, ಅದು ಬಹಳ ಸುಂದರವಾಗಿತ್ತು. ಅದರ ಪ್ರಾಂಪ್ಟ್ ಮಾಡಿದವರು ನೀವೇನಾ? ನಾನದನ್ನು ಮತ್ತೆ ಹುಡುಕುತ್ತಲಿದ್ದೇನೆ ಎಂದು ಒಬ್ಬರು ಈ ಪೋಸ್ಟ್​ನಲ್ಲಿ ಕೇಳಿದ್ದಾರೆ. ಹೌದು ಆ ಪ್ರಾಂಪ್ಟ್ ಮಾಡಿದವನು ನಾನೇ. ನನ್ನ ಪ್ರಾಂಪ್ಟ್ಸ್​ ಜನಕ್ಕೆ ಸಹಾಯವಾಗುತ್ತಿವೆ ಎನ್ನುವುದನ್ನು ಕೇಳಿ ನನಗೆ ಬಹಳ ಖುಷಿಯಾಗುತ್ತಿದೆ ಎಂದಿದ್ಧಾರೆ ಜೋಸೆಫ್​. ಈ ಕೆಳಗಿನ ಲಿಂಕ್​ ನೋಡಿ ಆ ಕವಿತೆ ಇದೆ.

ನಾನೂ ಈ ಕಾವ್ಯ ಬರೆಯುವಿಕೆಯ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬಹುದೆ? ಎಂದು ಅನೇಕರು ಕೇಳಿದ್ಧಾರೆ. ಖಂಡಿತವಾಗಿಯೇ ಬರೆಯಿರಿ, 2024ರ ಮಾರ್ಚ್​ನಲ್ಲಿ ಪ್ರಕಟಗೊಳ್ಳಲಿರುವ ಪುಸ್ತಕದಲ್ಲಿ ಪ್ರಕಟಿಸುವ ಅವಕಾಶ ನಿಮ್ಮದಾಗಲಿದೆ ಎಂದಿದ್ದಾರೆ ಜೋಸೆಫ್. ಲಿಲ್ಲಿಗೆ ಕೇಳಿ, ನಾನು ಆಕೆಯ ಕವನವನ್ನು ಪ್ರಿಂಟೌಟ್​ ತೆಗೆದುಕೊಂಡು ನನ್ನ ಗೋಡೆಯ ಮೇಲೆ ಅಂಟಿಸಿಕೊಳ್ಳಬಹುದೆ? ಇದರಿಂದ ಖಂಡಿತಾ ನಾನು ಸ್ಫೂರ್ತಿ ಪಡೆಯುತ್ತೇನೆ ಎಂದಿದ್ದಾರೆ ಒಬ್ಬರು. ಖಂಡಿತ ನೀವು ಪ್ರಿಂಟ್​ಔಟ್​ ತೆಗೆದುಕೊಳ್ಳಬಹುದು ಎಂದು ಲಿಲ್ಲಿ ಪರವಾಗಿ ಜೋಸೆಫ್​ ಉತ್ತರಿಸಿದ್ದಾರೆ.

ಇದನ್ನೂ ಓದಿ : Viral Video: ಹೀಗೊಂದು ಟ್ವಿಸ್ಟ್​ ಈ ವಿಡಿಯೋಗಿರಬಹುದು ಎಂದು ನೀವು ಊಹಿಸಲಾರಿರಿ

ಇಂಥದ್ದನ್ನು ನಾನು ಹಿಂದೆಂದೂ ನೋಡಿರಲೇ ಇಲ್ಲ. ಬುದ್ಧಿಮಾಂದ್ಯ ಮತ್ತು ವಯಸ್ಸಾದವರಿಗೆ ಕಾರ್ಯಕ್ರಮಗಳನ್ನು ರೂಪಿಸುತ್ತೇನೆ. ಲಿಲ್ಲಿ ಅತ್ಯುತ್ತಮ ಬರಹಗಾರ್ತಿಯಾಗಬಲ್ಲಳು. ಆಕೆಯ ಪುಸ್ತಕವನ್ನು ಖರೀದಿಸಲು ನಾನು ಕಾಯುತ್ತಿದ್ದೇನೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ನೋಡಿ ಹೀಗೊಂದು ಸೃಜನಶೀಲ ಉಪಾಯವಿದೆ ಎಂಬ ಬಗ್ಗೆ ನಿಮಗೆ ಗೊತ್ತಿತ್ತೆ? ನೀವೂ ಕೂಡ ಈ ಪ್ರಯೋಗವನ್ನು ಯಾಕೆ ಮಾಡಬಾರದು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ