Viral Video: ಹೀಗೊಂದು ಟ್ವಿಸ್ಟ್ ಈ ವಿಡಿಯೋಗಿರಬಹುದು ಎಂದು ನೀವು ಊಹಿಸಲಾರಿರಿ
Creative Idea : ನಿಮ್ಮ ತಲೆಗೆ, ಕಲೆಗೆ ಭಾರೀ ಬೇಡಿಕೆ ಇದೆ. ಎಷ್ಟು ಸೃಜನಾತ್ಮಕವಾಗಿ ಯೋಚಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಭವಿಷ್ಯ ರೂಪುಗೊಳ್ಳುವ ಕಾಲ ಇದಾಗಿದೆ. ಅಪ್ಪಟ ಸೃಜನಶೀಲತೆಗೆ ಈ ವಿಡಿಯೋ ಉತ್ತಮ ಉದಾಹರಣೆ.
Scarcity : ಅಣ್ಣಾ, ನಾಳೆಯಿಂದ ಒಂದು ಲೀಟರ್ ಜಾಸ್ತಿ ಕೊಡಿ ಮನೆಗೆ ಅತಿಥಿಗಳು ಬರುವವರಿದ್ದಾರೆ ಎಂದು ಮನೆಯೊಡತಿ ಹೇಳಿದಾಗ, ಆಯ್ತು ಎಂದು ಹೇಳುತ್ತಾನೆ. ತುಂಬಿದ ಪಾತ್ರೆಯನ್ನು ತಂದು ಗ್ಯಾಸ್ ಕಟ್ಟೆಯ ಮೇಲೆ ಇಡುವ ಹೊತ್ತಿಗೆ ಮಗು ಅಳುವ ಶಬ್ದ ಆಕೆ ಕೋಣೆಗೆ ಹೋಗುತ್ತಾಳೆ. ಕಿಟಕಿಯಿಂದ ಬಂದ ಬೆಕ್ಕು ಪಾತ್ರೆಯೊಳಗೆ ಇಣುಕುತ್ತದೆ. ಆದರೆ ಕುಡಿಯುವುದಿಲ್ಲ. ಯಾಕೆ? ಈ ವಿಡಿಯೋ ನೋಡಿ ಹಾಗಿದ್ದರೆ.
Whoa!!! That’s a twist I certainly did not expect! Clever idea that plays on our preconceived notions!
ಇದನ್ನೂ ಓದಿSimple, smart work by the agency Campen Factory. (not mentioning the client’s name to avoid spoilers – you’d get to know it in the end anyway). pic.twitter.com/I2CA9OyMPm
— Karthik ?? (@beastoftraal) May 31, 2023
ನೀರನ್ನು ಉಳಿಸಿ ಇಲ್ಲವಾದರೆ ಭವಿಷ್ಯದಲ್ಲಿ ಇಂಥ ದಿನಗಳೂ ಬರಬಹದು ಎಂಬ ಹಿನ್ನೆಲೆ ಧ್ವನಿಯೊಂದಿಗೆ ಈ ಪುಟ್ಟ ವಿಡಿಯೋ ಸಂಪನ್ನಗೊಳ್ಳುತ್ತದೆ. ಕೊನೆಯ ತನಕ ನೀವು ಹಾಲು ಎಂದೇ ತಿಳಿದುಕೊಂಡಿರುತ್ತೀರಿ ಅಲ್ಲವೆ? ಮುಂದೊಂದು ದಿನ ಹಾಲು, ಪೆಟ್ರೋಲ್, ಎಣ್ಣೆ, ತುಪ್ಪದಂತೆ ನೀರನ್ನು ಬಳಸುವಂಥ ಕಷ್ಟವನ್ನು ತಂದುಕೊಳ್ಳದಂತೆ ಜವಾಬ್ದಾರಿಯಿಂದ ನಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎನ್ನವು ಸಂದೇಶವನ್ನು ಇದು ಸಾರುತ್ತದೆ.
ಇದನ್ನೂ ಓದಿ : Viral: ಎಲಾನ್ ಮಸ್ಕ್ ಭಾರತದ ಅಳಿಯನಾಗಲಿದ್ದಾರೆಯೇ?!
ಡಿಜಿಟಲ್ ಕಂಟೆಂಟ್ ಕ್ರಿಯೇಷನ್ ಎನ್ನುವುದು ಈವತ್ತು ದೊಡ್ಡ ಉದ್ಯಮವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ನಿಮ್ಮ ತಲೆಗೆ, ಕಲೆಗೆ ಭಾರೀ ಬೇಡಿಕೆ ಇದೆ. ಎಷ್ಟು ಸೃಜನಾತ್ಮಕವಾಗಿ ಯೋಚಿಸುತ್ತೀರಿ, ಬರೆಯುತ್ತೀರಿ, ವಿಡಿಯೋ ಕಂಟೆಂಟ್ ಸೃಷ್ಟಿಸುತ್ತೀರಿ ಎನ್ನುವುದರ ಮೇಲೆ ಭವಿಷ್ಯ ರೂಪುಗೊಳ್ಳುತ್ತದೆ. ಜಾಹೀರಾತು ಕಂಪೆನಿಗಳು, ಡಿಜಿಟಲ್ ಏಜೆನ್ಸಿಗಳು ನಿಮ್ಮಂಥವರಿಗಾಗಿ ಕಾಯುತ್ತಿರುತ್ತವೆ.
ಇದನ್ನೂ ಓದಿ : Viral Video: 22 ವರ್ಷಗಳ ನಂತರ ಒಡಹುಟ್ಟಿದವರ ಪುನರ್ಮಿಲನ
ತುಂಬಾ ಬುದ್ಧಿವಂತಿಕೆಯಿಂದ ಕೂಡಿದ ಐಡಿಯಾ ಇದಾಗಿದೆ ಆದರೆ ಕೊನೆಯಲ್ಲಿ ಈ ಕಂಪೆನಿಯ ಹೆಸರು ಬರಬಾರದಿತ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಕಂಪೆನಿಯ ಜಾಹೀರಾತು ಎಂದು ನೋಡದೆ ಇದನ್ನು ಸೃಜನಶೀಲವಾಗಿ ಮತ್ತು ಸಂದೇಶಾತ್ಮಕವಾಗಿ ನೋಡಿದರೆ ಸಾಕು ಎಂದೂ ಕೆಲವರು ಹೇಳುತ್ತಿದ್ದಾರೆ.
ಕೊನೇತನಕ ಇಂಥದೊಂದು ಟ್ವಿಸ್ಟ್ ಈ ವಿಡಿಯೋಗೆ ಇರಬಹುದು ಎಂಬ ಕಿಂಚಿತ್ ಸುಳಿವೂ ನಿಮಗಿರಲಿಲ್ಲ ಅಲ್ಲವೇ, ಏನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:19 am, Thu, 1 June 23