Kannada News Trending Siblings Reunion after 22 years netizens reacting emotionally watch viral Video
Viral Video: 22 ವರ್ಷಗಳ ನಂತರ ಒಡಹುಟ್ಟಿದವರ ಪುನರ್ಮಿಲನ
Reunion : ಆಕೆ ಟೇಬಲ್ ಮೇಲೆ ಜ್ಯೂಸ್, ಕಾಫಿ ತಂದಿಟ್ಟು ಎರಡೂ ಕೈಗಳನ್ನು ತೆರೆದು ಅಪ್ಪುಗೆಗೆ ಆಹ್ವಾನಿಸುತ್ತಾಳೆ. ಆದರೆ ಅವ ಅಪರಿಚಿತರಂತೆ ಪ್ರತಿಕ್ರಿಯಿಸುತ್ತಾನೆ. ಆಮೇಲೆ? ಮತ್ತೆ ಮತ್ತೆ ನೋಡಬೇಕೆನ್ನಿಸುವಂತಿದೆ ಈ ವಿಡಿಯೋ.
Siblings: ಏನೇನೋ ಕಾರಣಗಳಿಂದ ಮತ್ತು ಅನಿವಾರ್ಯ ಸನ್ನಿವೇಶಗಳಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಒಡಹುಟ್ಟಿದವರು ಬೇರ್ಪಡುವ ಸಂದರ್ಭ ಒದಗಿರುತ್ತದೆ. ಹೀಗಿರುವಾಗ ಅಕ್ಕ, ಅಣ್ಣ, ತಮ್ಮ, ತಂಗಿ ಎಲ್ಲರೂ ಪರಸ್ಪರರ ಸ್ಮೃತಿಪಟಲದಲ್ಲಿ ಮಾತ್ರ ವಾಸವಾಗಿರುತ್ತಾರೆ. ಆದರೆ ಮುಂದೊಂದು ಸಂದರ್ಭದಲ್ಲಿ ಎದುರುಗೊಳ್ಳಲು ಅವಕಾಶ ಸಿಕ್ಕರೆ ಹೇಗಿರಬೇಡ? ಇತ್ತೀಚೆಗಷ್ಟೇ ಕರ್ತಾರ್ಪುರ್ ಕಾರಿಡಾರ್ನಲ್ಲಿ ವಯೋವೃದ್ಧ ಅಣ್ಣತಂಗಿಯರು 75 ವರ್ಷಗಳ ನಂತರ ಒಂದಾದ ವರದಿಯನ್ನು ಓದಿದ್ದೀರಿ. ಅದಕ್ಕೆ ಸಂಬಂಧಿಸಿದ ವಿಡಿಯೋ ಪೂರ್ವನಿಯೋಜಿತವಾಗಿತ್ತು. ಆದರೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. 22 ವರ್ಷಗಳ ನಂತರ ಈ ಒಡಹುಟ್ಟಿದವರು ಅಚ್ಚರಿ, ಸಂಭ್ರಮ ಮತ್ತು ಭಾವುಕತೆಯಿಂದ ಕರಗಿದ್ದನ್ನು…
ಇದನ್ನೂ ಓದಿ
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
ಸೋದರ ತನ್ನ ಮಗುವಿನೊಂದಿಗೆ ರೆಸ್ಟೋರೆಂಟ್ನಲ್ಲಿ ಕುಳಿತಿದ್ದಾನೆ. ಸೋದರಿ ಕಾಫಿ ಮತ್ತು ಜ್ಯೂಸ್ ತಂದು ಟೇಬಲ್ ಮೇಲಿಟ್ಟು ಎರಡೂ ಕೈಚಾಚಿ ಅಪ್ಪಿಕೊಳ್ಳಲು ಕಾಯುತ್ತಾಳೆ. ಯಾರೂ ಆಗಂತುಕರು ಹೀಗೇಕೆ ಮಾಡುತ್ತಿದ್ದಾರೆ ಎಂದು ಸೋದರ ಅನುಮಾನಿಸುತ್ತಾನೆ. ನಂತರ ಆಕೆ ಗುರುತನ್ನು ಹೇಳಿದಾಗ ಕೈಯಲ್ಲಿದ್ದ ಮಗುವನ್ನು ಬಿಟ್ಟು ಆಕೆಯನ್ನು ಅಪ್ಪಿಕೊಳ್ಳುತ್ತಾನೆ.
ಅಬ್ಬಾ ಯಾರದೋ ಬದುಕಿನ ಅತ್ಯಪೂರ್ವ ಗಳಿಗೆಗಳಿಗೆ ನಾನು ಸಾಕ್ಷಿಯಾದೆ. ಎಲ್ಲ ಸರಿ ಆದರೆ ಆ ಮಗುವನ್ನು ಹಾಗೇಕೆ ಅವ ಕೈಬಿಟ್ಟ. ನನ್ನ ಅಣ್ಣನನ್ನು ಅಪ್ಪಿಕೊಂಡು 8 ವರ್ಷಗಳೇ ಕಳೆದವು, ಮತ್ತೆ ಅವನನ್ನು ಹೀಗೆಯೇ ಅಪ್ಪಕೊಳ್ಳಲು ಕಾಯುತ್ತಿದ್ದೇನೆ. ಈ ದೃಶ್ಯ ತುಂಬಾ ಸುಂದರ ಮತ್ತು ಶಕ್ತಿಯಿಂದ ಕೂಡಿದೆ ಅಂತೆಲ್ಲ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.
ಈ ವಿಡಿಯೋದೊಂದಿಗೆ ಇದರ ಹಿಂದಿರುವ ಕಥೆಯನ್ನೂ ಬರೆದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನೇಕರು ಹೇಳಿದ್ದಾರೆ. ಒಡಹುಟ್ಟಿದವರಿಂದ ದೂರ ಉಳಿಯುವುದನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ, ಏಕೆಂದರೆ ಅವರೆಲ್ಲ ನನ್ನ ಅತ್ಯಂತ ಉತ್ತಮ ಸ್ನೇಹಿತರು ಎಂದು ಒಬ್ಬರು ಹೇಳಿದ್ಧಾರೆ. ನನಗಂತೂ ಅಳುವೇ ಬಂದಿತು ಈ ವಿಡಿಯೋ ನೋಡಿ, ನನಗೂ ಒಬ್ಬ ಅಣ್ಣನಿರಬೇಕಿತ್ತು ಎಂದು ಮತ್ತೊಬ್ಬರು ಹೇಳಿದ್ದಾರೆ.
ಬಂಧಗಳಿಲ್ಲದೆ ನಾವು ಎಂದಾದರೂ ಬದುಕಲು ಸಾಧ್ಯವೆ, ನೀವೇನಂತೀರಿ?