Viral News: ನಡುರಸ್ತೆಯಲ್ಲಿ ಸ್ನಾನಮಾಡಿಕೊಂಡು ರೀಲ್ ಮಾಡಿದ್ದಕ್ಕಾಗಿ ದಂಡ ವಿಧಿಸಿದ ಟ್ರಾಫಿಕ್ ಪೋಲಿಸ್
ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಯುವಕನೊಬ್ಬ ನಡುರಸ್ತೆಯಲ್ಲಿ ಸ್ನಾನ ಮಾಡಿಕೊಂಡು ವೀಡಿಯೊ ಮಾಡಿದ್ದು, ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪೋಲಿಸರು ಆತನಿಗೆ ದಂಡ ವಿಧಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅನುಯಾಯಿಗಳನ್ನು ಹೆಚ್ಚಿಸುವ ಸಲುವಾಗಿ ಹಾಗೂ ಪ್ರಖ್ಯಾತಿ ಗಳಿಸುವ ಸಲುವಾಗಿ ಚಿತ್ರವಿಚಿತ್ರ ಸವಾಲುಗಳ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾ ಬಳಕೆದಾರರು ಮಾಡುತ್ತಾರೆ. ಅದರಲ್ಲೂ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರು ಹಾಗೂ ಅನುಯಾಗಿಗಳು ನೀಡುವ ಸವಾಲನ್ನು ಸ್ವೀಕರಿಸಿ, ಚಹಾಕ್ಕೆ ಉಪ್ಪು ಹಾಕಿ ಕುಡಿಯುವುದು, ಗುರುತು ಪರಿಚಯ ಇಲ್ಲದ ವ್ಯಕ್ತಿಗಳ ಬಳಿ ಹಣ ಕೇಳುವುದುದು ಚಾಕೋಲೇಟ್ ಜೊತೆಗೆ ಮ್ಯಾಗಿ ಬೆರೆಸಿ ತಿನ್ನುವುದು ಈ ರೀತಿಯ ವಿಲಕ್ಷಣ ಚಾಲೆಂಜ್ ಗಳನ್ನು ಮಾಡುತ್ತಿರುತ್ತಾರೆ. ಇಂತಹ ಟಾಸ್ಕ್ ವೀಡಿಯೋಗಳು ಇನ್ಸ್ಟಾಗ್ರಾಮ್, ಯುಟ್ಯೂಬ್ ನಲ್ಲಿ ದಿನನಿತ್ಯ ಹರಿದಾಡುತ್ತಿರುತ್ತವೆ. ಇದೇ ರೀತಿ ಯುವಕನೊಬ್ಬ ತನ್ನ ಸ್ನೇಹಿತರು ನೀಡಿದ ಸವಾಲನ್ನು ಸ್ವೀಕರಿಸಿ ನಡುರಸ್ತೆಯಲ್ಲಿ ತಲೆಗೆ ನೀರು ಸುರಿಯುವ ವೀಡಿಯೋ ಮಾಡಿ ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ಹರಿಬಿಟ್ಟಿದ್ದು, ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪೋಲಿಸರು ಆತನಿಗೆ ದಂಡವಿಧಿಸಿದ್ದಾರೆ.
ಈ ಘಟನೆ ತಮಿಳುನಾಡಿನ ಈರೋಡು ಜಿಲ್ಲೆಯಲ್ಲಿ ನಡೆದಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಸ್ನೇಹಿತರು ನೀಡಿದ ಸವಾಲನ್ನು ಪೂರ್ಣಗೊಳಿಸಬೇಕೆಂಬ ಸಲುವಾಗಿ ಯುವಕ ತನ್ನ ದ್ವಿಚಕ್ರ ವಾಹನದಲ್ಲಿ ಒಂದು ಬಕೆಟ್ ನೀರನ್ನು ತೆಗೆದುಕೊಂಡು ಹೋಗಿ ಹೆಚ್ಚು ಜನಸಂಧಣಿ ಇರುವ ಸ್ಥಳಗಳಲ್ಲಿ ರೋಡ್ ಪಕ್ಕ ಹಾಗೂ ಟ್ರಾಫಿಕ್ ಮಧ್ಯೆ ವಾಹನವನ್ನು ನಿಲ್ಲಿಸಿ ತನ್ನ ತಲೆಗೆ ನೀರು ಸುರಿಯುತ್ತಾನೆ. ಕೊನೆಗೆ ಟ್ರಾಫಿಕ್ ಪೋಲಿಸರು ಆತನನ್ನು ವಶಪಡಿಸಿ, ಆತನಿಗೆ ದಂಡ ವಿಧಿಸುವುದನ್ನು ವೀಡಿಯೋದಲ್ಲಿ ಕಾಣಬಹುದು.
ஈரோடு: இன்ஸ்டாகிராமில் லைக் பெறுவதற்காக போக்குவரத்து நிறைந்த சாலையில் குளித்த இளைஞருக்கு ₹3,500 அபராதம் விதித்தது போக்குவரத்து காவல்துறை#Erode | #Parthiban | #Instagram | #Bath | #ViralVideo pic.twitter.com/BYLCD7R7VE
— PuthiyathalaimuraiTV (@PTTVOnlineNews) May 29, 2023
ಇದನ್ನೂ ಓದಿ: ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ಮೂವರ ಮೇಲೆ ಅಚಾನಕ್ಕಾಗಿ ಬಿತ್ತು ಮರದ ರೆಂಬೆ
ಈರೋಡ್ ಜಿಲ್ಲೆಯ ಪಾರ್ಥಿಬನ್ ಎಂಬ ಯುವಕ ತನ್ನ ಇನ್ಸ್ಟಾಗ್ರಾಮ್ ಸ್ನೇಹಿತರ ಕೋರಿಕೆಯ ಮೇರೆಗೆ ದ್ವಿಚಕ್ರ ವಾಹನದಲ್ಲಿ ಒಂದು ಬಕೆಟ್ ನೀರು ತೆಗೆದುಕೊಂಡು ಹೋಗಿ, ಟ್ರಾಫಿಕ್ ನಲ್ಲಿ ರೋಡ್ ಮಧ್ಯದಲ್ಲಿ ಬೈಕ್ ನಿಲ್ಲಿಸಿ ತಲೆಗೆ ನೀರು ಸುರಿಯುತ್ತಾನೆ. ಇದನ್ನು ಆತನ ಸ್ನೇಹಿತ ರೆಕಾರ್ಡ್ ಮಾಡುತ್ತಾನೆ. ಅಲ್ಲದೆ ಇವರ ಈ ವೀಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಟ್ರಾಫಿಕ್ ಪೋಲಿಸರ ಗಮನಕ್ಕೆ ಬಂದು ರೋಡ್ ಮಧ್ಯೆ ಈ ರೀತಿ ಚೇಷ್ಟೆ ಮಾಡಿದ್ದು ಮಾತ್ರವಲ್ಲದೆ ಹೆಲ್ಮೆಟ್ ಧರಿಸದೆ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪೋಲಿಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ಆತನಿಗೆ 3500 ರೂಪಾಯಿ ದಂಡವನ್ನು ವಿಧಿಸಿದ್ದಾರೆ. ಅಲ್ಲದೆ ಯುವಕರ ಭವಿಷ್ಯವನ್ನು ಮುಂದಿಟ್ಟುಕೊಂಡು ಪೋಲಿಸ್ ಇಲಾಖೆ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಅಡ್ಡಿಪಡಿಸುವ ಇಂತಹ ಚಟುವಟಿಕೆಗಳಲ್ಲಿ ತೊಡಗದಂತೆ ಸೂಚಿಸಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:46 pm, Wed, 31 May 23