Viral: ನನ್ನನ್ನು ಮದುವೆಯಾಗುವೆಯಾ? ಡಬ್ಲಿನ್​ ವಿಮಾನ ನಿಲ್ದಾಣದಲ್ಲಿ ಹೀಗೊಂದು ಪ್ರೇಮನಿವೇದನಾ ಪ್ರಸಂಗ

Love Proposal : ಪ್ರೀತಿ ಎಲ್ಲವನ್ನೂ ಗೆಲ್ಲುತ್ತದೆ, ವಿಮಾನನಿಲ್ದಾಣದಲ್ಲಿರುವ ಅದೆಷ್ಟೋ ಜನರು ಯಾವ ಭಾಷೆಯೋ, ದೇಶವೋ, ಜನಾಂಗವೋ ಅಂತೂ ಎಲ್ಲರೂ ಈ ಕ್ಷಣಗಳನ್ನು ಒಟ್ಟಾಗಿ ಸಂಭ್ರಮಿಸಿದರಲ್ಲವೆ? ನೆಟ್ಟಿಗರು ಈ ವಿಡಿಯೋ ನೋಡಿ ಹರ್ಷಚಿತ್ತ!

Viral: ನನ್ನನ್ನು ಮದುವೆಯಾಗುವೆಯಾ? ಡಬ್ಲಿನ್​ ವಿಮಾನ ನಿಲ್ದಾಣದಲ್ಲಿ ಹೀಗೊಂದು ಪ್ರೇಮನಿವೇದನಾ ಪ್ರಸಂಗ
ಡಬ್ಲಿನ್​ ವಿಮಾನ ನಿಲ್ದಾಣದಲ್ಲಿ ತನ್ನ ಹುಡುಗಿಯಲ್ಲಿ ಪ್ರೇಮನಿವೇದನೆ ಮಾಡಿಕೊಂಡ ಹುಡುಗ
Follow us
TV9 Web
| Updated By: ಶ್ರೀದೇವಿ ಕಳಸದ

Updated on: May 31, 2023 | 2:22 PM

Dublin Airport : ಪ್ರೇಮನಿವೇದನೆ, ಮದುವೆ ಇವು ಬದುಕಿನ ಅತ್ಯಂತ ವಿಶೇಷ ಗಳಿಗೆಗಳು ಅವು ಅವಿಸ್ಮರಣೀಯವಾಗಿರಬೇಕು ಎನ್ನುವ ಹಂಬಲ ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರುತ್ತದೆ. ಮದುವೆ ಸರಿ, ಆದರೆ ಪ್ರೇಮನಿವೇದನೆ? ಇದು ಅತ್ಯಂತ ಖಾಸಗೀ ಎನ್ನುವುದು ತಲತಲಾಂತರದಿಂದ ಗೊತ್ತಿರುವಂಥದ್ದು. ಆದರೆ ಇತ್ತೀಚಿನ ವರ್ಷಗಳಲ್ಲಿ ಅದರಲ್ಲಿಯೂ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಪ್ರೇಮನಿವೇದನೆ (Love Proposal) ಎನ್ನುವುದು ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಿಸುವ ಅತ್ಯಂತ ಹೆಮ್ಮೆಯ ಸಂಗತಿ ಎಂಬಂತಾಗಿದೆ. ಈ ಮೂಲಕ ತಮ್ಮ ಪ್ರೀತಿಯನ್ನು ಜಗತ್ತಿಗೆ ತಿಳಿಯಪಡಿಸಬೇಕು ಎನ್ನುವ ಹಂಬಲ ಜೋಡಿಗಳದ್ದು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ.

ಇದನ್ನೂ ಓದಿ
Image
Viral Video: ಅಜ್ಜಿ, ನಿಮ್ಮ ಶಕ್ತಿಚೈತನ್ಯವನ್ನು ನಮಗೂ ಸ್ವಲ್ಪ ಕಳಿಸಿ ಎನ್ನುತ್ತಿರುವ ನೆಟ್ಟಿಗರು
Image
Viral Video: ಮಳೆಯ ಆಹ್ಲಾದಕ್ಕೆ ಮನಸೋತ ಮರಿಯಾಮೆಗಳ ವಿಡಿಯೋ
Image
Viral Video: ಚೈನೀಸ್​ ಖಾದ್ಯದಲ್ಲಿ ಜೀವಂತ ಕಪ್ಪೆಮರಿ; ಗ್ರಾಹಕರ ಕ್ಷಮೆ ಕೇಳಿದ ರೆಸ್ಟೋರೆಂಟ್
Image
Viral Video: ಆಮೆಯನ್ನು ರಕ್ಷಿಸಲು ಮನುಷ್ಯರ ಬಳಿ ಸಹಾಯ ಕೇಳಿದ ಶಾರ್ಕ್​?!
View this post on Instagram

A post shared by Good News Movement (@goodnews_movement)

ಇದು ಡಬ್ಲಿನ್​ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ. ಗಗನಸಖಿಯಾಗಿರುವ (Flight Attendant) ಸ್ನೇಹಿತೆಯನ್ನು ಅಚ್ಚರಿಯಿದ ಮುದಗೊಳಿಸಲು ಈತ ಹೀಗೆ ವಿಮಾನ ನಿಲ್ಧಾಣದಲ್ಲಿ ಪ್ರೇಮನಿವೇದನೆ ಮಾಡಿಕೊಂಡಿದ್ದಾನೆ. ಆಗ ಆಕೆ  ಸಖೇದಾಶ್ಚರ್ಯಗೊಂಡಿದ್ದಾಳೆ. ಹಿನ್ನೆಲೆಯಲ್ಲಿ ಪಿಯಾನೋವಾದನವೂ ಕೇಳಿಬಂದು ಸನ್ನಿವೇಶವನ್ನು ಶೃಂಗಾರಮಯವಾಗಿಸಿದೆ. ಆತನಕ ಮೂಕಪ್ರೇಕ್ಷಕರಂತೆ ನಿಂತಿದ್ದ ಜನರೆಲ್ಲ ಚಪ್ಪಾಳಗಳಿಂದ ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Viral Video: ಚೈನೀಸ್​ ಖಾದ್ಯದಲ್ಲಿ ಜೀವಂತ ಕಪ್ಪೆಮರಿ; ಗ್ರಾಹಕರ ಕ್ಷಮೆ ಕೇಳಿದ ರೆಸ್ಟೋರೆಂಟ್

ಈ ವಿಡಿಯೋ ಈಗಾಗಲೇ 2.8 ಮಿಲಿಯನ್‌ಗಿಂತಲೂ ಹೆಚ್ಚು ಜನರಿಂದ ನೋಡಲ್ಪಟ್ಟಿದೆ. ನೆಟ್ಟಿಗರು ಪುಳಕಿತಗೊಂಡು ಪ್ರತಿಕ್ರಿಯಿಸುತ್ತಿದ್ದಾರೆ. ಪ್ರೀತಿ ಎಲ್ಲವನ್ನೂ ಗೆಲ್ಲುತ್ತದೆ, ವಿಮಾನನಿಲ್ದಾಣದಲ್ಲಿರುವ ಅದೆಷ್ಟೋ ಜನರು ಯಾವ ಭಾಷೆಯೋ, ದೇಶವೋ, ಜನಾಂಗವೋ ಅಂತೂ ಎಲ್ಲರೂ ಈ ಕ್ಷಣಗಳನ್ನು ಒಟ್ಟಾಗಿ ಸಂಭ್ರಮಿಸಿದರಲ್ಲವೆ? ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಎಗ್​ ಪ್ಲ್ಯಾಂಟ್; ಇದರ ಹೆಸರು ಈಗ ಸಾರ್ಥಕವಾಯಿತು ಎನ್ನುತ್ತಿರುವ ನೆಟ್ಟಿಗರು

ನನ್ನ ಗಂಡ 35 ವರ್ಷಗಳ ಹಿಂದೆ ನಾನು ಕೆನಡಿ ವಿಮಾನ ನಿಲ್ದಾಣದಲ್ಲಿ ಟಿಡಬ್ಲ್ಯೂಎ ಫ್ಲೈಟ್​ ಅಟೆಂಡೆಂಟ್​ ಆಘಿದ್ದಾಗ ನನಗೆ ಪ್ರೇಮ ನಿವೇದನೆ ಮಾಡಿಕೊಂಢಿದ್ದರು. ಆಹಾ ಎಂಥ ಶೃಂಗಾರಮಯವಾಗಿದೆ ಈ ದೃಶ್ಯ, ಜಗತ್ತಿನಲ್ಲಿ ಇಂಥ ದೃಶ್ಯಗಳು ಹೆಚ್ಚಬೇಕು, ಎಲ್ಲೆಡೆ ಪ್ರೀತಿ ಶಾಂತಿ ನೆಲೆಸಬೇಕು. ಮುಖ್ಯಕ್ಷಣಗಳು ಹತ್ತಿರವಾಗುವ ತನಕವೂ ಅಲ್ಲಿ ನೆರೆದ ಜನರೆಲ್ಲ ಎಷ್ಟು ಶಾಂತಿಯಿಂದ ಕಾಯುತ್ತಿದ್ದರು… ಎಂಬಿತ್ಯಾದಿ ಪ್ರತಿಕ್ರಿಯೆಗಳ ಸುರಿಮಳೆಯೇ ಇಲ್ಲಿ ಸುರಿದಿದೆ.

ನೀವೇನಂತೀರಿ ಈ ವಿಡಿಯೋ ನೋಡಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ  

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು