Viral Video: ಅಜ್ಜಿ, ನಿಮ್ಮ ಶಕ್ತಿಚೈತನ್ಯವನ್ನು ನಮಗೂ ಸ್ವಲ್ಪ ಕಳಿಸಿ ಎನ್ನುತ್ತಿರುವ ನೆಟ್ಟಿಗರು

Viral Dance : ಈ ಪಾರ್ಟಿಯಲ್ಲಿ ಹೀಗೆ ನರ್ತಿಸಲು ಅಜ್ಜಿ ಅದೆಷ್ಟು ಸಮಯದಿಂದ ಕಾಯುತ್ತಿದ್ದರೋ ಏನೋ. ಈ ವಯಸ್ಸಿನಲ್ಲಿಯೂ ಭರ್ಜರಿಯಾಗಿ ನರ್ತಿಸಿದ್ದಾರೆ ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ಧಾರೆ.

Viral Video: ಅಜ್ಜಿ, ನಿಮ್ಮ ಶಕ್ತಿಚೈತನ್ಯವನ್ನು ನಮಗೂ ಸ್ವಲ್ಪ ಕಳಿಸಿ ಎನ್ನುತ್ತಿರುವ ನೆಟ್ಟಿಗರು
ಪಾರ್ಟಿಯಲ್ಲಿ ಅಜ್ಜಿಯ ನೃತ್ಯ
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 31, 2023 | 12:53 PM

Dance : ಕಟ್ಟಿಹಾಕಿದಾಗಲೇ ಅಲ್ಲವೆ ಕುಣಿಯಬೇಕು ಎನ್ನಿಸುವುದು? ಕೊರೊನಾ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅದೆಷ್ಟೋ ಪ್ರತಿಭೆಗಳು ಬೆಳಕಿಗೆ ಬಂದವು ಮತ್ತು ಬರುತ್ತಲೇ ಇವೆ. ಇದೀಗ ಇಲ್ಲಿ ಮಿಂಚಿನಂತೆ ಸಂಚಲನ ಹೊಮ್ಮಿಸಿದ ಅಜ್ಜಿಯೊಬ್ಬರನ್ನು ನೋಡಿ. ಪಾರ್ಟಿಯೊಂದರಲ್ಲಿ ಇವರು ಆಶಾ ಭೋಸ್ಲೆ ಹಾಡಿರುವ ‘ಪಿಯಾ ತೂ ಅಬ್ ತೋ ಆಜಾ’ಗೆ ಮೈಮರೆತು ನರ್ತಿಸಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Manisha Kharsyntiew (@manishakharsyntiew)

ನೆಟ್ಟಿಗರು ಇವರ ಶಕ್ತಿಗೆ, ಚೈತನ್ಯಕ್ಕೆ ಕಣ್ಣು ಬಾಯಿ ಬಿಟ್ಟು ನೋಡುತ್ತ ಕುಳಿತಿದ್ದಾರೆ. ಈ ವಯಸ್ಸಿನಲ್ಲಿಯೂ ನಿಮ್ಮ ಉತ್ಸಾಹವನ್ನು ಹೇಗೆ ಕಾಪಾಡಿಕೊಂಡಿದ್ದೀರಿ ಎಂದು ಕೇಳುತ್ತಿದ್ದಾರೆ. ಈ ವಿಡಿಯೋ ಅನ್ನು ಮನೀಷಾ ಖಾರ್ಸಿಂಟಿವ್ ಎನ್ನುವವರು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ತಾಯಂದಿರ ದಿನದ ಶುಭಾಶಯಗಳು ಅಮ್ಮಾ. ಮಮ್ಮಿ ರಾಕ್​ ಮೀ ಶಾಕ್​ ಎಂಬ ಒಕ್ಕಣೆ ಇದಕ್ಕಿದೆ.

ಇದನ್ನೂ ಓದಿ : Viral Video: ಚೈನೀಸ್​ ಖಾದ್ಯದಲ್ಲಿ ಜೀವಂತ ಕಪ್ಪೆಮರಿ; ಗ್ರಾಹಕರ ಕ್ಷಮೆ ಕೇಳಿದ ರೆಸ್ಟೋರೆಂಟ್

ನಾನಂತೂ ಮೂಕವಿಸ್ಮಿತನಾಗಿದ್ದೇನೆ. ಈ ಅಜ್ಜಿ ಯಾರೇ ಇರಲಿ ಇಷ್ಟೊಂದು ಅದ್ಭುತವಾಗಿ ನರ್ತಿಸುತ್ತಾರಲ್ಲ ಅವರ ಕೌಶಲಕ್ಕೆ ಅಭಿನಂದನೆ. ಈಕೆ ಬಹುಶಃ ನೃತ್ಯಗಾತಿಯೇ ಆಗಿದ್ದಾರೆ. ಚಿಕ್ಕಂದಿನಿಂದಲೂ ಪ್ರದರ್ಶನ ನೀಡಿದ ಅನುಭವವಿದೆ. ಬಹುಶಃ ಈಕೆ ಈ ಸಮಯಕ್ಕಾಗಿ ಅದೆಷ್ಟು ದಿನಗಳಿಂದ ಕಾಯುತ್ತಿದ್ದೇರೇನೋ. ಮನಸ್ಸನ್ನು ಈ ವಿಡಿಯೋ ಅರಳಿಸಿದೆ ಅಂತೆಲ್ಲ ನೆಟ್ಟಿಗರು ಮನದುಂಬಿ ಪ್ರತಿಕ್ರಿಯಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:48 pm, Wed, 31 May 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ