Viral Video: ‘ಶ್ರವಣದೋಷವುಳ್ಳ ನನ್ನ ಮಗು ಮೊದಲ ಸಲ ನನ್ನ ಧ್ವನಿ ಕೇಳಿದಾಗ’

Deaf : ಮಗುವಿಗೆ ಶ್ರವಣಸಾಧನವನ್ನು ಅಳವಡಿಸಲಾಗಿದೆ. ಧ್ವನಿಯನ್ನು ಕೇಳುವ ಮೊದಲಿನ ಮುಖ, ತದನಂತರ ಅದು ಅರಳುತ್ತಾ ಹೋದ ಅಪೂರ್ವ ಕ್ಷಣಗಳನ್ನು ಇಲ್ಲಿ ಗಮನಿಸಿ

Viral Video: 'ಶ್ರವಣದೋಷವುಳ್ಳ ನನ್ನ ಮಗು ಮೊದಲ ಸಲ ನನ್ನ ಧ್ವನಿ ಕೇಳಿದಾಗ’
ಮೊದಲ ಸಲ ಅಮ್ಮನ ಧ್ವನಿ ಕೇಳಿದಾಗ
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 30, 2023 | 4:45 PM

Parenting : ಮಗುವೆಂಬ ಜೀವ ಒಡಲಿನೊಳಗೆ ಮೂಡುತ್ತಿದ್ದಂತೆ ಸಾಲುಸಾಲು ವೈದ್ಯಕೀಯ ಪರೀಕ್ಷೆಗಳು (Medical Examinations) ಶುರುವಾಗುತ್ತವೆ. ಗಂಡೋ ಹೆಣ್ಣೋ ಹುಟ್ಟುವ ಮಗು ಸೂಸೂತ್ರವಾಗಿ ಹುಟ್ಟಿದರೆ ಸಾಕು; ಒಂಬತ್ತು ತಿಂಗಳುಗಳ ಕಾಲ ಹೊತ್ತು ಹೆರುವ ಅಮ್ಮನೆಂಬ ಜೀವಕ್ಕೆ ಮತ್ತು ಅದನ್ನು ಪೋಷಿಸುವ ಹೊಣೆ ಹೊತ್ತ ಅಪ್ಪನೆಂಬ ಜೀವಕ್ಕೆ ಇನ್ನೇನು ಬೇಕು? ಆದರೂ ಕೆಲವೊಮ್ಮೆ ಅದೃಷ್ಟ ಕೈಕೊಡುತ್ತದೆ. ಆದರೇನಂತೆ ಇಂದಿನ ವೈದ್ಯಕೀಯ ಮತ್ತು ತಂತ್ರಜ್ಞಾನ ಸಾಕಷ್ಟು ಮಟ್ಟಿಗೆ ಪರ್ಯಾಯ ಪರಿಹಾರ ಕಂಡುಕೊಳ್ಳಲು ಸಹಾಯವನ್ನಂತೂ ಮಾಡುತ್ತಿದೆ. ಈ ಕೆಳಗಿನ ವಿಡಿಯೋ ಗಮನಿಸಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಶ್ರವಣದೋಷವುಳ್ಳ (Dumb and Deaf) ನನ್ನ ಮಗು ನನ್ನ ಧ್ವನಿಯನ್ನು  ಮೊದಲ ಸಲ ಕೇಳಿದಾಗ; ಎಂಬ ಒಕ್ಕಣೆಯೊಂದಿಗೆ ಈ ವಿಡಿಯೋ ನಿಮ್ಮ ಮನಸ್ಸನ್ನು ಅರಳಿಸುತ್ತದೆ. ವೈದ್ಯರು ಮಗುವಿನ ಕಿವಿಗೆ ಶ್ರವಣಸಾಧನವನ್ನು ತೊಡಿಸಿದ್ಧಾರೆ. ಈ ಮೂಲಕ ಮೊದಲ ಸಲ ಅಮ್ಮನ ಧ್ವನಿಯನ್ನು ಅದು ಕೇಳಿದೆ. ಧ್ವನಿಯನ್ನು ಕೇಳುವ ಮೊದಲು ಅದರ ಮುಖಭಾವ ಹೇಗಿತ್ತು, ತದನಂತರ ಹೇಗೆ ಅರಳುತ್ತಾ ಹೋಯಿತು ಎನ್ನುವುದನ್ನು ಗಮನಿಸಿದಿರಾ?

ಇದನ್ನೂ ಓದಿ : Viral Video: ಆಮೆಯನ್ನು ರಕ್ಷಿಸಲು ಮನುಷ್ಯರ ಬಳಿ ಸಹಾಯ ಕೇಳಿದ ಶಾರ್ಕ್​?! 

ಎಂಥ ಮುದ್ದಾದ ಮಗುವನ್ನು ಹೆತ್ತಿದ್ದೀರಿ ನಿಮಗೆ ಅಭಿನಂದನೆ. ಇದು ಬಹಳ ಜಾಣ ಮಗು ಇದಕ್ಕೆ ಒಳ್ಳೆಯದಾಗಲಿ. ನಿಮ್ಮಿಬ್ಬರಿಗೂ ಮತ್ತು ಕುಟುಂಬಕ್ಕೂ ಶುಭವಾಗಲಿ. ಈತನಕ ನೋಡಿದ ವಿಡಿಯೋಗಳಲ್ಲಿ ಇದು ಅತ್ಯಂತ ಸುಂದರವಾದ ವಿಡಿಯೋ. ಈ ಮಗುವನ್ನು ಈಗಲೇ ಎತ್ತಿಕೊಂಡು ಮುದ್ದಿಸಬೇಕೆನ್ನಿಸುತ್ತಿದೆ… ಹೀಗೆ ಪ್ರತಿಕ್ರಿಯೆಗಳ ಸುರಿಮಳೆಯೇ ಈ ವಿಡಿಯೋಗಿದೆ. ಈಗಾಗಲೇ ಈ ವಿಡಿಯೋ ಅನ್ನು ಸುಮಾರು 35,000 ಜನರು ಇಷ್ಟಪಟ್ಟಿದ್ಧಾರೆ.

ಇದನ್ನೂ ಓದಿ : Viral Video: ಎಗ್​ ಪ್ಲ್ಯಾಂಟ್; ಇದರ ಹೆಸರು ಈಗ ಸಾರ್ಥಕವಾಯಿತು ಎನ್ನುತ್ತಿರುವ ನೆಟ್ಟಿಗರು

ನಮ್ಮೆಲ್ಲರ ಬದುಕು ಯಾವಾಗಲೂ ಹೂ ಎತ್ತಿದಂತೆಯೇ ಇರುವುದಿಲ್ಲ. ಏರು ಇಳುವುಗಳಿಂದ ಸಾಗುವಂಥದ್ದು. ಹಾಗಾಗಿ ನಮ್ಮ ಬದುಕಿನ ವಿವಿಧ ಹಂತಗಳಲ್ಲಿ ಕಷ್ಟಗಳಂತೆ ಸುಖದ ಪುಳಕಗಳನ್ನೂ ಅನುಭವಿಸುತ್ತೇವೆ. ನಿಮ್ಮ ಬದುಕಿನಲ್ಲಿಯೂ ಇಂಥ ಅಪೂರ್ವ ಗಳಿಗೆಗಳು ಸಂಭವಿಸಿರುತ್ತವೆ. ಆ ಬಗ್ಗೆ ತಿಳಿಸಬಹುದೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:31 pm, Tue, 30 May 23

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?