Viral Video: ಎಗ್​ ಪ್ಲ್ಯಾಂಟ್; ಇದರ ಹೆಸರು ಈಗ ಸಾರ್ಥಕವಾಯಿತು ಎನ್ನುತ್ತಿರುವ ನೆಟ್ಟಿಗರು

Eggplant : ಮೂರು ವರ್ಷಗಳ ಹಿಂದೆ ದೆಹಲಿಯ ಐಐಟಿ ಸಂಶೋಧಿಸಿದ್ದ ವೇಗನ್​ ಎಗ್ ಪ್ಲ್ಯಾಂಟ್​ ಇದೇನಾ? ಹಾಗಿದ್ದರೆ ನಿಜಾಂಶ ಏನು?

Viral Video: ಎಗ್​ ಪ್ಲ್ಯಾಂಟ್; ಇದರ ಹೆಸರು ಈಗ ಸಾರ್ಥಕವಾಯಿತು ಎನ್ನುತ್ತಿರುವ ನೆಟ್ಟಿಗರು
ಗಿಡದಲ್ಲಿ ಮೊಟ್ಟೆ ಬಿಟ್ಟಿದೆ!?
Follow us
ಶ್ರೀದೇವಿ ಕಳಸದ
|

Updated on:May 30, 2023 | 10:46 AM

IIT : ಮೂರು ವರ್ಷಗಳ ಹಿಂದೆ ದೆಹಲಿಯ ಐಐಟಿ (IIT Delhi) Vegan Egg (ಸಸ್ಯಜನ್ಯ ಮೊಟ್ಟೆ) ಸಂಶೋಧಿಸಿದ್ದು ನಿಮಗೆ ನೆನಪಿರಬಹುದು. ಮೊಟ್ಟೆ ತಿನ್ನಲು ಬಯಸುವ ಸಸ್ಯಾಹಾರಿಗಳಿಗೆ ಇದೊಂದು ವರದಾನ, ಕೋಳಿಮೊಟ್ಟೆಯಲ್ಲಿರುವ ಎಲ್ಲ ಪೋಷಕಾಂಶಗಳೂ ಇದರಲ್ಲಿರುತ್ತವೆ ಮತ್ತು ಕೊಲೆಸ್ಟ್ರಾಲ್​ ರಹಿತವಾಗಿರುತ್ತದೆ ಎಂದು ಸಂಶೋಧನಾ ತಂಡದ ಪ್ರೊ ಕಾವ್ಯ ದಶೋರಾ ಹೇಳಿದ್ದರು. ಇದನ್ನು ಸಂಶೋಧಿಸಿದ ರಾಹುಲ್ ದಿವಾನ್​, ಸಸ್ಯಾಹಾರವು ನಮ್ಮ ದೇಹಕ್ಕೆ ಎಷ್ಟು ಪ್ರಯೋಜನಕಾರಿ ಮತ್ತು ಅತ್ಯವಶ್ಯ ಎಂಬುದನ್ನು ವಿವರಿಸಿದ್ದರು. ಇದನ್ನು ಬೆಳೆದ ರೈತರ ಆದಾಯವೂ ಹೆಚ್ಚಲಿದೆ ಎಂದೂ ಹೇಳಿದ್ದರು. ಹಾಗಿದ್ದರೆ ಈ ವಿಡಿಯೋಗೂ ಮತ್ತು ಐಐಟಿ ಸಂಶೋಧನೆಗೂ ಸಂಬಂಧ ಇದೆಯಾ? ಈ ವಿಡಿಯೋಗಾಗಿ ಕ್ಲಿಕ್ ಮಾಡಿ ನೋಡಿ ಈ ಪ್ರೊಫೈಲಿನಲ್ಲಿ.

ಖಂಡಿತ ಇಲ್ಲ. ಐಐಟಿ ಸಂಶೋಧನಾ ತಂಡದ ವೇಗನ್​ ಎಗ್ ಇದು ಅಲ್ಲವೇ ಅಲ್ಲ. ಹಾಗಾದರೆ ಏನಿದು? ನೆಟ್ಟಿಗರಿಗಂತೂ ಇದರ ಹಿಂದಿನ ತಂತ್ರ ಗೊತ್ತಾಗಿದೆ. ಬಹುಶಃ ನಿಮಗೂ. ಹೌದು, ಕೋಳಿಮೊಟ್ಟೆಯನ್ನು ಬದನೆತೊಟ್ಟಿಗೆ ಅಂಟಿಸಲಾಗಿದೆ. ಈ ಗಿಡದಲ್ಲಿಯೇ ನಿಜವಾಗಲೂ ಮೊಟ್ಟೆ ಬಿಟ್ಟಿದೆಯೇನೋ ಎಂಬಷ್ಟು ಪರ್ಫೆಕ್ಟ್​! ಈ ವಿಡಿಯೋ ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video; ಮೊಸರಿನೊಂದಿಗೆ ಗುಲಾಬ್​ ಜಾಮೂನ್​! ನೆಟ್ಟಿಗರಿಗೆ ಬೈಗಳುಗಳು ಸಾಲುತ್ತಿಲ್ಲ

ಫೆವಿಕಾಲ್​ ಹಾಕಿ ಅಂಟಿಸಿರಬೇಕು ಎಷ್ಟು ಗಟ್ಟಿಯಾಗಿ ನೀಟ್​ ಆಗಿ ಅಂಟಿಸಲಾಗಿದೆ ನೋಡಿ. ಅಬ್ಬಾ! ಎಗ್​ ಪ್ಲ್ಯಾಂಟ್​ ಅಂತ ಹೆಸರಿಟ್ಟಿದ್ದನ್ನು ನೀವು ಈವಿಡಿಯೋ ಮೂಲಕ ಅಕ್ಷರಶಃ, ಚಿತ್ರಶಃ ನಿರೂಪಿಸಿದ್ದೀರಿ. ಓಹೋ ಮಸ್ತ್​ ಇದೆ ಅಂಟು. ವೇಗನ್​ ಎಗ್ ಎಂದರೆ ಇದೇ ಎಂದು ಈಗ ತಿಳಿಯಿತು… ಹೀಗೆ ಪ್ರತಿಕ್ರಿಯೆಗಳು ಸಾಗಿವೆ.

ಇದನ್ನೂ ಓದಿ : Viral Video: ಚುಂಬನವೃತ್ತಾಂತ; ಯುವತಿಯರಿಬ್ಬರ ನಡುವೆ ಬಂಧಿ ಈ ಡಾಲ್ಫಿನ್​, ನೆಟ್ಟಿಗರ ಆಕ್ರೋಶ

ಈತನಕ ಸುಮಾರು 60,000 ಜನರು ಈ ವಿಡಿಯೋ ನೋಡಿದ್ದಾರೆ. ವಿಡಿಯೋ ನೋಡಬೇಕೆಂದೇ ಇಂಥ ಐಡಿಯಾಗಳನ್ನು ಡಿಜಿಟಲ್​ ಕ್ರಿಯೇಟರ್ಸ್ ಮಾಡುತ್ತಿರುತ್ತಾರೆ. ಎಲ್ಲವೂ ಮನರಂಜನೆಗೆ, ತಮಾಷೆಗೆ. ನಿತ್ಯಕೆಲಸದ ಏಕತಾನತೆಯನ್ನು ಮುರಿಯಲು ನೀವು ಸ್ಕ್ರೋಲ್ ಮಾಡುತ್ತ ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ಳುತ್ತೀರಿ. ನೀವೂ ಬೆಳೆಯುತ್ತೀರಾ ಈ ಎಗ್ ಪ್ಲ್ಯಾಂಟ್? ಅಥವಾ ಇನ್ನೇನಾದರೂ ಹೊಸ ಐಡಿಯಾ ಹೊಮ್ಮುತ್ತಿವೆಯೋ? ಏನೇ ಮಾಡಿದರೂ ಎಲ್ಲ ರೀಲಿಗಾಗಿ ಎಂಬಂಥ ಉತ್ತುಂಗದ ಸ್ಥಿತಿ ಸದ್ಯದ ಸಾಮಾಜಿಕ ಜಾಲತಾಣಗಳದ್ದು. ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ  

Published On - 10:29 am, Tue, 30 May 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ