Viral Video: ಕೊಲ್ಕತ್ತೆಯ ಈ ರಸಗುಲ್ಲಾ ರೋಲ್​! ವ್ಲಾಗರ್​ ಕೊಟ್ಟ ಸ್ಪಷ್ಟನೆ ಇಲ್ಲಿದೆ

Food Vlog : ಈ ಫುಡ್​ ವ್ಲಾಗ್​ ಅನ್​ಫಾಲೋ ಮಾಡುವ, ಈ ಭೂಮಿಯಿಂದಲೇ ಮಾಯವಾಗುವ ಸಮಯ ಬಂದಿದೆ. ಇದನ್ನು ಸವಿಯುವುದಕ್ಕಿಂತ ಗಟ್ಟಿಯಾಗಿ ಹಿಡಿದುಕೊಳ್ಳುವುದರ ಕಡೆಗೇ ಗಮನ ಕೊಡಬೇಕಿದೆ ಎಂಬ ವ್ಯಂಗ್ಯ ಕೇಳಿಬರುತ್ತಿದೆ.

Viral Video: ಕೊಲ್ಕತ್ತೆಯ ಈ ರಸಗುಲ್ಲಾ ರೋಲ್​! ವ್ಲಾಗರ್​ ಕೊಟ್ಟ ಸ್ಪಷ್ಟನೆ ಇಲ್ಲಿದೆ
ಕೊಲ್ಕತ್ತೆಯ ಬೀದಿಯಲ್ಲಿ ತಯಾರಾಗುತ್ತಿರುವ ರೊಶೊಗೊಲ್ಲಾ ರೋಲ್​
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 29, 2023 | 3:35 PM

Rasgulla : ಈ ಫುಡ್​ ವ್ಲಾಗರ್​ಗಳ (Food Vloggers) ಹಾವಳಿಯಿಂದ ನಮ್ಮ ದೇಶದ ರುಚಿರುಚಿ ಖಾದ್ಯಗಳೆಲ್ಲ ಹಳ್ಳ ಹಿಡಿಯುತ್ತಿವೆ. ಚಿತ್ರವಿಚಿತ್ರ ಕಾಂಬಿನೇಷನ್​ನಲ್ಲಿ ರುಚಿಕರ ಮತ್ತು ಸಾಂಪ್ರದಾಯಿಕ ಖಾದ್ಯಗಳ ಕೊಲೆಯಾಗುತ್ತಿದೆ. ರಸ್ತೆಬದಿ ವ್ಯಾಪಾರಸ್ಥರು ಹೋಟೆಲ್ ಮಾಲೀಕರು ಪ್ರಚಾರದ ಹುಚ್ಚಿಗೆ ಅನಾರೋಗ್ಯಕರ ಆಹಾರ ಸಂಸ್ಕೃತಿ ಸೃಷ್ಟಿಗೆ ಕಾರಣರಾಗುತ್ತಿದ್ದಾರೆ. ಹೀಗೆಂದು ನೆಟ್ಟಿಗರು ಕೋಪೋದ್ರಿಕ್ತರಾಗಿ ಪ್ರತಿಕ್ರಿಯಿಸುತ್ತಿರುವುದು ಹೊಸದೇನಲ್ಲ. ಆದರೂ ಇಂಥ ವಿಚಿತ್ರ ಪಾಕ ಪ್ರಯೋಗಗಳು ಮಾತ್ರ ನಿಲ್ಲುತ್ತಲೇ ಇಲ್ಲ. ಮೊಸರಿನೊಂದಿಗೆ ಜಾಮೂನು ತಿನ್ನಿ ಇದು ಪ್ರಸಿದ್ಧ ಖಾದ್ಯ ಎಂಬ ವಿಡಿಯೋ ನೋಡಿದಿರಲ್ಲವೇ? ಈಗ ರಸಗುಲ್ಲಾ ರೋಲ್​ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Kolkata’s illusion | Kolkata (@kolkatas.illusion)

ಕೊಲ್ಕೊತ್ತಾ ಎಂದ ತಕ್ಷಣ ಬೆಲ್ಲದ ಪಾಕದಲ್ಲಿ ತೇಲಾಡುವ ರೊಶೊಗೊಲ್ಲಾ ನೆನಪಾಗುತ್ತದೆ ಅಲ್ಲವೆ? ಉತ್ತರದ ರೊಶೊಗುಲ್ಲಾ ದಕ್ಷಿಣದ ರಸಗುಲ್ಲಾ. ದಕ್ಷಿಣದಲ್ಲಿ ಸಕ್ಕರೆ ಪಾಕದಲ್ಲಿ ರಸಗುಲ್ಲಾ ತೇಲಿದರೆ ಉತ್ತರದಲ್ಲಿ ಬೆಲ್ಲದ ಪಾಕದಲ್ಲಿ. ಆದರೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ಇದು ರೊಶೊಗೊಲ್ಲಾ ರೋಲ್​ ಅಂತೆ. ಕೊಲ್ಕತ್ತೆಯ ಬೀದಿ ಬದಿ ಅಂಗಡಿಯಲ್ಲಿ ಇದು ತಯಾರಾಗುತ್ತಿದೆ.

ಇದನ್ನೂ ಓದಿ : Viral Video: ಬ್ಯಾಲೆನ್ಸಡ್​ ಡಯೆಟ್ ಎಂದರೆ ಇದೇ ನೋಡಿ! ಇನ್ನು ನಿಶ್ಚಿಂತೆಯಿಂದಿದ್ದುಬಿಡಿ

ಇದರ ರೆಸಿಪಿಯನ್ನು ತಿಳಿದ ಕೂಡಲೆ ನೆಟ್ಟಿಗರು ಇದನ್ನು ವಿರೋಧಿಸಿ ಪ್ರತಿಕ್ರಿಯಿಸಲು ಶುರು ಮಾಡಿದ್ದಾರೆ. ಈ ಫುಡ್​ ವ್ಲಾಗ್​ ಅನ್ನು ಅನ್​ಫಾಲೋ ಮಾಡುವ ಮತ್ತು ಈ ಭೂಮಿಯಿಂದಲೇ ಮಾಯವಾಗುವ ಸಮಯ ಬಂದಿದೆ. ಈ ಖಾದ್ಯವನ್ನು ಸವಿಯುವುದಕ್ಕಿಂತ ಬಿಗಿಯಾಗಿ ಹಿಡಿದುಕೊಳ್ಳುವುದರ ಕಡೆಗೇ ಗಮನ ಕೊಡಬೇಕಿದೆ ಎಂದು ಜನ ವ್ಯಂಗ್ಯವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನು ಓದಿ : Viral: ತನ್ನ ಮೊಬೈಲ್​ ​ಹುಡುಕಲು 21 ಲಕ್ಷ ಲೀಟರ್​ ನೀರುಪೋಲು ಮಾಡಿದ ಛತ್ತೀಸ್​ಗಢ ಅಧಿಕಾರಿ ಅಮಾನತು

ಆದರೆ ಈ ವಿಡಿಯೋ ಮಾಡಿದವರು, ನಾನು ಈ ರೋಲ್ ವಿಡಿಯೋ ಮಾಡುವ ಮೊದಲು ಸವಿದು ನೋಡಿದ್ದೇನೆ. ಪನೀರ್​ ರೋಲ್​ನಂಥ ರುಚಿಯನ್ನೇ ಇದು ಹೊಂದಿದೆ, ಏಕೆಂದರೆ ಸಿಹಿರಹಿತ ಅಂದರೆ ಚಾನಾರ್​ ಕೋಫ್ತಾ ಅನ್ನು ರೋಲ್​ನಲ್ಲಿ ಸುತ್ತಿಕೊಡಲಾಗುತ್ತದೆ. ಕೋಫ್ತಾಗಳು ರಸಗುಲ್ಲಾದಂತೆ ಕಾಣುವುದರಿಂದ ಇದಕ್ಕೆ ರಸಗುಲ್ಲಾ ರೋಲ್​ ಎಂದು ಹೆಸರಿಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಕೊಲ್ಕತ್ತೆಗೆ ನೀವು ಹೋದರೆ ಈ ಖಾದ್ಯವನ್ನು ಸವಿಯಲು ಇಷ್ಟಪಡುವಿರಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:29 pm, Mon, 29 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ