Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚುಂಬನವೃತ್ತಾಂತ; ಯುವತಿಯರಿಬ್ಬರ ನಡುವೆ ಬಂಧಿ ಈ ಡಾಲ್ಫಿನ್​, ನೆಟ್ಟಿಗರ ಆಕ್ರೋಶ

Animal Lovers : ಇದು ಪ್ರಾಣಿಹಿಂಸೆ. ಪ್ರತೀ ಜೀವಿಗೂ ಸ್ವಾತಂತ್ರ್ಯ ಬೇಕು. ನಿಮ್ಮ ಸ್ವಾರ್ಥಕ್ಕಾಗಿ ಹೀಗೆ ಇವುಗಳನ್ನು ಪಳಗಿಸಬೇಡಿ. ನೀವು ಅವುಗಳನ್ನು ಪ್ರೀತಿಸುತ್ತೀರಿ ಎಂದಾದಲ್ಲಿ ಅವುಗಳ ಇಚ್ಛೆಯಂತೆ ಇರಲು ಬಿಡಿ ಎನ್ನುತ್ತಿದ್ದಾರೆ ನೆಟ್ಟಿಗರು.

Viral Video: ಚುಂಬನವೃತ್ತಾಂತ; ಯುವತಿಯರಿಬ್ಬರ ನಡುವೆ ಬಂಧಿ ಈ ಡಾಲ್ಫಿನ್​, ನೆಟ್ಟಿಗರ ಆಕ್ರೋಶ
ಸರದಿಯಂತೆ ಯುವತಿಯರಿಗೆ ಮುತ್ತು ಕೊಡುತ್ತಿರುವ ಡಾಲ್ಫಿನ್
Follow us
ಶ್ರೀದೇವಿ ಕಳಸದ
|

Updated on:May 29, 2023 | 10:54 AM

Dolphin: ಮೋಜಿಗಾಗಿ, ಹಣಕ್ಕಾಗಿ ಹೀಗೆ ಪ್ರಾಣಿಗಳನ್ನು ಯಾಕೆ ಪಳಗಿಸುತ್ತೀರಿ? ಈ ಮೂಲಕ ಯಾರನ್ನು ಮೆಚ್ಚಿಸಲು ಬಯಸುತ್ತಿದ್ದೀರಿ? ಇದು ಮೂರ್ಖರ ಲಕ್ಷಣ. ಇಂಥ ದುರಾಸೆಗಳಿಂದ ಹೊರಬನ್ನಿ. ಪ್ರಾಣಿಗಳಿಗೆ ಅವುಗಳದೇ ಆದ ಜೀವನಚಕ್ರವಿದೆ. ಜೀವವೈವಿಧ್ಯವು (Biodiversity) ಪರಸ್ಪರ ಅವಲಂಬಿತವಾಗಿದೆ. ಹೀಗೆ ತೊಂದರೆ ಕೊಟ್ಟು ಪ್ರಕೃತಿಯನ್ನು ಅಸಮತೋಲನಗೊಳಿಸದಿರಿ ಎಂದು ನೆಟ್ಟಿಗರು ಈ ವಿಡಿಯೋ ಪೋಸ್ಟ್​ ಮಾಡಿದವರಿಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪ್ರತೀ ಜೀವಿಗೂ ಸ್ವಾತಂತ್ರ್ಯ ಬೇಕು. ನಿಮ್ಮ ಸ್ವಾರ್ಥಕ್ಕಾಗಿ ಹೀಗೆ ಇವುಗಳನ್ನು ಬಂಧಿಸಬೇಡಿ. ನೀವು ಅವುಗಳನ್ನು ಪ್ರೀತಿಸುತ್ತೀರಿ ಎಂದಾದಲ್ಲಿ ಅವುಗಳನ್ನು ಅವುಗಳಷ್ಟಕ್ಕೇ ಇರಲು ಬಿಡಿ. ದೊಡ್ಡ ಸಮುದ್ರದಲ್ಲಿ ಸಹಜೀವಿಗಳೊಂದಿಗೆ ಅವು ವಾಸಿಸಬೇಕು. ಪ್ರದರ್ಶನದ ಸಲುವಾಗಿ ಹೀಗೆ ಗುಂಡಿಯಲ್ಲಿ ಅವುಗಳನ್ನು ಕೂಡಿಹಾಕಬೇಡಿ. ಪ್ರದರ್ಶನ ನೀಡುವ ನೆಪದಲ್ಲಿ ನೀವು ಇವುಗಳಿಗೆ ಚಿತ್ರಹಿಂಸೆ ನೀಡುತ್ತಿದ್ದೀರಿ ಹೀಗೆ ಜನರು ಒಂದೇ ಉಸಿರಿನಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ : Viral:ಸರಳ ಸಜ್ಜನಿಕೆಯ ಸುಧಾ ಮೂರ್ತಿ ಟ್ರೋಲ್ ಆಗುತ್ತಿರುವುದೇಕೆ? ಆ್ಯನ್ಸರ್ ಈಸ್ ಸೋ ಸಿಂಪಲ್!

ಕ್ಯೂಟ್​! ತುಂಬಾ ಮುದ್ದಾಗಿದೆ ಎಂದು ಹೇಳುವ ಅನೇಕರನ್ನು ಪ್ರಾಣಿದಯಾಪರರು ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ಬರೀ ವಿಡಿಯೋ ನೋಡಿ ಕ್ಯೂಟ್ ಎಂದರೆ ಮುಗಿಯದು, ವಾಸ್ತವದಲ್ಲಿ ಯೋಚಿಸಿ ಭ್ರಮಾಲೋಕದಲ್ಲಿ ವಿಹರಿಸಬೇಡಿ ಅಂತೆಲ್ಲ. ಇದು ಪ್ರಾಣಿ ಶೋಷಣೆ, ಪ್ರಾಣಿ ಹಿಂಸೆ ಅಂತೆಲ್ಲ ಆಕ್ರೋಶಗೊಂಡಿದ್ಧಾರೆ. ಇನ್ನೂ ಕೆಲವರು ಇದು ಗ್ರಾಫಿಕ್ ತಂತ್ರ ಎನ್ನುತ್ತಿದ್ದಾರೆ.

ಪ್ರೀತಿ ಎನ್ನವುದು ಸಹಜತನದಿಂದ ಕೂಡಿರುವಂಥದ್ದು. ಆದರೆ ನಾವು ವಿನಾಕಾರಣ ಯಾಕೆ ಇಂಥ ಸಾಹಸಕ್ಕಿಳಿಯುತ್ತಿದ್ಧೇವೆ?

ಒಟ್ಟಾರೆ ಈ ವಿಡಿಯೋದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:47 am, Mon, 29 May 23

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್