AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ‘ಸರಳ’ ಸಜ್ಜನಿಕೆಯ ಸುಧಾ ಮೂರ್ತಿ ಟ್ರೋಲ್ ಆಗುತ್ತಿರುವುದೇಕೆ? ಆ್ಯನ್ಸರ್ ಈಸ್ ಸೋ ಸಿಂಪಲ್!

Sudha Murthy : 'ಸುಧಾ ಮೂರ್ತಿ ಎಷ್ಟು ವಿನಯವಂತೆಯೆಂದರೆ ಬ್ಯಾಂಕಿನಲ್ಲಿ ತನಗೆ ಸರಳ ಬಡ್ಡಿ ಮಾತ್ರ ಕೊಟ್ಟರೆ ಸಾಕು ಎನ್ನುತ್ತಾರೆ', 'ಐಹಿಕ ಸಂಪತ್ತಿನ ಬಗ್ಗೆ ಎಷ್ಟು ಅಸಡ್ಡೆಯಿದೆಯೆಂದರೆ ಮಗಳನ್ನು ಒಬ್ಬ ಋಷಿಗೆ (ರಿಶಿ) ಕೊಟ್ಟು ಮದುವೆ ಮಾಡಿದ್ದಾರೆ'…

Viral: 'ಸರಳ' ಸಜ್ಜನಿಕೆಯ ಸುಧಾ ಮೂರ್ತಿ ಟ್ರೋಲ್ ಆಗುತ್ತಿರುವುದೇಕೆ? ಆ್ಯನ್ಸರ್ ಈಸ್ ಸೋ ಸಿಂಪಲ್!
ಸುಧಾ ಮೂರ್ತಿ
Follow us
ಶ್ರೀದೇವಿ ಕಳಸದ
|

Updated on:May 26, 2023 | 3:29 PM

Viral News : ಸಾಮಾಜಿಕ ಜಾಲತಾಣಗಳಲ್ಲಿ Humblebrag ಎನ್ನುವ ಪದ ಬಳಕೆಯಲ್ಲಿದೆ. ಹುಸಿನಮ್ರತೆ ಎಂಬರ್ಥ ಕೊಡುವ ಈ ಪದವನ್ನು ಹುಟ್ಟುಹಾಕಿದವರು ಹ್ಯಾರಿಸ್ ವಿಟೆಲ್ಸ್. ಮೇಲ್ನೋಟಕ್ಕೆ ವಿನಮ್ರತೆ ಸೂಚಿಸುವ ಅಥವಾ ತಮ್ಮನ್ನೇ ಅವಹೇಳನ ಮಾಡಿಕೊಳ್ಳುತ್ತಿರುವಂತಿರುವ ಬಹಳಷ್ಟು ಟ್ವಿಟರ್‌ ಸ್ಟೇಟಸ್‌ಗಳು, ಇನ್​ಸ್ಟಾಗ್ರಾಂ ಪೋಸ್ಟ್‌ಗಳು, ಮಾಧ್ಯಮದಲ್ಲಿನ ಹೇಳಿಕೆಗಳು ವಾಸ್ತವದಲ್ಲಿ ಎಲ್ಲರ ಗಮನವನ್ನು ತಮ್ಮತ್ತ ಸೆಳೆಯುವ ಹುನ್ನಾರವುಳ್ಳವಾಗಿರುತ್ತವೆ. ಸರಳತೆ ಅಥವಾ ವಿನಯ ಕಣ್ಣಿಗೆ ಹೊಡೆಯುವಷ್ಟು ಎದ್ದು ಕಂಡಾಗ ಕಿರಿಕಿರಿಯಾಗುವುದು ಸಹಜವೇ ತಾನೇ?

ಇನ್ಫೋಸಿಸ್​ ಫೌಂಡೇಶನ್‌ನ (Infosys Foundation) ಮುಖ್ಯಸ್ಥೆಯೂ, ಕೊಡುಗೈ ದಾನಿಯೂ, ಕನ್ನಡ ಮತ್ತು ಇಂಗ್ಲಿಷ್​ನಲ್ಲಿ ಮಕ್ಕಳ ಜನಪ್ರಿಯ ಪುಸ್ತಕಗಳ ಬರಹಗಾರ್ತಿಯೂ ಆದ ಸುಧಾ ಮೂರ್ತಿ (Sudha Murthy) ನಾಡಿನೆಲ್ಲೆಡೆ ಹೆಸರುವಾಸಿ. ಅವರು ಮತ್ತು ಅವರ ಪತಿ ಇನ್ಫೋಸಿಸ್​ ಸಂಸ್ಥಾಪಕ ನಾರಾಯಣಮೂರ್ತಿ (Narayan Murthy) ಸರಳ ಜೀವನಶೈಲಿಗೆ, ಸಜ್ಜನಿಕೆಗೆ ಮಾದರಿ ಎಂದೇ ಎಲ್ಲರ ನಂಬಿಕೆ.

ಇಂತಹ ಸುಧಾ ಮೂರ್ತಿಯವರ ‘ಸರಳತೆ’ಯನ್ನು ಕಳೆದ ಕೆಲವು ದಿನಗಳಿಂದ ನೆಟ್ಟಿಗರು ಪಟ್ಟುಬಿಡದೇ ನಿಷ್ಕಾರುಣ್ಯದಿಂದ ಟ್ರೋಲ್ ಮಾಡುತ್ತಿದ್ದಾರೆ. ‘ನೂರಾರು ಕೋಟಿಯ ಒಡತಿಯಾಗಿದ್ದರೂ ಸುಧಾ ಮೂರ್ತಿ ಇನ್ನೂ ಆಮ್ಲಜನಕವನ್ನೇ ಉಸಿರಾಡುತ್ತಾರೆ,’ ‘ಸುಧಾ ಮೂರ್ತಿ ಬಂಬಲ್ ಸಂಸ್ಥೆಯ ಸಿಇಓ ಆಗಿದ್ದರೆ ಅದರ ಹೆಸರನ್ನು ಕೂಡಲೇ ಹಂಬಲ್ ಎಂದು ಬದಲಿಸುತ್ತಿದ್ದರು’, ‘ಸುಧಾ ಮೂರ್ತಿ ಎಷ್ಟು ವಿನಯವಂತೆಯೆಂದರೆ ಬ್ಯಾಂಕಿನಲ್ಲಿ ತನಗೆ ಸರಳ ಬಡ್ಡಿ ಮಾತ್ರ ಕೊಟ್ಟರೆ ಸಾಕು ಎನ್ನುತ್ತಾರೆ’, ‘ಅವರಿಗೆ ಐಹಿಕ ಸಂಪತ್ತಿನ ಬಗ್ಗೆ ಎಷ್ಟು ಅಸಡ್ಡೆಯಿದೆಯೆಂದರೆ ತಮ್ಮ ಮಗಳನ್ನು ಒಬ್ಬ ಋಷಿಗೆ (ರಿಶಿ) ಕೊಟ್ಟು ಮದುವೆ ಮಾಡಿದ್ದಾರೆ’… ಹೀಗೆ ಚಾಟೂಕ್ತಿಗಳ, ಚಮತ್ಕಾರಗಳ, ಸೃಜನಶೀಲತೆಯ ಮಹಾಪೂರದಲ್ಲಿ ಅವರು ಕೊಚ್ಚಿ ಹೋಗುತ್ತಿದ್ದಾರೆ.

ಇದನ್ನೂ ಓದಿ : Viral Video: ಬಿಹಾರಿ ಮಗುವಿಗೆ ಬಂದಿದ್ದು ಕನ್ನಡಜ್ವರ! ಸೃಷ್ಟಿ ಡಾಕ್ಟರ್​ ಕೊಟ್ಟ ಔಷಧಿ ಏನು?

ಬಹುತೇಕ ಇದೆಲ್ಲ ಶುರುವಾಗಿದ್ದು ಅವರು ಕಪಿಲ್ ಶರ್ಮಾ ಷೋದಲ್ಲಿ ಕೊಟ್ಟ ಹೇಳಿಕೆಯಿಂದಾಗಿ: ಅವರು ಇತ್ತೀಚೆಗೆ ಲಂಡನ್‌ಗೆ ಹೋಗಿದ್ದಾಗ ಒಮ್ಮೆಲೇ ತಮ್ಮ ಮಗನ ವಿಳಾಸ ನೆನಪಾಗದೇ ವಲಸೆ ಫಾರ್ಮ್‌ನಲ್ಲಿ ತಮ್ಮ ಮಗಳು ಮತ್ತು ಅಳಿಯನ, ಎಂದರೆ ಬ್ರಿಟನ್ ಪ್ರಧಾನಿ ರಿಶಿ ಸುನಕ್ (Rishi Sunak) ಅವರ, ವಿಳಾಸವಾದ ’10 ಡೌನಿಂಗ್ ಸ್ಟ್ರೀಟ್’ ಎಂದು ಕೊಟ್ಟಾಗ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗೆ ಗೊಂದಲವಾಯಿತಂತೆ. ತನ್ನ ಸರಳವಾದ ಉಡುಪಿನಿಂದಲೇ ಹೀಗಾದದ್ದು ಎನ್ನುವುದು ಅವರ ವಾದ!

ಇದನ್ನೂ ಓದಿ : Viral Video: ಸೆರಗನ್ನು ಮೇಲೇರಿಸಿಕೊಳ್ಳಿ!; ನೈತಿಕ ಶಿಕ್ಷಕರಿಗೆ ಗಾಯಕಿಯ​ ಮಾತಿನಚಾಟಿ, ನೋಡಿ ವಿಡಿಯೋ

ಸುಧಾ ಮೂರ್ತಿಯವರ ಈ ರೀತಿಯ ಹೇಳಿಕೆ ಇದು ಮೊದಲನೆಯದೇನಲ್ಲ. ಸರಳತೆ ಒಳ್ಳೆಯದೇ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಸರಳತೆಯ ಪ್ರದರ್ಶನವಾಗಬಾರದು, ಅದೇ ಆಡಂಬರದಂತೆ ತೋರಬಾರದು. ಹಾಗಾದಾಗ ಟ್ವೀಟಿಗರು ರೊಚ್ಚಿಗೆದ್ದು ಟ್ರೋಲ್ ಮಾಡಿಯೇ ಮಾಡುತ್ತಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಮೆಚ್ಚಿನ ಮೀಮ್ ಅಥವಾ ಟ್ವೀಟ್ ಯಾವುದೆಂದು ಪ್ರತಿಕ್ರಿಯಿಸಿ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:23 pm, Fri, 26 May 23

ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ