Viral Video: ಬೆಂಗಳೂರಿನ ಟ್ರಾಫಿಕ್​​ನಲ್ಲಿ ಆಟೋ ಚಾಲಕನ ಮಡಿಲಲ್ಲಿ ಪುಟ್ಟ ಕಂದಮ್ಮನಂತೆ ಕುಳಿತು ಪ್ರಯಾಣಿಸಿದ ಶ್ವಾನ

ಆಟೋ ಚಾಲಕರೊಬ್ಬರು ತಮ್ಮ ನಾಯಿಯನ್ನು ಮಡಿಲಿನಲ್ಲಿ ಕೂರಿಸಿಕೊಂಡು ಆಟೋದಲ್ಲಿ ಪಯಣಿಸುವ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಹರಿದಾಡುತ್ತಿದ್ದು, ಬೆಂಗಳೂರಿನ ಟ್ರಾಫಿಕ್ ವೇಳೆ ಈ ಸುಂದರ ವೀಡಿಯೋವನ್ನು ಚಿತ್ರೀಕರಿಸಲಾಗಿದೆ.

Viral Video: ಬೆಂಗಳೂರಿನ ಟ್ರಾಫಿಕ್​​ನಲ್ಲಿ ಆಟೋ ಚಾಲಕನ ಮಡಿಲಲ್ಲಿ ಪುಟ್ಟ ಕಂದಮ್ಮನಂತೆ ಕುಳಿತು ಪ್ರಯಾಣಿಸಿದ ಶ್ವಾನ
ವೈರಲ್​​ ವೀಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:May 26, 2023 | 3:47 PM

ಮನುಷ್ಯ ಮತ್ತು ನಾಯಿಗಳ ನಡುವೆ ಒಂದೊಳ್ಳೆ ಭಾಂದವ್ಯವಿದೆ. ಹೆಚ್ಚಿನವರು ನಾಯಿಯನ್ನು ಸಾಕಲು, ಅವುಗಳ ಜೊತೆ ಸ್ನೇಹ ಬೆಳೆಸಿಕೊಳ್ಳಲು ಇಷ್ಟಪಡುತ್ತಾರೆ. ನಾಯಿಗಳು ಅಷ್ಟೇ ತನ್ನ ಮಾಲೀಕರಿಗೆ ಹೆಚ್ಚಿನ ಪ್ರೀತಿಯನ್ನು ತೋರುತ್ತಾ, ನಿಷ್ಠಾವಂತವಾಗಿರುತ್ತವೆ. ಪ್ರಸ್ತುತ ದಿನಗಳಲ್ಲಿ ಹೆಚ್ಚಿನವರು ನಾಯಿಗಳನ್ನು ತಮ್ಮ ಮಕ್ಕಳಂತೆ ಸಾಕುತ್ತಾರೆ. ಅವುಗಳನ್ನು ಮಕ್ಕಳಂತೆ ಎತ್ತಿಕೊಂಡು ಮುದ್ದಾಡುತ್ತಿರುತ್ತಾರೆ. ಹೀಗೆ ನಾಯಿಗಳು ಹಾಗೂ ಮನುಷ್ಯನ ನಡುವಿನ ಪ್ರೀತಿ ಭಾಂಧವ್ಯವನ್ನು ತೋರಿಸುವ ಅದೆಷ್ಟೋ ವಿಡಿಯೋಗಳು ಸಾಮಾಜಿಕಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಅವುಗಳಲ್ಲಿ ಕೆಲವು ಭಾವನಾತ್ಮಕ ವೀಡಿಯೋಗಳು ಕಣ್ಣಂಚಿನಲ್ಲಿ ನೀರು ತರಿಸುವಂತಿರುತ್ತವೆ. ಅಂತಹದ್ದೇ ಒಂದು ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಾಲೀಕರೊಬ್ಬರು ನಾಯಿಯನ್ನು ತಮ್ಮ ಮಡಿಲ ಮೇಲೆ ಕೂರಿಸಿಕೊಂಡು ಆಟೋದಲ್ಲಿ ಪಯಣಿಸುವುದನ್ನು ಕಾಣಬಹುದು.

ಈ ವೈರಲ್ ವೀಡಿಯೋವನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದ್ದು, ಟ್ರಾಫಿಕ್ ವೇಳೆ ಎಲ್ಲಾ ವಾಹನಗಳಂತೆ ಒಂದು ಆಟೋ ಕೂಡಾ ನಿಂತಿತ್ತು. ಅದರಲ್ಲಿ ವಿಶೇಷವೇನೆಂದರೆ, ಆ ಆಟೋದ ಚಾಲಕನ ಮಡಿಲಲ್ಲಿ ಮಗುವಿನಂತೆ ಒಂದು ಮುಗ್ಧ ಮನಸ್ಸಿನ ನಾಯಿ ಕುಳಿತುಕೊಂಡಿತ್ತು. ಮತ್ತು ಆ ಆಟೋ ಚಾಲಕ ಒಂದು ಬಟ್ಟೆಯನ್ನು ತೆಗೆದುಕೊಂಡು ನಾಯಿಯ ಮುಖವನ್ನು ಒರೆಸುತ್ತಾ, ಕಾಳಜಿವಹಿಸುತ್ತಿರುವ, ನಿಷ್ಕಲ್ಮಶ ಪ್ರೀತಿಯ ದೃಶ್ಯಾವಳಿಯನ್ನು ವೀಡಿಯೋದಲ್ಲಿ ಕಾಣಬಹುದು. ಈ ದೃಶ್ಯವನ್ನು ಅಲ್ಲೇ ಟ್ರಾಫಿಕ್ ನಲ್ಲಿ ಸಿಳುಕಿದ್ದ ಇನ್ನೊಬ ವ್ಯಕ್ತಿ ಚಿತ್ರೀಕರಿಸಿ ಇನ್ಸ್ಟಾಗ್ರಾಮ್ ನಲ್ಲಿ ಹರಿಬಿಟ್ಟಿದ್ದಾರೆ. ಇಲ್ಲಿ ನಾಯಿ ಮತ್ತು ಆಟೋ ಚಾಲಕನ ಪರಿಶುದ್ಧ ಪ್ರೀತಿ ಭಾಂದವ್ಯ ಎದ್ದು ಕಾಣುತ್ತದೆ.

View this post on Instagram

A post shared by A L K A P A L (@alka_itis)

ಇದನ್ನೂ ಓದಿ:Viral Video: ಮನುಷ್ಯರ ಜೊತೆಗೆ ಪುಟ್ಟ ಹಕ್ಕಿಯೊಂದರ ಸ್ನೇಹ ನೋಡಿ

ವೀಡಿಯೋವನ್ನು ಆಲ್ಕ ಪಾಲ್ (@alka_itis) ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋ ಸುಮಾರು 2.4 ಮಿಲಿಯನ್ ವೀಕ್ಷಣೆಗಳನ್ನು ಮತ್ತು 407k ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ‘ತುಂಬಾ ಸುಂದರ ಬಂಧ, ಆದರೆ ಸುಡುವ ಬಿಸಿಲಿಗೆ ನಾಯಿಯನ್ನು ಹೊರಗೆ ಕರೆದುಕೊಂಡು ಹೋಗುವುದು ಒಳ್ಳೆಯದಲ್ಲ’ ಎಂದು ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಆ ಆಟೋ ಚಾಲಕ ನನ್ನ ಗೌರವವನ್ನು ಗಳಿಸಿದರು’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಅದ್ಭುತ, ಆಟೋ ಚಾಲಕ ಹೃದಯ ಶ್ರೀಮಂತ’ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:47 pm, Fri, 26 May 23

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್