AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮನುಷ್ಯರ ಜೊತೆಗೆ ಪುಟ್ಟ ಹಕ್ಕಿಯೊಂದರ ಸ್ನೇಹ ನೋಡಿ

ಪ್ರವಾಸಿಗರ ಗುಂಪೊಂದು ಸಮುದ್ರದ ಮಧ್ಯದಲ್ಲಿ ಪುಟ್ಟ ಹಕ್ಕಿಯೊಂದಿಗೆ ಸ್ನೇಹ ಬೆಳೆಸಿ ಅದರೊಂದಿಗೆ ಸಮಯ ಕಳೆಯುವ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹರಿಬಿಡಲಾಗಿದ್ದು, ಈ ನಿಷ್ಕಲ್ಮಶ ಸ್ನೇಹಕ್ಕೆ ನೆಟ್ಟಿಗರು ಮನಸೋತಿದ್ದಾರೆ.

Viral Video: ಮನುಷ್ಯರ ಜೊತೆಗೆ ಪುಟ್ಟ ಹಕ್ಕಿಯೊಂದರ ಸ್ನೇಹ ನೋಡಿ
ವೈರಲ್​​ ವೀಡಿಯೊ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: May 26, 2023 | 1:15 PM

ಸ್ನೇಹಕ್ಕೆ ಯಾವುದೇ ಗಡಿ ಇಲ್ಲ. ಮನುಷ್ಯ ಮನುಷ್ಯರೊಂದಿಗೆ ಸ್ನೇಹ ಮಾಡುವುದು ಮಾತ್ರವಲ್ಲದೆ ಪ್ರಾಣಿಗಳ ಜೊತೆಗೂ ಸ್ನೇಹ ಮಾಡಿಕೊಳ್ಳುತ್ತಾರೆ. ಆ ಮುಗ್ಧ ಜೀವಿಗಳ ಸ್ನೇಹ ಪವಿತ್ರವಾದದ್ದು. ಅವುಗಳು ಯಾವುದೇ ಸ್ವಾರ್ಥ ಭಾವನೆಯಿಲ್ಲದೆ ಮನುಷ್ಯರ ಜೊತೆಗೆ ಸ್ನೇಹ ಮಾಡಿಕೊಳ್ಳುತ್ತವೆ. ನಾಯಿ, ಬೆಕ್ಕು ಇತರ ಪ್ರಾಣಿಗಳು ಮನುಷ್ಯರ ಜೊತೆಗೆ ಸ್ನೇಹ ಮಾಡಿಕೊಳ್ಳುವುದನ್ನು ಸಾಮಾನ್ಯವಾಗಿ ನಾವೆಲ್ಲರೂ ನೋಡಿರುತ್ತೇವೆ. ಆದರೆ ಪಕ್ಷಿಗಳು ಮನುಷ್ಯರ ಜೊತೆಗೆ ಸ್ನೇಹ ಮಾಡಿಕೊಳ್ಳುವುದನ್ನು ನೀವು ಎಂದಾದರೂ ನೋಡಿದ್ದೀರಾ? ಹೆಚ್ಚಾಗಿ ಪಕ್ಷಿಗಳು ಮನುಷ್ಯರನ್ನು ಕಂಡರೆ ಹಾರಿ ಹೋಗುತ್ತವೆ. ಆದರೆ ಇಲ್ಲೊಂದು ಪುಟ್ಟ ‘ವಾರ್ಬ್ಲರ್’ ಹಕ್ಕಿಯೊಂದು ಮನುಷ್ಯರ ಜೊತೆಗೆ ಸ್ನೇಹ ಮಾಡಿಕೊಳ್ಳುವ ಅದ್ಭುತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೆ.

ಈ ವೀಡಿಯೋವನ್ನು ಡೊಮೆನಿಕ್ ಬಿಯಾಗಿನಿ (@dolphindronedom) ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಸಮುದ್ರದ ಮಧ್ಯದಲ್ಲಿ ನಾವು 50 ಮೈಲಿಗಳಷ್ಟು ದೂರದಲ್ಲಿ ಪುಟ್ಟ ಸ್ನೇಹಿತನನ್ನು ಮಾಡಿಕೊಂಡ ಕಥೆ ಇಲ್ಲಿದೆ ಎಂದು ಬರೆದುಕೊಂಡಿದ್ದಾರೆ. ಒಂದಿಷ್ಟು ಪ್ರವಾಸಿಗರು ಸಮುದ್ರದ ಮಧ್ಯದಲ್ಲಿ ದೋಣಿಯಲ್ಲಿ ವಿಹರಿಸುತ್ತಿರುತ್ತಾರೆ. ಗಾಳಿಯ ರಭಸಕ್ಕೆ ಅಲ್ಲಿಗೆ ಬಂದ ಪುಟ್ಟ ವಲಸೆ ಹಕ್ಕಿಯೊಂದು ಪ್ರವಾಸಿಗರ ಹೆಗಲ ಮೇಲೆ, ತಲೆಯ ಮೇಲೆ ಕುಳಿತುಕೊಳ್ಳುತ್ತಾ ಅವರ ಜೊತೆ ಸ್ನೇಹ ಬೆಳೆಸಿಕೊಳ್ಳುತ್ತದೆ. ಹಕ್ಕಿಯ ಸ್ನೇಹಪರತೆಯನ್ನು ಕಂಡು ಅವರೆಲ್ಲರಿಗೂ ಸಂತೋಷವಾಗುತ್ತದೆ. ಆ ಹಕ್ಕಿಯನ್ನು ಸುರಕ್ಷಿತ ಸ್ಥಳದಲ್ಲಿ ಬಿಡಬೇಕು ಎನ್ನುವ ಉದ್ದೇಶದಿಂದ ಪ್ರವಾಸಿಗರ ಗುಂಪಿನಲ್ಲಿದ ಮಹಿಳೆಯೊಬ್ಬರು ಆ ಹಕ್ಕಿಯನ್ನು ಟೋಪಿಯಲ್ಲಿ ಜೋಪಾನವಾಗಿ ಇಟ್ಟುಕೊಂಡು, ದೋಣಿಯಿಂದ ಇಳಿದು, ನಂತರ ಮರಗಿಡಗಳಿರುವ ಪ್ರದೇಶಕ್ಕೆ ಹೋಗಿ, ಅಲ್ಲಿದ್ದ ಒಂದು ಗಿಡದ ಮೇಲೆ ಹಕ್ಕಿಯನ್ನು ಕೂರಿಸಲು ಪ್ರಯತ್ನಪಡುತ್ತಾರೆ. ಆದರೆ ಮೊದಮೊದಲು ಆ ಹಕ್ಕಿ ಅವರ ಕೈಯಿಂದ ಇಳಿಯಲು ಒಲ್ಲೆ ಎಂದಿತು. ನಂತರ ಹೇಗಾದರೂ ಗಿಡದ ಮೇಲೆ ಕುಳಿತುಕೊಳ್ಳುತ್ತದೆ, ಆ ಮಹಿಳೆ ಅಲ್ಲಿಂದ ಹೋಗುವಾಗ ಅವರನ್ನೇ ಇಣುಕಿ ನೋಡುವ ಸುಂದರ ದೃಶ್ಯವನ್ನು ಈ ವೀಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ ;Viral Video: ‘ಸೆರಗನ್ನು ಮೇಲೇರಿಸಿಕೊಳ್ಳಿ!’ ನೈತಿಕ ಶಿಕ್ಷಕರಿಗೆ ಗಾಯಕಿಯ​ ಮಾತಿನಚಾಟಿ, ನೋಡಿ ವಿಡಿಯೋ

ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾದ ವೀಡಿಯೋ 3.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 435k ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಲವಾರು ಕಮೆಂಟ್ಸ್ ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರು ‘ನಾನು ಹಕ್ಕಿಯ ಜೊತೆಗೆ ಹೇಗೆ ಸ್ನೇಹ ಬೆಳೆಸುವುದು ಹೇಳಿ ಕೊಡುವಿರಾ’ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಆ ಹಕ್ಕಿ ಶಾಶ್ವತವಾಗಿ ನಿಮ್ಮ ಜೊತೆ ಉಳಿಯಲು ಬಯಸುತ್ತಿದ್ದೆ’ ಎಂದು ಕಮೆಂಟ್ ಮಾಡಿದ್ದಾರೆ. ಹೆಚ್ಚಿನವರು ತುಂಬಾ ಮುದ್ದಾದ ವೀಡಿಯೋ ಎಂದು ಹೇಳುವ ಮೂಲಕ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ