Viral Video: ‘ಸೆರಗನ್ನು ಮೇಲೇರಿಸಿಕೊಳ್ಳಿ!’ ನೈತಿಕ ಶಿಕ್ಷಕರಿಗೆ ಗಾಯಕಿಯ ಮಾತಿನಚಾಟಿ, ನೋಡಿ ವಿಡಿಯೋ
Moral Teachers : 'ನೀವೇನು ನನ್ನ ಉಡುಪಿನ ವಿನ್ಯಾಸಕರೆ, ನನ್ನ ಗಂಡನಾಗುವವರೆ? ನೀವೇಷ್ಟೇ ಟ್ರೋಲ್ ಮಾಡಿ ನನಗೇನು? ಸಂಗೀತ ನನ್ನ ಬದುಕು’ ಎನ್ನುವ ಆಕಾಂಕ್ಷಾ ಗ್ರೋವರ್ ಬೈಠಕ್ ಸಂಸ್ಕೃತಿಯನ್ನು ಮತ್ತೆ ಚಾಲ್ತಿಗೆ ತರಲು ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಾರೆ.
Hindustani Classical Artist : ನಿಮ್ಮ ಸೆರಗನ್ನು ಸ್ವಲ್ಪ ಮೇಲೇರಿಸಿಕೊಳ್ಳಬಹುದೆ? ನಿಮ್ಮ ಪಾದಗಳು ಮುಚ್ಚುವಂತೆ ಸೀರೆ ಉಡಬಹುದೆ? ಮೈಪೂರ್ತಿ ಮುಚ್ಚುವಂಥ ಬಟ್ಟೆ ಧರಿಸಬಹುದೆ? ಎಂದು ಕೇಳುತ್ತೀರಲ್ಲ, ನಾನೇನು ಧರಿಸುತ್ತೇನೋ ಬಿಡುತ್ತೇನೋ ಅದೆಲ್ಲ ನಿಮಗೆ ಏಕೆ? ನನ್ನಿಚ್ಛೆಯಂತೆ ಉಡುತ್ತೇನೆ, ನೀವೇನು ನನ್ನ ಉಡುಪಿನ ವಿನ್ಯಾಸಕರೆ? ನನ್ನ ಗಂಡನಾಗುವವರೆ? ಎಂದು ಸಂಸ್ಕೃತಿ ರಕ್ಷಕರಿಗೆ ಖಡಕ್ಕಾಗಿ ಆವಾಝ್ ಹಾಕಿದ್ದಾರೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ ಆಕಾಂಕ್ಷಾ ಗ್ರೋವರ್ (Akanksha Grover). ಮೂಲತಃ ಫರೀದಾಬಾದ್ನವರಾದ ಈಕೆ ಸದ್ಯ ವಾಸಿಸುತ್ತಿರುವುದು ಹಿಮಾಚಲ ಪ್ರದೇಶದಲ್ಲಿ. ಈ ಕೆಳಗಿನ ವಿಡಿಯೋ ನೋಡಿ.
ಇದನ್ನೂ ಓದಿView this post on Instagram
ಹಿಂದೂಸ್ತಾನಿ ಶಾಸ್ತ್ರೀಯ ಮತ್ತ ಲಘು ಸಂಗೀತ ಕಲಾವಿದೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ಸಂಗೀತದಲ್ಲಿ ಪದವಿ ಪಡೆದ ಈಕೆ ತಾನೊಬ್ಬ ‘ಸ್ವತಂತ್ರ ಕಲಾವಿದೆ’ ಎಂದು ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಕಲಾವಿದರು ಮೂಲತಃ ಸ್ವತಂತ್ರ ಮನಸ್ಥಿತಿಯವರು, ಮತ್ತೇನದರಲ್ಲಿ ಸ್ವತಂತ್ರ ಎಂದು ಹೇಳುವ ಅವಶ್ಯಕತೆ ಇದೆ? ಎಂದು ನಿಮಗನ್ನಿಸಬಹುದು. ಈಕೆ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಬೈಠಕ್ಗಳ ಝಲಕ್ಗಳನ್ನು ಹಾಕಿದಾಗೆಲ್ಲಾ ಅನೇಕರು ಈಕೆಯ ಭಾವಪೂರ್ಣ ಗಾಯನಕ್ಕೆ ಮಾರುಹೋಗಿ ತುಂಬುಹೃದಯದಿಂದ ಪ್ರತಿಕ್ರಿಯಿಸುತ್ತಾರೆ. ಆದರೆ ನೈತಿಕ ಬೋಧಕರು ಅಲ್ಲಿಯೂ ನುಸುಳಿ ಸಂಸ್ಕೃತಿ ಪಾಠ ಶುರುಮಾಡಿಬಿಡುತ್ತಾರೆ! ಅಂಥವರಿಗಾಗಿ ಈಕೆ ಈ ಮೇಲಿನ ವಿಡಿಯೋ ಮಾಡಿರುವುದು.
View this post on Instagram
ಆಕಾಂಕ್ಷಾ ಸಂಗೀತವೊಂದೇ ತನ್ನ ಬದುಕು ಎಂದು ಬದುಕುತ್ತಿರುವಾಕೆ. ಹಿರಿಯ ಹಿಂದೂಸ್ತಾನಿ ಕಲಾವಿದೆ ಶಾಶ್ವತಿ ಮಂಡಲ್ (Shasvati Mandal) ಅವರ ಶಿಷ್ಯೆ. ಕೊರೊನಾದಿಂದಾಗಿ ಅನೇಕ ಕಲಾವಿದರಿಗೆ ಡಿಜಿಟಲ್ ಮಾಧ್ಯಮವೇ ಆಸರೆ ಎನ್ನಿಸುವ ಸಂದರ್ಭದಲ್ಲಿಯೇ ಈಕೆ ಫೇಸ್ಬುಕ್, ಇನ್ಸ್ಟಾಗ್ರಾಂ ಮೂಲಕ ಸಂಗೀತಾಸಕ್ತರ ಗಮನ ಸೆಳೆದಾಕೆ. ಬೈಠಕ್ ಸಂಸ್ಕೃತಿಯನ್ನು ಮತ್ತೆ ಚಾಲ್ತಿಗೆ ತರುವಲ್ಲಿ ಆಸ್ಥೆ ವಹಿಸುತ್ತಿದ್ದೇನೆ ಎನ್ನುತ್ತಿರುವಾಕೆ. ಆಸಕ್ತರೆದುರು ಗಝಲ್, ಹಳೆಯ ಹಿಂದಿ ಚಿತ್ರಗೀತೆಗಳಿಗೆ ದನಿಯಾಗುತ್ತಿರುವಾಕೆ.
View this post on Instagram
ಸಂಗೀತ ಜಗತ್ತಿನ ಭಾಷೆಯಾಗಬೇಕು ಎನ್ನುವ ಈಕೆ ಸಮಾನತೆಯಲ್ಲಿ ನಂಬಿಕೆ ಉಳ್ಳಾಕೆ. ಹುಟ್ಟಿದ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕಿದೆ ಎನ್ನುವುದನ್ನು ತನ್ನ ಸಂಗೀತ, ಜೀವನಶೈಲಿ ಮತ್ತು ವಿಚಾರಗಳೊಂದಿಗೆ ಅತ್ಯಂತ ಪ್ರಜ್ಞಾಪೂರ್ವಕವಾಗಿ ಹೆಜ್ಜೆ ಇಡುತ್ತಿರುವಾಕೆ. ‘ಸೀಕ್ರೇಟ್ ಬೈಠಕ್’ ಎಂಬ ಪರಿಕಲ್ಪನೆಯಡಿ ಸದ್ಯ ಲತಾ ಮಂಗೇಶ್ಕರ್, ಆಶಾ ಭೋಸ್ಲೆ ಹಾಡುಗಳೊಂದಿಗೆ ಗಝಲ್ಗಳನ್ನು ಈಕೆ ಹಾಡುತ್ತಿರುವಾಕೆ.
ಇದನ್ನೂ ಓದಿ : Viral Video: ಶಾಲಿನಿಯ ಲೈಫ್ ಇಷ್ಟೇನೇ ಸಲಹಾ ಕೇಂದ್ರಕ್ಕೆ ನಿಮಗೆ ಸ್ವಾಗತ!
ಮುಂದಿನ ಬೈಠಕ್ ಯಾವ ಊರು, ಮಹಾನಗರದಲ್ಲಿ ಎಂದು ಈಕೆ ಕೆಲ ದಿನಗಳ ಮೊದಲೇ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಈಕೆ ನೀಡುತ್ತಾರೆ. ಕಾದು ಕುಳಿತ ಈಕೆಯ ಕಲಾಭಿಮಾನಿಗಳು ವಾರಾಂತ್ಯದಲ್ಲಿ ನಡೆಯಲಿರುವ ಬೈಠಕ್ ಟಿಕೆಟ್ ಬುಕ್ ಮಾಡಿಬಿಡುತ್ತಾರೆ. ಬೈಠಕ್ನಲ್ಲಿ ಈಕೆಯೊಬ್ಬರೇ ಹಾಡುವುದಿಲ್ಲ. ಈಕೆಯೊಂದಿಗೆ ನೆರೆದವರೆಲ್ಲರೂ ಒಟ್ಟಾಗಿ ಹಾಡುತ್ತ ಗಾನಲೋಕದಲ್ಲಿ ವಿಹರಿಸುತ್ತಾರೆ. ಬೆಂಗಳೂರಿನಲ್ಲಿಯೂ ಇವರ ಬೈಠಕ್ಗಳು ನಡೆದಿವೆ.
View this post on Instagram
ತನ್ನತನದ ಬಗ್ಗೆ ಆಳವಾದ ಅರಿವು ಹೊಂದಿರುವ ಈಕೆ ಪ್ರತಿಯೊಂದನ್ನೂ ತನ್ನಿಚ್ಛೆಯಂತೆ ಬದುಕುತ್ತಿರುವಾಕೆ. ಹೆಣ್ಣೆಂದರೆ ಹೀಗೇ ಇರಬೇಕು, ಕಲಾವಿದರೆಂದರೆ ಹೀಗೇ ಇರಬೇಕು ಎಂದು ಶಾಸ್ತ್ರಾಧಾರಿತ ಹೇರಿಕೆಗಳನ್ನು ಬೇಕೆಂದೇ ಇಳಿಸುವ ಪಣ ತೊಟ್ಟಂತೆ ಬದುಕುತ್ತಿರುವ ಕಲಾವಿದೆ ಮತ್ತು ಮಹಿಳಾವಾದಿ. ಕಲೆ ಎನ್ನುವುದೊಂದೇ ನಮ್ಮೆಲ್ಲರ ತಂತುವಾಗಲಿ. ಆಕಾಂಕ್ಷಾಗೆ ಶುಭವಾಗಲಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:05 pm, Fri, 26 May 23