Veg Cutter : ಮನೆಯಲ್ಲಿ ನಾಲ್ಕು ಬೆಳ್ಳುಳ್ಳಿ ಸುಲಿದು ಕೊಡು ಎಂದಾಗ ಯಾವುದೋ ಫೋನ್ ಬಂತು ಇರು ಎಂದು ಹೋಗಬೇಕಿಲ್ಲ. ಇದಿಷ್ಟು ಬೀನ್ಸ್ ಸುಲಿದು ಕೊಡು ಎಂದಾಗ ಅಯ್ಯೋ ತಲೆನೋವು ಎಂದು ನೆಪ ಹೇಳಬೇಕಿಲ್ಲ. ಶುಂಠಿ ಸಿಪ್ಪೆ ತೆಗೆದುಕೊಡು ಎಂದಾಗ ನನ್ನ ಫ್ರೆಂಡ್ ಕರೀತಿದಾರೆ ಎಂದು ಹೊರಹೋಗಬೇಕಿಲ್ಲ. ಈಗ ಯಾರೂ ಕೂಡ ಸುಲಭವಾಗಿ ಚಕಚಕನೆ ತರಕಾರಿಗಳನ್ನು ಕತ್ತರಿಸಬಹುದು, ಸೋಸಬಹುದು, ಸುಲಿಯಬಹುದು ಆದರೆ ನಿಮ್ಮ ಹೆಬ್ಬೆರಳಿಗೆ ಇಂಥದೊಂದು ಸಾಧನವಿದ್ದಲ್ಲಿ!
View this post on Instagram
ಇನ್ಸ್ಟಾಗ್ರಾಮಿಗರು ಈ ವಿಡಿಯೋ ನೋಡಿ ಹುಚ್ಚೆದ್ದು ಪ್ರತಿಕ್ರಿಯಿಸುತ್ತಿದ್ದಾರೆ. ಆಹ್ ಇದು ನನ್ನ ಐದು ಬೆರಳಿಗೂ ಬೇಕು ಎಂದು ಹಲವಾರು ಜನ ತಮಾಷೆ ಮಾಡುತ್ತಿದ್ಧಾರೆ. Peter Piper picked a peck of pickled peppers from the pepper patch ಎಂದು ಒಬ್ಬರು ಟಂಗ್ ಟ್ವಿಸ್ಟರ್ ನೆನಪಿಸಿಕೊಂಡಿದ್ದಾರೆ. ಏನೇನೋ ಶೋಧಿಸುತ್ತಿದ್ದೇವೆ, ಆದರೆ ನಾವಿನ್ನೂ ಆತ್ಮರಕ್ಷಣೆಯ ಸಾಧ್ಯತೆಗಳನ್ನು ಹುಡುಕುವುದಕ್ಕೆ ಶುರುಮಾಡಿಲ್ಲ ಎಂದಿದ್ದಾರೆ ಇನ್ನೂ ಒಬ್ಬರು. ನಾನಂತೂ ಈ ಸಾಧನವನ್ನು ಖರೀದಿಸುತ್ತೇನೆ ಎಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ : Viral Video: ಬಿಹಾರಿ ಮಗುವಿಗೆ ಬಂದಿದ್ದು ಕನ್ನಡಜ್ವರ! ಸೃಷ್ಟಿ ಡಾಕ್ಟರ್ ಕೊಟ್ಟ ಔಷಧಿ ಏನು?
ತಂತ್ರಜ್ಞಾನ, ತಾಂತ್ರಿಕ ಸಾಧನ ಮತ್ತು ಆನ್ಲೈನ್ ಮಾರುಕಟ್ಟೆ ಇವುಗಳ ವ್ಯಾಪ್ತಿ ಇಂದು ಊಹಿಸಲಸಾಧ್ಯ. ಯಾವ ಕೆಲಸವನ್ನೂ ಸುಲಭವಾಗಿ ಪೂರೈಸಲು ಅನುಕೂಲವಾಗುವಂಥ ಸಾಧನಗಳ ಸರಕು ಈವತ್ತು ತುದಿಬೆರಳಲ್ಲಿ ಆಡುತ್ತಿದೆ. ಸಣ್ಣಪುಟ್ಟ ಕೈಗಾರಿಕೆಗಳು ಇಂದು ಲೆಕ್ಕವಿಲ್ಲದಷ್ಟು ತಲೆಎತ್ತಿನಿಂತಿವೆ.
ಇದನ್ನೂ ಓದಿ : Viral Video: ಈ ಧಗೆಯಲ್ಲಿ ಪ್ರೇಮಿಗಳಿಗೆ ತಂಪನೆರೆಯುವ ಪ್ರಗತಿ ಬಡಿಗೇರಳ ಈ ಭಾವಗೀತೆ
ವೇಗದ ಜೀವನಶೈಲಿ ಕೊಳ್ಳುಬಾಕುತನ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿದೆ. ನಿಂತರೆಲ್ಲಿ ಕೊಳೆತುಹೋಗುತ್ತೇವೆ ಎಂಬಂತೆ ಕಾಲದೊಂದಿಗೆ ಕಾಲು ಹಾಕುವುದು ಇಂದಿನ ಅನಿವಾರ್ಯವಾಗಿದೆ. ಈ ಬಗ್ಗೆ ಜಾಸ್ತಿ ಬರೆದರೆ ನಿಮಗೆ ಓದಿಗೆ ಪುರಸೊತ್ತಿಲ್ಲ. ಮೆಣಸಿನಕಾಯಿ ಹೆಚ್ಚುವುದಿದೆ, ಬೆಳ್ಳುಳ್ಳಿ ಸುಲಿಯುವುದಿದೆ, ಹಣ್ಣು ಬಿಡಿಸುವುದಿದೆ ಇನ್ನೂ ಏನೇನೋ!
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ