Viral: ಲಾಟರಿಯಲ್ಲಿ ಗೆದ್ದ ರೂ. 82 ಲಕ್ಷವನ್ನು ಶಾಲಾ ಮಕ್ಕಳಿಗೆ ಸಹಾಯ ಮಾಡುತ್ತೇನೆ
Africa : ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಕ್ರ್ಯಾಚ್ ಕಾರ್ಡ್ ಖರೀದಿಸಲು ಇದು ಮುಖ್ಯ ಕಾರಣವಾಗಲಿದೆ. ನನ್ನ ಊರಿನಲ್ಲಿರುವ ಶಾಲಾ ಮಕ್ಕಳಿಗೆ ಕೊಠಡಿಗಳನ್ನು ನಿರ್ಮಿಸುವ ಕನಸು ಇದರಿಂದ ಈಡೇರಲಿದೆ ಎಂದಿದ್ದಾನೆ ಈ ವ್ಯಕ್ತಿ.
Lottery : ಲಕ್ಷಗಟ್ಟಲೆ ಲಾಟರಿ ಹೊಡೆದರೆ ನೀವೇನು ಮಾಡುತ್ತೀರಿ? ಇಷ್ಟು ದಿನ ಕಂಡ ಕನಸು, ಆಸೆಗಳನ್ನೆಲ್ಲ ಆಗು ಮಾಡಿಕೊಳ್ಳಲು ತೊಡಗಿಕೊಳ್ಳುತ್ತೀರಿ ಅಲ್ಲವೆ? ಆದರೆ ಇಲ್ಲೊಬ್ಬ ವ್ಯಕ್ತಿಯ ನಡೆ ಗಮನಿಸಿ. ಆಫ್ರಿಕಾದ ಈ ವ್ಯಕ್ತಿ ಲಾಟರಿಯ ಮೂಲಕ ರೂ. 82 ಲಕ್ಷ ಗೆದ್ದಿದ್ದಾನೆ. ಗೆದ್ದ ಹಣವನ್ನು ತನ್ನ ಊರಿನ ಶಾಲಾ ಮಕ್ಕಳಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾನೆ.
ಇದನ್ನೂ ಓದಿ : Viral: ಸೊಪ್ಪುಗಳನ್ನು ಗುರುತಿಸಿ ರೂ. 5000 ನಗದು ಬಹುಮಾನ ಗೆಲ್ಲಿ; ಸ್ವಿಗ್ಗಿ ಇನ್ಸ್ಟಾಮಾರ್ಟ್ ಸ್ಪರ್ಧೆ
ಆಫ್ರಿಕಾದ ಸಾಲಿಮಾನೆ ಸನಾ ಎಂಬ ವ್ಯಕ್ತಿಯೇ ಈ ಲಾಟರಿ ಹಣ ಗೆದ್ದವನು. ಈತ ನ್ಯೂ ಬರ್ನ್ನಲ್ಲಿ ವಾಸವಾಗಿದ್ದಾನೆ. 39 ವರ್ಷದ ಈತ ನೃತ್ಯಕಲಾವಿದನಾಗಿದ್ದು ನೃತ್ಯಶಾಲೆಯನ್ನು ಹೊಂದಿದ್ದಾನೆ. ಸ್ಕ್ರ್ಯಾಚ್ ಆಫ್ ಕಾರ್ಡ್ನಲ್ಲಿ ಈ ಭಾರೀ ಮೊತ್ತವನ್ನು ಗೆದ್ದಿದ್ದಾನೆ.
ಇದನ್ನೂ ಓದಿ : Viral Video: ಶಾಲಿನಿಯ ಲೈಫ್ ಇಷ್ಟೇನೇ ಸಲಹಾ ಕೇಂದ್ರಕ್ಕೆ ನಿಮಗೆ ಸ್ವಾಗತ!
ಕಿನ್ಸ್ಟನ್ನ ವೆಸ್ಟ್ ನ್ಯೂ ಬರ್ನ್ ರಸ್ತೆಯಲ್ಲಿರುವ ನ್ಯೂಸ್ ಶಾಪ್ ಅಂಡ್ ಫ್ಯೂಯಲ್‌ನಿಂದ ಈತ ಲಾಟರಿ ಟಿಕೆಟ್ ಖರೀದಿಸಿದ್ದ. ಇದು ನಿಜಕ್ಕೂ ನನಗೆ ಸಂತೋಷವನ್ನು ತರುವಂಥ ವಿಷಯ. ಇದು ನನ್ನ ಕನಸಾಗಿತ್ತು. ಮುಂದಿನ ದಿನಗಳಲ್ಲಿ ನಾನು ಮತ್ತಷ್ಟು ಸ್ಕ್ರ್ಯಾಚ್ ಕಾರ್ಡ್ ಖರೀದಿಸಲು ಇದು ಮುಖ್ಯ ಕಾರಣವಾಗಲಿದೆ. ಇದೀಗ ನನ್ನ ಊರಿನಲ್ಲಿರುವ ಶಾಲಾ ಮಕ್ಕಳಿಗೆ ಕೊಠಡಿಗಳನ್ನು ನಿರ್ಮಿಸಲು ಸಹಾಯವಾಗಲಿದೆ ಎಂದಿದ್ದಾನೆ ಸಾಲಿಮಾನೆ.
ಇದನ್ನೂ ಓದಿ : Viral Video: ದಾರಿಬಿಡಿ ಜಿಂಕೆಟೀಚರ್ ಬಂದರು; ಸಾಲಾಗಿ ನಿಲ್ಲಿ ಎಡ್ಮಿಷನ್ ಶುರುವಾಗಿದೆ!
ಜೊತೆಗೆ ಇಲ್ಲಿಯ ಮಕ್ಕಳು ನೃತ್ಯ ಕಲಿಯುವಲ್ಲಿ ಸಾಕಷ್ಟು ಆಸಕ್ತರು. ನನ್ನ ನೃತ್ಯಶಾಲೆಯ ಮಕ್ಕಳಿಗಾಗಿಯೂ ಈ ಹಣವನ್ನು ವಿನಿಯೋಗಿಸಲಾಗುವುದು ಎಂದೂ ಆತ ಹೇಳಿದ್ದಾನೆ. ಈಗಾಗಲೇ ನಿಮಗೇನಾದರೂ ಲಾಟರಿ ಹೊಡೆದಿದ್ದರೆ ಅದನ್ನು ಹೇಗೆ ವಿನಿಯೋಗಿಸಿದ್ದೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:01 pm, Thu, 25 May 23