Viral Video: ದಾರಿಬಿಡಿ ಜಿಂಕೆಟೀಚರ್ ಬಂದರು; ಸಾಲಾಗಿ ನಿಲ್ಲಿ ಎಡ್ಮಿಷನ್ ಶುರುವಾಗಿದೆ!
Animal Love: ದನ ಇದ್ದಂಗಿದೀಯಾ, ನಾಯಿ ಥರ ಆಡ್ತೀಯಾ, ಕತ್ತೆ ಥರ ಒದರ್ತೀಯಾ ಅಂತೆಲ್ಲ ಬಯ್ದುಕೊಳ್ಳುವ ನಾವು ಇನ್ನುಮುಂದೆ ಈ ಜಿಂಕೆ ಥರ ಇರು, ಆ ಒರಾಂಗುಟಾನ್ ಥರ ಮಾಡು ಎಂದು ಪ್ರೀತಿಯಿಂದ ಹೇಳಬಹುದಲ್ಲವೆ?

Deer: ಪ್ರಾಣಿಗಳನ್ನು ದೊಡ್ಡವರೊಂದಿಗೆ ಹೇಗೆ ವರ್ತಿಸುತ್ತವೆ ಎನ್ನುವುದು ನಿಮಗೆ ಗೊತ್ತೇ ಇದೆ. ಆದರೆ ಮಕ್ಕಳೊಂದಿಗೆ ಮಾತ್ರ ಬಹಳ ಅಂತಃಕರಣದಿಂದ, ಕಾಳಜಿಯಿಂದ, ಅತೀ ಸೂಕ್ಷ್ಮವಾಗಿ ವರ್ತಿಸುತ್ತವೆ. ಅದರಲ್ಲೂ ಪುಟಾಣಿ ಮಕ್ಕಳು ಎದುರಿಗಿದ್ದರೆ ಸಂಪೂರ್ಣ ಶರಣಾಗಿಬಿಡುತ್ತವೆ. ನಿನ್ನೆಯಷ್ಟೇ ಒರಾಂಗುಟಾನ್ ಮೂರು ತಿಂಗಳ ಹಸುಳೆಯನ್ನು ಮುದ್ದಿಸಲು ಪ್ರಯತ್ನಿಸಿದ ವಿಡಿಯೋ ನೋಡಿದಿರಿ. ಇಡೀ ದಿನ ಅದರ ಗುಂಗಿನಲ್ಲೇ ನೀವು ಕಳೆದಿರಲು ಸಾಧ್ಯ. ಇದೀಗ ವಿಡಿಯೋ ನೋಡಿ. ಈ ಪೋರಿ ಜಿಂಕೆಗೆ ಬಿಸ್ಕೆಟ್ ಕೊಡುತ್ತಾಳೆ. ಮುಂದೇನಾಗುತ್ತದೆ ಈ ವಿಡಿಯೋದಲ್ಲಿ ನೋಡಿ.
ಬಿಸ್ಕೆಟ್ ಕೊಟ್ಟ ಮೇಲೆ ಆಕೆ ಅದಕ್ಕೆ ಧನ್ಯವಾದ ತಿಳಿಸುತ್ತಾಳೆ. ಅವಳಂತೆಯೇ ಅದೂ ಆಕೆಗೆ ಪ್ರತಿಧನ್ಯವಾದ ಹೇಳುತ್ತದೆ. ಆಕೆಯನ್ನೇ ಅದು ಎಂಥ ಮುದ್ಧಾಗಿ ಅನುಕರಿಸಿದೆಯಲ್ಲ? ನೆಟ್ಟಿಗರು ಈ ವಿಡಿಯೋ ನೋಡಿ ಮೂಕವಿಸ್ಮಿತರಾಗಿದ್ದಾರೆ. ಈಗಾಗಲೇ ಈ ವಿಡಿಯೋ ಅನ್ನು 2 ಲಕ್ಷಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.
ಇದನ್ನೂ ಓದಿ : Viral Video: ಶಾಲಿನಿಯ ‘ಲೈಫ್ ಇಷ್ಟೇನೇ ಸಲಹಾ ಕೇಂದ್ರ’ಕ್ಕೆ ನಿಮಗೆ ಸ್ವಾಗತ!
ಈಕೆ ಒಳ್ಳೆಯ ಟೀಚರ್. ಪ್ರಾಣಿಗಳಿಗಷ್ಟೇ ಅಲ್ಲ, ಕರುಣೆ, ದಯೆಯನ್ನು ಪ್ರಶಂಸಿಸದ ಮನುಷ್ಯರಿಗೂ ಈಕೆ ಒಳ್ಳೆಯ ಟೀಚರ್ ಆಗಬಲ್ಲಳು ಎಂದಿದ್ದಾರೆ ಕೆಲವರು. ಶಾಂತಿ ಮತ್ತು ಸೌಂದರ್ಯವೇ ಇವರಿಬ್ಬರಿಂದ ಇಲ್ಲಿ ಮೇಳೈಸಿದೆ. ಇದು ಪ್ರೀತಿಯ ಭಾಷೆ ಎಂದು ಹೇಳಿದ್ದಾರೆ ಇನ್ನೂ ಒಬ್ಬರು. ಈ ಪುಟ್ಟಿಗೆ ಯಾರನ್ನೂ ಪ್ರೀತಿಯಿಂದಲೇ ಗೆಲ್ಲುವ ಶಕ್ತಿ ಇದೆ ಎಂದಿದ್ದಾರೆ ಇನ್ನೂ ಕೆಲವರು.
ಇದನ್ನೂ ಓದಿ : Viral Video: ಊರ್ಫಿಯ ಹೊಸ ಅವತಾರ; ಸೆಗಣಿ ಮೆತ್ತಿಕೊಂಡಂತಿದೆ ಎನ್ನುತ್ತಿರುವ ನೆಟ್ಟಿಗರು
ದನ ಇದ್ದ ಹಾಗೆ ಇದ್ದೀಯಾ, ನಾಯಿ ಥರ ಆಡ್ತೀಯಾ, ಕತ್ತೆ ಥರ ಒದರ್ತೀಯಾ ಅಂತೆಲ್ಲ ಬಯ್ದುಕೊಳ್ಳುವ ನಾವು ಇನ್ನುಮುಂದೆ ಈ ಜಿಂಕೆ ಥರ ಮಾಡ್ತೀಯಾ, ಆ ಒರಾಂಗುಟಾನ್ ಥರ ಮಾಡ್ತೀಯಾ ಎಂದು ಪ್ರೀತಿಯಿಂದ ಹೇಳಬಹುದಲ್ಲವೆ? ವಾತ್ಸಲ್ಯ, ಮಮಕಾರವನ್ನು ಇನ್ನು ನಾವೆಲ್ಲ ಪ್ರಾಣಿಗಳಿಂದ ಕಲಿಯಬೇಕೇನೋ. ಏನಂತೀರಿ ನೀವು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:42 am, Thu, 25 May 23