AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಸೊಪ್ಪುಗಳನ್ನು ಗುರುತಿಸಿ ರೂ. 5000 ನಗದು ಬಹುಮಾನ ಗೆಲ್ಲಿ; ಸ್ವಿಗ್ಗಿ ಇನ್​ಸ್ಟಾಮಾರ್ಟ್​ ಸ್ಪರ್ಧೆ

Swiggy Instamart : ನಾನು ಸರಿಯಾದ ಉತ್ತರ ಹೇಳಿದ್ದೇನೆ ನನ್ನ ಅಕೌಂಟಿಗೆ ಬಹುಮಾನದ ಹಣವನ್ನು ಕಳಿಸಿ ಎಂದು ಹಲವಾರು ಜನ ಈ ಟ್ವೀಟ್​ಗೆ ಪ್ರತಿಕ್ರಿಯಿಸಿದ್ಧಾರೆ. ಆದರೆ ಬಹುಮಾನ ಪಡೆದುಕೊಂಡವರು ಎಷ್ಟು ಜನ ಇರಬಹುದು?

Viral: ಸೊಪ್ಪುಗಳನ್ನು ಗುರುತಿಸಿ ರೂ. 5000 ನಗದು ಬಹುಮಾನ ಗೆಲ್ಲಿ; ಸ್ವಿಗ್ಗಿ ಇನ್​ಸ್ಟಾಮಾರ್ಟ್​ ಸ್ಪರ್ಧೆ
ಈ ಸೊಪ್ಪುಗಳನ್ನು ಹೆಸರಿಸಿ ನಗದು ಬಹುಮಾನ ಗೆಲ್ಲಿ!
TV9 Web
| Updated By: ಶ್ರೀದೇವಿ ಕಳಸದ|

Updated on:May 25, 2023 | 12:33 PM

Share

Greens : ಶೀರ್ಷಿಕೆ ಓದಿದಾಗ ನಿಮ್ಮಲ್ಲಿ ಕೆಲವರಿಗೆ ನಗು ಬರಬಹುದು. ಆದರೆ ಇದು ನಗುವ ಸಂಗತಿಯಲ್ಲ. ಈಗಿನ ಪೀಳಿಗೆಗೆ ಹೋಟೆಲ್​ ಅಥವಾ ಅಪ್ಲಿಕೇಷನ್​ನಲ್ಲಿರುವ ಮೆನು ಸೆಲೆಕ್ಟ್​ ಮಾಡಿ ಗೊತ್ತಿರುತ್ತದೆ. ಅಂದರೆ ಖಾದ್ಯಗಳ ರುಚಿ, ಹೆಸರುಗಳು ಸಲೀಸಾಗಿ ನಾಲಗೆ ಮತ್ತು ಮೆದುಳಿನಲ್ಲಿ ಅಚ್ಚೊತ್ತಿರುತ್ತವೆ. ಆದರೆ ಯಾವ ಸಾಮಗ್ರಿಗಳಿಂದ, ತರಕಾರಿ, ಸೊಪ್ಪುಗಳಿಂದ ಏನನ್ನು ತಯಾರಿಸುತ್ತಾರೆ ಎಂಬ ಅರಿವಿರುವುದಿಲ್ಲ. ಸ್ವಿಗ್ಗಿ ಇನ್​ಸ್ಟಾಮಾರ್ಟ್​ (Swiggy Instamart) ಇಂಥವರಿಗಾಗಿ(?) ಕುತೂಹಲಕರವಾದ ಸೊಪ್ಪುಸ್ಪರ್ಧೆ ಏರ್ಪಡಿಸಿತ್ತೇ?

ಮೇ 24 ರಂದು ಇದನ್ನು ಟ್ವೀಟ್ ಮಾಡಲಾಗಿತ್ತು. ಇಲ್ಲಿರುವ ಸೊಪ್ಪುಗಳ ಹೆಸರು ಹೇಳಿದವರಿಗೆ ನಗದು ಬಹುಮಾನವನ್ನೂ ಕೊಡಲಾಗುವುದು ಎಂದು ತಿಳಿಸಲಾಗಿತ್ತು. ಆ ಪ್ರಕಾರ ನೆಟ್ಟಿಗರೊಬ್ಬರು ರೂ. 5,000 ನಗದು ಬಹುಮಾನ ಪಡೆದುಕೊಂಡರು. ಅದಕ್ಕೂ ಮುನ್ನ ಸಾಗರೋಪಾದಿಯಲ್ಲಿ ಪ್ರತಿಕ್ರಿಯೆಗಳು ಹರಿದುಬಂದವು. ಇನ್ನೂ ಬರುತ್ತಲೂ ಇವೆ.

ಇದನ್ನೂ ಓದಿ : Viral Video: ದಾರಿಬಿಡಿ ಜಿಂಕೆಟೀಚರ್ ಬಂದರು; ಸಾಲಾಗಿ ನಿಲ್ಲಿ ಎಡ್ಮಿಷನ್ ಶುರುವಾಗಿದೆ!

ಈ ತನಕ 1.8 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ಪೋಸ್ಟ್​ ನೋಡಿದ್ದಾರೆ. ಮೆಂತ್ಯೆ, ಕೊತ್ತಂಬರಿ, ಲೆಟ್ಯೂಸ್​, ಪುದೀನಾ ಎಂದು ಅನೇಕರು ಹೇಳಿದ್ದಷ್ಟೇ ಅಲ್ಲದೆ, ನನ್ನ ರೂ. 5,000 ಅಕೌಂಟಿಗೆ ಕಳಿಸಿ ಎಂದಿದ್ದಾರೆ. ನನಗೆ ಪುದೀನಾ, ಕೊತ್ತಂಬರಿ ಕಳಿಸಿ ಚಟ್ನಿ ಮಾಡಲು ಕಾಯುತ್ತಿದ್ದೇನೆ ಈವತ್ತು ತರಕಾರಿ ಪಲ್ಯ ಮಾಡಲಾಗುತ್ತಿಲ್ಲ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಶಾಲಿನಿಯ ಲೈಫ್​ ಇಷ್ಟೇನೇ ಸಲಹಾ ಕೇಂದ್ರಕ್ಕೆ ನಿಮಗೆ ಸ್ವಾಗತ!

ನನಗಂತೂ ಈ ಎಲ್ಲಾ ಸೊಪ್ಪುಗಳು ಒಂದೇ ಥರ ಕಾಣುತ್ತಿವೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇಷ್ಟೊಂದು ಜನರೆಲ್ಲರೂ ಸರಿಯಾದ ಉತ್ತರ ಹೇಳಿದ್ದಾರೆ. ಅವರೆಲ್ಲರಿಗೂ ಬಹುಮಾನ ದೊರಕುವುದೆ? ಎಂದು ಕೆಲವರು ಕೇಳಿದ್ದಾರೆ. ನಾನು ಉತ್ತರ ಹೇಳಿದ್ದೇನೆ ನನಗೆ ಹಣ ಕಳಿಸಲೇಬೇಕು ಎಂದು ಕೆಲವರು ತಮಾಷೆಯಿಂದ ಒತ್ತಾಯಿಸಿದ್ದಾರೆ.

ಚೆನ್ನಾಗಿದೆಯಲ್ಲ ಸ್ವಿಗ್ಗಿ ಇನ್​ಸ್ಟಾಮಾರ್ಟ್​ನ ಪ್ರೊಮೋಷನಲ್​ ಪೋಸ್ಟ್​​? ನೀವೇನಂತೀರಿ ಇಂಥ ಸ್ಪರ್ಧೆಗಳ ಕುರಿತು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:22 pm, Thu, 25 May 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ